ವಿಶ್ವಕರ್ಮರಿಂದ ಮಾತ್ರ ದೇಶ ಕಟ್ಟಲು ಸಾಧ್ಯ: ಬಸವರಾಜ ಬೊಮ್ಮಾಯಿ

KannadaprabhaNewsNetwork |  
Published : Jun 08, 2026, 03:15 AM IST
ಪೊಟೋ ಪೈಲ್ ನೇಮ್ ೭ಎಸ್‌ಜಿವಿ೧ ಪಟ್ಟಣದ ವಿರಕ್ತಮಠದಲ್ಲಿ ಜರುಗಿದ ವಿಶ್ವಕರ್ಮ ಸಮಾಜದ ಕಾರ್ಯಕ್ರಮವನ್ನು ಸಂಸದ ಬಸವರಾಜ ಬೊಮ್ಮಾಯಿ ಉದ್ಘಾಟಿಸಿದರು೭ಎಸ್‌ಜಿವಿ೧ -೧   ಪಟ್ಟಣದ ವಿರಕ್ತಮಠದಲ್ಲಿ ಜರುಗಿದ ವಿಶ್ವಕರ್ಮ ಸಮಾಜದ ಕಾರ್ಯಕ್ರಮದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಿ, ಗೌರವಿಸಲಾಯಿತು.  | Kannada Prabha

ಸಾರಾಂಶ

ವಿಶ್ವಕರ್ಮರಿಂದ ಮಾತ್ರ ಈ ದೇಶವನ್ನು ಮೂಲಭೂತವಾಗಿ ಕಟ್ಟಲು ಸಾಧ್ಯ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಗೆ ಗೊತ್ತಿದೆ. ಹೀಗಾಗಿ ಮತ್ತೆ ನಿಮಗೆ ಗೌರವ, ಮನ್ನಣೆ ಸಿಗುವ ಕಾಲ ಬಂದಿದೆ. ಜ್ಞಾನ, ಪರಿಶ್ರಮ, ಕೌಶಲ್ಯ ಹಾಗೂ ಏಕಾಗ್ರತೆಯ ಸಂಗಮವಾಗಿರುವ ವಿಶ್ವಕರ್ಮ ಸಮಾಜ ಮಾನವ ಕಲ್ಯಾಣಕ್ಕೆ ವಿಶಿಷ್ಟ ಕೊಡುಗೆ ನೀಡಿದೆ. ಈ ಹಿನ್ನೆಲೆಯಲ್ಲಿ ಸಮಾಜಕ್ಕೆ ಒಳ್ಳೆಯ ಭವಿಷ್ಯವಿದೆ ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

ಶಿಗ್ಗಾಂವಿ: ವಿಶ್ವಕರ್ಮರಿಂದ ಮಾತ್ರ ಈ ದೇಶವನ್ನು ಮೂಲಭೂತವಾಗಿ ಕಟ್ಟಲು ಸಾಧ್ಯ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಗೆ ಗೊತ್ತಿದೆ. ಹೀಗಾಗಿ ಮತ್ತೆ ನಿಮಗೆ ಗೌರವ, ಮನ್ನಣೆ ಸಿಗುವ ಕಾಲ ಬಂದಿದೆ. ಜ್ಞಾನ, ಪರಿಶ್ರಮ, ಕೌಶಲ್ಯ ಹಾಗೂ ಏಕಾಗ್ರತೆಯ ಸಂಗಮವಾಗಿರುವ ವಿಶ್ವಕರ್ಮ ಸಮಾಜ ಮಾನವ ಕಲ್ಯಾಣಕ್ಕೆ ವಿಶಿಷ್ಟ ಕೊಡುಗೆ ನೀಡಿದೆ. ಈ ಹಿನ್ನೆಲೆಯಲ್ಲಿ ಸಮಾಜಕ್ಕೆ ಒಳ್ಳೆಯ ಭವಿಷ್ಯವಿದೆ ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.ಪಟ್ಟಣದ ಸಂಗನಬಸವ ಮಂಗಲ ಭವನದಲ್ಲಿ ಹಾವೇರಿ ಜಿಲ್ಲಾ ವಿಶ್ವಕರ್ಮ ನೌಕರರ ಕ್ಷೇಮಾಭಿವೃದ್ಧಿ ಸಂಘದ ಆಶ್ರಯದಲ್ಲಿ ಜರುಗಿದ ಪ್ರತಿಭಾ ಪುರಸ್ಕಾರ ಹಾಗೂ ನಿವೃತ್ತ ಮತ್ತು ಬಡ್ತಿ ನೌಕರರಿಗೆ ವಿಶ್ವಕರ್ಮ ನೌಕರಶ್ರೀ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಭಾರತದ ಪರಂಪರೆಯಲ್ಲಿ ದೇವಸ್ಥಾನಗಳು ಹಾಗೂ ಧಾರ್ಮಿಕ ಕೇಂದ್ರಗಳ ಯೋಜನೆ ರೂಪಿಸಿದ ಹೆಗ್ಗಳಿಕೆ ವಿಶ್ವಕರ್ಮ ಸಮಾಜಕ್ಕೆ ಸಲ್ಲುತ್ತದೆ. ಕೌಶಲ್ಯ ಹಾಗೂ ನೈಪುಣ್ಯತೆ ಇದ್ದರೆ ಮಾತ್ರ ರಾಷ್ಟ್ರ ನಿರ್ಮಾಣ ಸಾಧ್ಯ. ಅದಕ್ಕಾಗಿ ವಿಶ್ವಕರ್ಮ ಸಮಾಜಕ್ಕೆ ಹಾವೇರಿ ಜಿಲ್ಲೆಯಲ್ಲಿ ಎರಡು ಎಕರೆ ಜಾಗೆ ಹಾಗೂ ಮುಂದಿನ ಎರಡು ವರ್ಷಗಳಲ್ಲಿ ಐವತ್ತು ಲಕ್ಷ ರು.ಗಳ ಅನುದಾನ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುವೆ ಎಂದರು.ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ ಮಾತನಾಡಿ, ಬುದ್ಧಿವಂತರು, ವಿಚಾರವಂತರೂ ಆಗಿರುವ ವಿಶ್ವಕರ್ಮ ಸಮಾಜದವರು ನಮಗೆ ದೇವರ ದಿವ್ಯ ದರ್ಶನ ಮಾಡಿಸಿದವರು. ಹಾವೇರಿ ಹೊರವಲಯದಲ್ಲಿ ಸಮಾಜಕ್ಕೆ ಅಗತ್ಯವಿರುವ ಜಾಗೆ ಮಂಜೂರು ಮಾಡಲು ನಮ್ಮ ಪಕ್ಷದ ಶಾಸಕರ ಹಾಗೂ ಮುಖಂಡರ ಮನವೊಲಿಸುವೆ ಎಂದರು.ಭರತ್ ಸೇವಾ ಸಂಸ್ಥೆಯ ಅಧ್ಯಕ್ಷ ಶ್ರೀಕಾಂತ ದುಂಡಿಗೌಡ್ರ ಮಾತನಾಡಿ, ಮೂಲ ಕಸುಬಿನ ಜೊತೆಗೆ ಶಿಕ್ಷಣ ಪಡೆದು ಸಮಾಜದ ವಿವಿಧ ಸ್ತರಗಳಲ್ಲಿ ಗುರುತಿಸಿಕೊಂಡಿರುವ ವಿಶ್ವಕರ್ಮ ಸಮಾಜದ ಕಾರ್ಯಕ್ರಮ ನಮ್ಮ ತಾಲೂಕಿನಲ್ಲಿ ಆಯೋಜನೆ ಆಗಿರುವುದು ಖುಷಿ ತಂದಿದೆ ಎಂದರು.ಡಾ. ಪದ್ಮಾವತಿ ಪತ್ತಾರ, ಡಾ. ಕೆ. ಪ್ರೇಮಕುಮಾರ, ಚಾಮರಾಜ ಕಮ್ಮಾರ ಮಾತನಾಡಿದರು. ಇದೇ ಸಂದರ್ಭದಲ್ಲಿ ೨೦೨೬ನೇ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದವರನ್ನು ಸನ್ಮಾನಿಸಿ, ಗೌರವಿಸಲಾಯಿತು. ಸಮಾಜದ ಪ್ರತಿಭಾವಂತ ಮಕ್ಕಳಿಂದ ಮನೋರಂಜನಾ ಕಾರ್ಯಕ್ರಮ ಜರುಗಿದವು.ಚನ್ನಗಿರಿ ತಾಲೂಕಿನ ವಡ್ಡನಹಾಳ ಕಾಶೀಮಠದ ಶ್ರೀ ಅಷ್ಟೋತ್ತರ ಶತಶ್ರೀ ಶಂಕರಾತ್ಮಾನಂದ ಸರಸ್ವತಿ ಮಹಾಸ್ವಾಮೀಜಿ, ಹುಲಗೂರಿನ ಮೌನೇಶ್ವರ ಮಠದ ಮೌನೇಶ್ವರ ಸ್ವಾಮೀಜಿ, ಶಿಗ್ಗಾಂವಿ ವಿರಕ್ತಮಠದ ಸಂಗನಬಸವ ಮಹಾಸ್ವಾಮೀಜಿ ಹಾಗೂ ರಾಣಿಬೆನ್ನೂರಿನ ವಿಶ್ವ ವಿಭುರೇಖಿ ಧ್ಯಾನಪೀಠದ ಮೌನೇಶ್ವರ ಆಚಾರ್ಯ ಸಾನ್ನಿಧ್ಯ ವಹಿಸಿದ್ದರು.ಜಿಲ್ಲಾ ವಿಶ್ವಕರ್ಮ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಈರಪ್ಪ ಪಂಚಾನನ ಅಧ್ಯಕ್ಷತೆ ವಹಿಸಿದ್ದರು.ಮುಖಂಡರಾದ ರಾಮಣ್ಣ ಬಡಿಗೇರ, ತಿಪ್ಪಣ್ಣ ಸಾತಣ್ಣವರ, ಶಿವಾನಂದ ಮ್ಯಾಗೇರಿ, ಸುರೇಶ ಕಮ್ಮಾರ, ಈರಣ್ಣ ಬೆಳವಡಿ, ಗಣೇಶ ಕಮ್ಮಾರ, ಎಸ್.ಎಂ. ಬಡಿಗೇರ, ಕಾಳಪ್ಪ ಬಡಿಗೇರ ಹಾಗೂ ಜಿಲ್ಲೆಯ ವಿವಿಧ ತಾಲೂಕಿನ ಸಮಾಜ ಬಾಂಧವರು ಉಪಸ್ಥಿತರಿದ್ದರು.ಚಿದಾನಂದ ಬಡಿಗೇರ ಸ್ವಾಗತಿಸಿದರು. ಪಾರ್ವತಿ ಬಡಿಗೇರ ನಿರೂಪಿಸಿದರು. ಮಾಲತೇಶ ಕಮ್ಮಾರ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಸಿರು ರಕ್ಷಣೆಗೆ ಸಂಘ- ಸಂಸ್ಥೆಗಳು ಮುಂದಾಗಲಿ: ವಕೀಲ ಬಿ.ಎಸ್. ಬಾಳೇಶ್ವರಮಠ
ಮೃತ ಫಲಾನುಭವಿಗಳ ಖಾತೆಗೆ ಗೃಹಲಕ್ಷ್ಮೀ ಹಣ ಜಮೆ:ವಾಪಸ್ ಪಡೆದು ಅರ್ಹರಿಗೆ ತಲುಪಿಸಲು ಕ್ರಮ: ಎಸ್.ಆರ್. ಪಾಟೀಲ