ಕನ್ನಡಪ್ರಭ ವಾರ್ತೆ ಲೋಕಾಪುರ
ಪಟ್ಟಣದ ಆರ್.ಬಿ.ಜಿ. ಹೈಸ್ಕೂಲ್ ಶಾಲೆ ಆವರಣದಲ್ಲಿ ೧೯೯೭-೯೮ನೇ ಸಾಲಿನ ಎಸ್ಸೆಸ್ಸೆಲ್ಸಿ ಮತ್ತು ೧೯೯೯-೨೦೦೦ನೇ ಸಾಲಿ ಪಿಯುಸಿ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರು ಆಯೋಜಿಸಿದ್ದ ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಗುರುವಂದನೆ ಸ್ವೀಕರಿಸಿ ಮಾತನಾಡಿ, ಜೀವನದಲ್ಲಿ ಗುರಿ, ಚಲ, ಗುರುವಿನ ಆಶೀರ್ವಾದ ಇದ್ದರೆ ಮಾತ್ರ ವಿದ್ಯೆ ಕಲಿತು ಸಮಾಜದಲ್ಲಿ ಉನ್ನತ ಸ್ಥಾನ ಗಳಿಸಲು ಸಾಧ್ಯ, ನಾವು ಇಂದು ಏನಾದರು ಗಳಿಸಿದ್ದರೆ ಅದೆಲ್ಲವೂ ಈ ಸಮಾಜದಿಂದ ಗಳಿಸಿದ್ದೆ. ಹಾಗಾಗಿ ಈ ಸಮಾಜದಿಂದ ಪಡೆದ ಒಂದಿಷ್ಟಾದರೂ ನಾವು ಮತ್ತೆ ಸಮಾಜಕ್ಕೆ ವಾಪಸ್ ಮಾಡಬೇಕಾಗುತ್ತದೆ. ಆ ಮೂಲಕ ಅಕ್ಷರ ಕಲಿಸಿದ ಗುರುಗಳು, ಜನ್ಮ ಕೊಟ್ಟ ಹೆತ್ತವರು, ಆಡಿ ಬೆಳೆದ ಭೂಮಿಯ ಋಣ ತೀರಿಸಲು ಸಾಧ್ಯವಾಗುತ್ತದೆ ಎಂದರು.
ನಿವೃತ್ತ ಪ್ರಾಚಾರ್ಯ ವಿ.ಜಿ. ಸಿಗರೆಡ್ಡಿ, ಡಿ.ಎಂ. ತುಬಾಕಿ, ಎಸ್.ಎಂ. ನೀಲಿ, ವಿ.ಬಿ. ಮಾಳಿ, ಎಸ್.ಎಸ್. ಜೈನಾಪೂರ ಅಂದಿನ ಶಾಲಾ ದಿನಗಳ ಹಾಗೂ ವಿದ್ಯಾರ್ಥಿಗಳ ಕುರಿತು ಮಾತನಾಡಿದರು.ವಿವಿಧ ಕಡೆಗಳಿಂದ ಆಗಮಿಸಿದ್ದ ಹಿರಿಯ ವಿದ್ಯಾರ್ಥಿಗಳು ತಮಗೆ ಪಾಠ ಕಲಿಸಿದ ಗುರುಗಳನ್ನು ಗೌರವಿಸುವ ಮೂಲಕ ಧನ್ಯತೆ ಮರೆದು ಇತರರಿಗೆ ಮಾದರಿಯಾದರು. ಅಪರೂಪಕ್ಕೆ ಸಮ್ಮಿಲನಗೊಂಡ ಸಹಪಾಠಿಗಳೊಂದಿಗೆ ಶಾಲಾ ದಿನಗಳ ನೆನಪು ಮೆಲುಕು ಹಾಕಿ ಸಂತಸಪಟ್ಟರು. ಗುರುವಂದನಾ ಕಾರ್ಯಕ್ರಮದಲ್ಲಿ ಗುರುಗಳಿಗೆ ಪುಷ್ಪಾರ್ಚನೆ ಮಾಡಿ ಬರಮಾಡಿಕೊಂಡು. ಎಲ್ಲ ಗುರುಗಳಿಗೆ ಸನ್ಮಾನಿಸಿ, ಸ್ಮರಣೆ ಸಂಚಿಕೆ ನೀಡಿ ಗೌರವಾರ್ಪಣೆ ಮಾಡಿದರು.