ಕನ್ನಡಪ್ರಭ ವಾರ್ತೆ ಮಧುಗಿರಿ
ವಿಧಾನ ಪರಿಷತ್ ಸದಸ್ಯ ಆರ್.ರಾಜೇಂದ್ರ ಮಾತನಾಡಿ, ರಾಜ್ಯಪಾಲರು ಒಂದು ಪಕ್ಷದ ಏಜಂಟರಾಗಿ ಕಾರ್ಯ ನಿರ್ವಹಿಸುತ್ತಿದ್ದು, ಎಚ್.ಡಿ.ಕೆ. ಮುರುಗೇಶ್ ನಿರಾಣಿ, ಶಶುಕಲಾ ಜೋಲ್ಲೆ ಇನ್ನು ಅನೇಕರ ವಿರುದ್ಧ ಸಾಕಷ್ಟು ಸಾಕ್ಷ್ಯದಾರಗಳು ಮತ್ತು ಪ್ರಾಸಿಕ್ಯೂಷನ್‌ಗೆ ಲೋಕಾಯುಕ್ತ ಶೀಫಾರಸುಗಳಿವೆ. ಇವರುಗಳ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಆದರೆ ಖಾಸಗಿ ವ್ಯಕ್ತಿಗಳು ನೀಡಿದ ದೂರುಗಳನ್ನು ಪಡೆದು ಕೇವಲ 24 ಗಂಟೆಯೊಳಗೆ ಸಿಎಂ ವಿರುದ್ಧ ಶೋಕಾಸ್ ನೋಟಿಸ್ ಜಾರಿಗೊಳಿಸಿರುವ ಕ್ರಮ ಸರಿಯಲ್ಲ. ಈ ಕೂಡಲೇ ಪ್ರಾಸಿಕ್ಯೂಷನ್ ವಾಪಸ್ ಪಡೆಯುವಂತೆ ಒತ್ತಾಯಿಸಿದರು.
ಶಾಂತಲ ರಾಜಣ್ಣ, ಮುಖಂಡರಾದ ಇಂದಿರಾ, ಸುವರ್ಣಮ್ಮ, ಚಂದ್ರಮ್ಮ, ಎಂ.ಎಸ್.ಮಲ್ಲಿಕಾರ್ಜುನಯ್ಯ, ಮಿಡಿಗೇಶಿ ರಾಜ್‌ಗೋಪಾಲ್, ಆಧಿನಾರಾಯಣರೆಡ್ಡಿ, ದೃವಕುಮಾರ್, ಬಿ.ನಾಗೇಶಬಾಬು, ವಕೀಲರ ಸಂಘದ ಅಧ್ಯಕ್ಷ ಪಿ.ಸಿ.ಕೃಷ್ಣಾರೆಡ್ಡಿ, ಎಂ.ಕೆ.ನಂಜುಂಡರಾಜು, ಮೈದನಹಳ್ಲಿ ಕಾಂತರಾಜು, ಸಿದ್ದಾಪುರ ರಂಗಶ್ಯಾಮಣ್ಣ ಭಾಗವಹಿಸಿದ್ದರು.