ಕನ್ನಡಪ್ರಭ ವಾರ್ತೆ ದಾಬಸ್‍ಪೇಟೆ
ತ್ಯಾಮಗೊಂಡ್ಲು ಹೋಬಳಿಯ ಸೂಲ್ಕುಂಟೆ ಗ್ರಾಮದಲ್ಲಿ ಕೃಷಿ ರಾಜ್ಯ ರೈತ ಸಂಘದ ಘಟಕಶಾಖೆಗೆ, ತೆಂಗಿನ ಸಸಿಗಳನ್ನು ವಿತರಿಸಿ, ದೀಪಬೆಳಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ರೈತ ಸಮಗ್ರ ಕೃಷಿಯತ್ತ ಮನಸ್ಸು ಮಾಡಬೇಕು, ರಾಜ್ಯ ರೈತ ಸಂಘವು ರೈತರ ಹಿತಾಸಕ್ತಿಯನ್ನು ಕಾಪಾಡುವ ಉದ್ದೇಶದಿಂದ ಸ್ಥಾಪಿತವಾದ ಒಂದು ಸಂಘಟನೆಯಾಗಿದೆ, ಇದು ರೈತರಿಗೆ ವಿವಿಧ ಸೌಲಭ್ಯಗಳನ್ನು ಒದಗಿಸುವುದರ ಮೂಲಕ ಅವರ ಜೀವನವನ್ನು ಸುಧಾರಿಸುವ ಗುರಿ ಹೊಂದಿದೆ, ರೈತರಿಗೆ ಕೃಷಿ ಸಲಹೆ ಮತ್ತು ತಾಂತ್ರಿಕ ನೆರವು ಒದಗಿಸುವ ಪ್ರಮುಖ ಉದ್ದೇಶವನ್ನು ರೈತಸಂಘ ಹೊಂದಿದೆ, ಘಟಕ ಶಾಖೆ ಹೆಚ್ಚು ಪ್ರಭಾವಶಾಲಿಯಾಗಲಿ ಎಂದರು.ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ದೇವರಾಜು.ಡಿ.ಎಂ. ಮಾತನಾಡಿ, ರಾಜ್ಯಾದ್ಯಂತ ನಮ್ಮ 28 ಶಾಖೆಗಳಿವೆ, ಪ್ರಮುಖ ಕೇಂದ್ರ ಕಚೇರಿ ತುಮಕೂರಿನಲ್ಲಿದೆ, ಇಂದು ಗ್ರಾಮ ಘಟಕವನ್ನು ಸೂಲ್ಕುಂಟೆ ಗ್ರಾಮದಲ್ಲಿ ಪ್ರಾರಂಭಿಸಿದ್ದೇವೆ, ಸಂಘಟನೆಯಿಂದ, ತ್ಯಾಮಗೊಂಡ್ಲು- ದಾಬಸ್‍ಪೇಟೆ ಹೋಬಳಿಯಲ್ಲಿ ಕೆಐಎಡಿಬಿ ಈ ಭಾಗದಲ್ಲಿ ರೈತರ ಕೃಷಿ ಜಮೀನು ವಶಪಡಿಸಿಕೊಂಡಿರುವುದನ್ನು ವಿರೋಧಿಸಿ ಹೋರಾಟ ರೂಪಿಸುತ್ತೇವೆ ಎಂದರು.
----------
ನಮ್ಮ ಸಂಘಟನೆ ಸಾಮೂಹಿಕ ನಾಯಕತ್ವದಲ್ಲಿ ನಡೆಯುತ್ತದೆ, ರೈತರಿಗೆ ನ್ಯಾಯಯುತ ಬೆಲೆ ಒದಗಿಸುವುದು. ಕೃಷಿ ಸಾಲ ಮತ್ತು ಇತರೆ ಆರ್ಥಿಕ ನೆರವು, ರೈತರಿಗೆ ಎಲ್ಲಾ ಸೇವೆ ಒದಗಿಸುವುದು ಮತ್ತು ರೈತರಿಗಾಗಿ ರೈತರಿಗೋಸ್ಕರ, ರೈತರ ಸಮಗ್ರ ಅಭಿವೃದ್ಧಿಯೇ ನಮ್ಮ ಸಂಘಟನೆಯ ಗುರಿಯಾಗಿದೆ.