ಪ್ರೀತಿ, ಭಕ್ತಿ ಇದ್ದರೆ ಮಾತ್ರ ಭಗವಂತನನ್ನು ಕಾಣಲು ಸಾಧ್ಯ: ತ್ರಿನೇತ್ರ ಸ್ವಾಮೀಜಿ

KannadaprabhaNewsNetwork |  
Published : Aug 08, 2025, 01:01 AM IST
7ಕೆಎಂಎನ್ ಡಿ15 | Kannada Prabha

ಸಾರಾಂಶ

ಮನುಷ್ಯರಾದ ನಾವುಗಳು ಹಣ, ಅಧಿಕಾರದ ಹಿಂದೆ ಓಡುತ್ತಿದ್ದೇವೆ. ಹಣ ಸಂಪಾದನೆಯ ಜತೆಗೆ ಸಾಧ್ಯವಾದಷ್ಟು ಪುಣ್ಯದ ಕೆಲಸ ಮಾಡಬೇಕು. ಸಮಾಜದಲ್ಲಿ ಒಂದೊಂದು ಅಡಿ ಜಾಗಕ್ಕೂ ಪರಸ್ಪರ ಹೊಡೆದಾಡಿಕೊಂಡು ಕೋರ್ಟ್ ಕಚೇರಿ ಅಲೆದಾಡುತ್ತಿದ್ದಾರೆ. ಅಂತಹ ದಿನಗಳಲ್ಲಿ ಅಲ್ಪಳ್ಳಿ ವೆಂಕಟೇಶಪ್ಪ ಎಂಬುವವರು ದೇವಸ್ಥಾನ ನಿರ್ಮಾಣಕ್ಕೆ ಎರಡು ಎಕರೆ ಭೂಮಿ ದಾನವಾಗಿ ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ಪಾಂಡವಪುರ

ಜನರು ಪ್ರೀತಿ, ಭಕ್ತಿಯಿಂದ ಮಾತ್ರ ಭಗವಂತನನ್ನು ಕಾಣಲು ಸಾಧ್ಯ ಎಂದು ಚಂದ್ರವನ ಆಶ್ರಮದ ಪೀಠಾಧ್ಯಕ್ಷ ಡಾ.ತ್ರಿನೇತ್ರಮಹಂತ ಶಿವಯೋಗಿ ಸ್ವಾಮೀಜಿ ಹೇಳಿದರು.ತಾಲೂಕಿನ ಅಲ್ಪಹಳ್ಳಿಯಲ್ಲಿ ಶ್ರೀವರಸಿದ್ದಿ ಕಾಲಭೈರವೇಶ್ವರ ಸೇವಾ ಟ್ರಸ್ಟ್‌ನಿಂದ ನಡೆದ ಶ್ರೀಕಾಲಭೈರವೇಶ್ವರ ನೂತನ ದೇವಸ್ಥಾನ ನಿರ್ಮಾಣ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿ, ದೇವರ ಮೇಲೆ ಪ್ರೀತಿ, ಭಕ್ತಿ, ನಂಬಿಕೆ ಬೆಳೆಸಿಕೊಂಡು ಪೂಜ್ಯನೀಯ ಮನೋಭಾವದಿಂದ ನೋಡಿದರೆ ಮಾತ್ರ ಭಗವಂತನ ಸಾಕ್ಷಾತ್ಕಾರ ಪಡೆದುಕೊಳ್ಳಬಹುದು ಎಂದರು.

ಮನುಷ್ಯರಾದ ನಾವುಗಳು ಹಣ, ಅಧಿಕಾರದ ಹಿಂದೆ ಓಡುತ್ತಿದ್ದೇವೆ. ಹಣ ಸಂಪಾದನೆಯ ಜತೆಗೆ ಸಾಧ್ಯವಾದಷ್ಟು ಪುಣ್ಯದ ಕೆಲಸ ಮಾಡಬೇಕು. ಸಮಾಜದಲ್ಲಿ ಒಂದೊಂದು ಅಡಿ ಜಾಗಕ್ಕೂ ಪರಸ್ಪರ ಹೊಡೆದಾಡಿಕೊಂಡು ಕೋರ್ಟ್ ಕಚೇರಿ ಅಲೆದಾಡುತ್ತಿದ್ದಾರೆ. ಅಂತಹ ದಿನಗಳಲ್ಲಿ ಅಲ್ಪಳ್ಳಿ ವೆಂಕಟೇಶಪ್ಪ ಎಂಬುವವರು ದೇವಸ್ಥಾನ ನಿರ್ಮಾಣಕ್ಕೆ ಎರಡು ಎಕರೆ ಭೂಮಿ ದಾನವಾಗಿ ನೀಡಿದ್ದಾರೆ. ನಿಜಕ್ಕೂ ಇಂತಹ ವ್ಯಕ್ತಿಗಳು ಸಮಾಜಕ್ಕೆ ಮಾದರಿಯಾಗಲಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಶಾಸಕ ದರ್ಶನ್‌ ಪುಟ್ಟಣ್ಣಯ್ಯ ಮಾತನಾಡಿ, ಗ್ರಾಮಗಳಲ್ಲಿ ಜನರು ನೆಮ್ಮದಿ ಜೀವನ ನಡೆಸಲು ದೇವಸ್ಥಾನ, ಧಾರ್ಮಿಕ ಕಾರ್ಯಕ್ರಮಗಳು ನೆರವಾಗಿವೆ. ಇದರಲ್ಲಿ ಗ್ರಾಮಸ್ಥರೆಲ್ಲರು ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಎಂದರು.

ಸಾಯಿ ಕೀರ್ತಿನಂದನಾಥ ಸ್ವಾಮೀಜಿ ಮಾತನಾಡಿ, ದೇವರ ಮೇಲೆ ನಂಬಿಕೆ ಇಟ್ಟುಕೊಂಡು ಭಕ್ತಿಯಿಂದ ಸಂಕಲ್ಪ ಮಾಡಿಕೊಂಡರೆ ಆ ಕೆಲಸ ಕಂಡಿತವಾಗಿಯೂ ಈಡೇರುತ್ತದೆ. ಅಲ್ಪಳ್ಳಿ ಶ್ರೀಕಾಲಭೈರವೇಶ್ವರ ದೇವಸ್ಥಾನವನ್ನು ನಿರ್ಮಾಣ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ಸುಗ್ರೀವನ ದೇವಸ್ಥಾನ ನಿರ್ಮಿಸಿ ಪೂಜಿಸುತ್ತಿರುವುದು ವಿಶೇಷವಾಗಿದೆ ಎಂದರು.

ಶ್ರೀರಾಮಯೋಗೇಶ್ವರಮಠದ ಪೀಠಾಧ್ಯಕ್ಷ ಶ್ರೀಶಿವಬಸವಸ್ವಾಮೀಜಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಯುವ ಜನಾಂಗ ಮೋಜು ಮಸ್ತಿಯಲ್ಲಿ ತೊಡಗಿಸಿಕೊಂಡು ದೇವರ ಮೇಲಿನ ಭಕ್ತಿಕಳೆದುಕೊಂಡು ಆಸ್ತಿಕರಿಂದ ನಾಸ್ತಿಕರಾಗುತ್ತಿದ್ದಾರೆ. ನಾವೆಲ್ಲರು ನಾವು ಮಾಡುವ ಕೆಲಸದಲ್ಲಿ, ಪ್ರಕೃತಿಯಲ್ಲಿ ದೇವರನ್ನು ಕಾಣಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮಕ್ಕೂ ಮುನ್ನ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಅವರು ಆಗಮಿಸಿ ಶಿಲಾನ್ಯಾಸಕ್ಕೆ ಚಾಲನೆ ನೀಡಿ ಶುಭಹಾರೈಸಿದರು. ನಂತರ ಗ್ರಾಮದಿಂದ ಗಣ್ಯರನ್ನು ವೇದಿಕೆಗೆ ವಿವಿದ ಕಲಾ ತಂಡಗಳೋದಿಗೆ ಕರೆತದರು.

ಸಮಾರಂಭದಲ್ಲಿ ಚುಂಚನಗಿರಿ ಶಾಖಾಮಠದ ಸತ್ಯಕೀರ್ತಿನಂದನಾಥಸ್ವಾಮೀಜಿ, ಗವಿಮಠದ ಚನ್ನವೀರಸ್ವಾಮೀಜಿ, ಮಠದ ಸಂಸ್ಥಾಪಕರಾದ ಶ್ರೀತ್ರಿಶೋಬೊನಂದ ಸ್ವಾಮೀಜಿ, ಕೆಆರ್.ಪೇಟೆ ಬಸವಣ್ಣ, ಭೂದಾನಿ ವೆಂಕಟೇಶಪ್ಪ, ಗ್ರಾಪಂ ಉಪಾಧ್ಯಕ್ಷ ಮಂಜು, ತಾಪಂ ಮಾಜಿ ಸದಸ್ಯ ಗೋವಿಂದಯ್ಯ, ಟ್ರಸ್ಟಿಗಳಾದ ಈರಣ್ಣ, ಪವನ್, ರವಿ, ಅಂಬರೀಶ್, ಗಿರೀಧರ್, ನಂಜುಂಡಸ್ವಾಮಿ, ನಾರಾಯಣಸ್ವಾಮಿ, ಪ್ರಶಾಂತ್, ಭೈರಪ್ಪ, ಶಿವಪ್ಪ, ಕುಮಾರ್, ಸತೀಶ್, ಚಲುವರಾಜು, ಕೀರ್ತಿ, ರಂಗನಾಥ್, ಶ್ವೇತ್, ಸಂತೋಷ್, ಅವಿನಾಶ್, ಯ.ಗುರುಸ್ವಾಮಿ, ಸೇರಿದಂತೆ ಹಲವರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗ್ಳೂರು 5 ಪಾಲಿಕೆಗೆ ಎಲೆಕ್ಷನ್‌ ನಡೆಸುವುದಕ್ಕೆ ಜೂ.30 ಡೆಡ್ಲೈನ್‌
ಹೈಕೋರ್ಟ್‌ ಹೊಸ ಕಟ್ಟಡಕ್ಕೆ 30 ಎಕ್ರೆ ಕೋರಿಕೆ : ರಾಜ್ಯ ಸರ್ಕಾರಕ್ಕೆ ನೋಟಿಸ್‌