ಚನ್ನರಾಯಪಟ್ಟಣ: ಪಟ್ಟಣದ ರೋಟರಿ ಕ್ಲಬ್ ವಿಷನ್ ವತಿಯಿಂದ ಸರ್ಕಾರಿ ಶಾಲಾ ಮಕ್ಕಳಿಗೆ ಬರೆಯಲು ಅನುಕೂಲವಾಗುವಂತೆ ರು. 30,000 ಬೆಲೆಬಾಳುವ ಮೂರು ಗ್ರೀನ್ ಬೋರ್ಡ್ (ಹಸಿರು ಹಲಗೆ) ಅನ್ನು ಎರಡು ಸರ್ಕಾರಿ ಶಾಲೆಗಳಿಗೆ ವಿತರಿಸಲಾಯಿತು. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಲ್ಕೆರೆ, ಶಾಲೆಗೆ ಎರಡು ಗ್ರೀನ್ ಬೋರ್ಡುಗಳನ್ನು ಹಾಗೂ ಸರಕಾರಿ ಪ್ರಾಥಮಿಕ ಜೋಗಿಪುರದ ಶಾಲೆಗೆ ಒಂದು ಗ್ರೀನ್ ಬೋರ್ಡ್ ಅನ್ನು ವಿತರಿಸಲಾಯಿತು. ಕಲ್ಕೆರೆ ಶಾಲೆಯ ಮುಖ್ಯೋಪಾಧ್ಯಾಯರಾದ ಜಯಂತಿ ಮಾತನಾಡಿ ರೋಟರಿ ಕ್ಲಬ್‌ನ ಸಮಾಜಮುಖಿ ಕಾರ್ಯಕ್ರಮಗಳ ನೋಡುತ್ತಾ ಬಂದಿದ್ದೇವೆ ಹಾಗೆ ನಮ್ಮ ಶಾಲೆಗೂ ಅನುಕೂಲವಾಗುವಂತೆ ಗ್ರೀನ್ ಬೋರ್ಡ್ ಕೊಟ್ಟಿರುವುದು ಸರ್ಕಾರಿ ಶಾಲೆಗಳಿಗೆ ಅನುಕೂಲ ಮಾಡಿಕೊಡುವಂತೆ ಪಟ್ಟಣದ ರೋಟರಿ ಕ್ಲಬ್ ಕೇಳಿದ್ದೆವು ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ, ಇನ್ನು ಹೆಚ್ಚು ಬೆಳೆಯಲ್ಲಿ ಹೀಗೆ ಎಲ್ಲರಿಗೂ ಅನುಕೂಲವಾಗುವಂತೆ ಸಾಮಾಜಿಕ ಕಾರ್ಯಕ್ರಮಗಳನ್ನು ಹೆಚ್ಚು ಹೆಚ್ಚು ಮಾಡಲಿ ಎಂದು ಆಶಿಸಿದರು. ಎರಡು ಶಾಲೆಯ ಮಕ್ಕಳು ತುಂಬಾ ಸಂತೋಷದಿಂದ ಬೋರ್ಡ್ ಮೇಲೆ ಬರೆಯಲು ಇಷ್ಟಪಡುತ್ತಾರೆ ಎಂದು ಸಂತಸ ವ್ಯಕ್ತಪಡಿಸಿದರು.ಗ್ರೀನ್ ಬೋರ್ಡ್ ವಿತರಣಾ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ್ದ ರೋಟರಿ ಕ್ಲಬ್ ಅಧ್ಯಕ್ಷರಾದ ಜ್ಯೋತಿ ಶ್ರೀನಿವಾಸ್, ಕಾರ್ಯದರ್ಶಿ ಹೇಮಚಂದ್ರ, ಖಜಾಂಚಿ ವೆಂಕಟೇಶ್, ಶಿವನಂಜೇಗೌಡ, ಹರೀಶ್ ಬಿ.ಪಿ, ಜೋಗಿಪುರ ಶಾಲೆಯ ಮುಖ್ಯೋಪಾಧ್ಯಾಯರಾದ ರಾಜಮ್ಮ ಮತ್ತಿತರಿದ್ದರು.