ಜಿಎಂ ವಿಶ್ವವಿದ್ಯಾಲಯದಲ್ಲಿ ಓಪನ್ ಡೇ ಕಾರ್ಯಕ್ರಮ: 1200 ವಿದ್ಯಾರ್ಥಿಗಳು ಭಾಗಿ

KannadaprabhaNewsNetwork | Published : Dec 15, 2024 2:00 AM

ಸಾರಾಂಶ

ದಾವಣಗೆರೆ ನಗರದ ಜಿಎಂ ವಿಶ್ವವಿದ್ಯಾಲಯದ ಶೈಕ್ಷಣಿಕ ಕಾರ್ಯಚಟುವಟಿಕೆಗಳ ಲಭ್ಯತೆ ಬಗ್ಗೆ ವಿದ್ಯಾರ್ಥಿಗಳು ಹಾಗೂ ಪೋಷಕರು ನೇರವಾಗಿ ಅರಿತುಕೊಳ್ಳಲು ಪೂರಕವಾಗಿ ಶುಕ್ರವಾರ, ಶನಿವಾರ ಓಪನ್ ಡೇ ಕಾರ್ಯಕ್ರಮ ನಡೆಯಿತು.

- ವಿವಿಧ ಶೈಕ್ಷಣಿಕ ಕೋರ್ಸ್‌ಗಳ ಬಗ್ಗೆ ಗಣ್ಯರಿಗೆ ಮಾಹಿತಿ - - - ದಾವಣಗೆರೆ: ನಗರದ ಜಿಎಂ ವಿಶ್ವವಿದ್ಯಾಲಯದ ಶೈಕ್ಷಣಿಕ ಕಾರ್ಯಚಟುವಟಿಕೆಗಳ ಲಭ್ಯತೆ ಬಗ್ಗೆ ವಿದ್ಯಾರ್ಥಿಗಳು ಹಾಗೂ ಪೋಷಕರು ನೇರವಾಗಿ ಅರಿತುಕೊಳ್ಳಲು ಪೂರಕವಾಗಿ ಶುಕ್ರವಾರ, ಶನಿವಾರ ಓಪನ್ ಡೇ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮಕ್ಕೆ ಮೊದಲ ದಿನವೇ ಜಿಲ್ಲೆಯ ವಿವಿಧ ಕಾಲೇಜುಗಳಿಂದ ಸುಮಾರು 1200 ವಿದ್ಯಾರ್ಥಿಗಳು ಆಗಮಿಸಿದ್ದರು. ಓಪನ್ ಡೇ ವಿಶೇಷತೆ, ಉದ್ದೇಶಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.

ಶುಕ್ರವಾರ ಜಿಎಂ ವಿಶ್ವವಿದ್ಯಾಲಯದ ಕುಲಾಧಿಪತಿ ಜಿ.ಎಂ. ಲಿಂಗರಾಜು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಜಿಎಂ ವಿಶ್ವವಿದ್ಯಾಲಯದ ವಿವಿಧ ಭಾಗಗಳ ವಿದ್ಯಾರ್ಥಿಗಳು ತಯಾರಿಸಿದ್ದ ಪ್ರಾಜೆಕ್ಟ್‌ಗಳನ್ನು ವೀಕ್ಷಿಸಿ, ಪ್ರೋತ್ಸಾಹಿಸಿದರು. ಮೊದಲ ದಿನವಾದ ಶುಕ್ರವಾರ ವಿವಿಧ ವಿಭಾಗಗಳಲ್ಲಿ ಕೋರ್ಸ್‌ಗಳ ಬಗ್ಗೆ ಆಯಾ ವಿಭಾಗಗಳ ಡೀನ್‌ಗಳು, ಎಚ್‌ಒಡಿ, ಪ್ರೊಫೆಸರ್‌ಗಳು, ನಿರ್ದೇಶಕರು ಮಾಹಿತಿ ನೀಡಿದರು.

ಕಾಡುಗಳ ರಕ್ಷಣೆ, ಗಡಿಭಾಗಗಳ ಭದ್ರತೆ, ಆರೋಗ್ಯ, ಕೃಷಿ ಉಪಯೋಗಿ ಸ್ವಾಯತ್ತ ಅಗ್ನಿಶಾಮಕ ರೋಬೋಟ್, ಆಂಟಿ-ಪೋಚಿಂಗ್ ಟ್ರೀ ಮಾನಿಟರಿಂಗ್ ಸಿಸ್ಟಂ, ಹೃದಯ ಮೇಲ್ವಿಚಾರಣಾ ಯೋಜನೆ, ಆಪತ್ಬಾಂಧವ ರೋಬೋಟ್ ಕಾರು, ಕಸದಿಂದ ಕರೆಂಟ್, ಪೋರ್ಟಬಲ್ ಸೌರಚಾಲಿತ ನೀರು ಸೇರಿದಂತೆ ಸಮಾಜಮುಖಿಯಾದ ಹೊಸ ಹೊಸ ಆವಿಷ್ಕಾರಗಳ ಪ್ರತಿಭೆಗಳು ಜಿಎಂ ವಿವಿ ವಿದ್ಯಾರ್ಥಿಗಳ ವಿವಿಧ ಯೋಜನೆಗಳ ಪ್ರದರ್ಶನದಲ್ಲಿ ಅನಾವರಣಗೊಂಡವು. ಇವು ವಿವಿಧ ಕಾಲೇಜುಗಳಿಂದ ಆಗಮಿಸಿದ್ದ ವಿದ್ಯಾರ್ಥಿಗಳ ಗಮನ ಸೆಳೆದು, ಮಾರ್ಗದರ್ಶನ ಮತ್ತು ಪ್ರೇರಣೆ ನೀಡಿದವು.

ಕಾರ್ಯಕ್ರಮದಲ್ಲಿ ಜಿಎಂ ವಿವಿ ಸಹ ಕುಲಪತಿ ಡಾ. ಎಚ್.ಡಿ. ಮಹೇಶಪ್ಪ, ಕುಲಸಚಿವ ಡಾ. ಬಿ.ಎಸ್. ಸುನಿಲ್ ಕುಮಾರ್, ಜಿಎಂ ತಾಂತ್ರಿಕ ಮಹಾವಿದ್ಯಾಲಯ ಆಡಳಿತಾಧಿಕಾರಿ ವೈ.ಯು. ಸುಭಾಷ್‌ಚಂದ್ರ, ಪ್ರಾಚಾರ್ಯ ಡಾ. ಎಂ.ಬಿ. ಸಂಜಯ್ ಪಾಂಡೆ, ವಿವಿಧ ವಿಭಾಗಗಳ ಮುಖ್ಯಸ್ಥರು, ಪ್ರಾಂಶುಪಾಲರು, ಡೀನ್‌ಗಳು, ನಿರ್ದೇಶಕರು, ಕಾಲೇಜು ನೌಕರರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.

- - - -13ಕೆಡಿವಿಜಿ34.ಜೆಪಿಜಿ:

ದಾವಣಗೆರೆಯ ಜಿಎಂ ವಿ.ವಿ.ಯಲ್ಲಿ ನಡೆದ ಓಪನ್ ಡೇ ಕಾರ್ಯಕ್ರಮವನ್ನು ಕುಲಾಧಿಪತಿ ಜಿ.ಎಂ. ಲಿಂಗರಾಜು ಉದ್ಘಾಟಿಸಿದರು.

Share this article