ಶಿಗ್ಗಾಂವಿ ಠಾಣೆಯಲ್ಲಿ ತೆರೆದ ಮನೆ ಕಾರ್ಯಕ್ರಮ

KannadaprabhaNewsNetwork |  
Published : Jul 16, 2024, 12:35 AM ISTUpdated : Jul 16, 2024, 12:36 AM IST
ಪೊಟೋ ಪೈಲ್ ನೇಮ್ ೧೧ಎಸ್‌ಜಿವಿ೨ ಶಿಗ್ಗಾವಿ ಠಾಣೆಯ ತೆರದಮನೆ ಕಾರ್ಯಕ್ರಮದಲ್ಲಿ ಸಂಸ್ಕೃತಿ ಶಾಲೆಯ ವಿದ್ಯಾರ್ಥಿಗಳಿಗೆ ಇಲಾಖೆಯ ಕಾರ್ಯವೈಕರಿಯ ಮಾಹಿತಿ ನೀಡಿದ ಪಿಐ ಸತ್ಯಪ್ಪಾ ಮಾಳಗೊಂಡ. | Kannada Prabha

ಸಾರಾಂಶ

ಶಿಗ್ಗಾಂವಿ ಪಟ್ಟಣದ ಪೊಲೀಸ್‌ ಠಾಣೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ತೆರೆದ ಮನೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಎಂಪಿಎಂ ಸಂಸ್ಕೃತಿ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಠಾಣಾ ಪಿಐ ಸತ್ಯಪ್ಪಾ ಮಾಳಗೊಂಡ ಸಮಾಲೋಚನೆ ಮೂಲಕ ಪೊಲೀಸ್‌ ಠಾಣೆಯ ಕಾರ್ಯವೈಖರಿ ಕುರಿತು ವಿವರಿಸಿದರು.

ಶಿಗ್ಗಾಂವಿ: ಪಟ್ಟಣದ ಪೊಲೀಸ್‌ ಠಾಣೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ತೆರೆದ ಮನೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಎಂಪಿಎಂ ಸಂಸ್ಕೃತಿ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಠಾಣಾ ಪಿಐ ಸತ್ಯಪ್ಪಾ ಮಾಳಗೊಂಡ ಸಮಾಲೋಚನೆ ಮೂಲಕ ಪೊಲೀಸ್‌ ಠಾಣೆಯ ಕಾರ್ಯವೈಖರಿ ಕುರಿತು ವಿವರಿಸಿದರು.

ಕಾರ್ಯಕ್ರಮದಲ್ಲಿ ಪೊಲೀಸ್ ಠಾಣೆ ವಿವಿಧ ವಿಭಾಗಗಳನ್ನು ವಿದ್ಯಾರ್ಥಿಗಳಿಗೆ ಪರಿಚಯಿಸಿದ ಅವರು, ವಿದ್ಯಾರ್ಥಿಗಳಿಗೆ ೧೧೨ ಹೆಲ್ಪ್‌ಲೈನ್ ಬಳಸಬೇಕಾದ ಸಂದರ್ಭ, ಗನ್‌ಗಳು, ಸೆಲ್ ಕುರಿತಾಗಿ ಮಾಹಿತಿ ನೀಡಿ, ಮಕ್ಕಳು ಮನೆ ಮತ್ತು ಸಮಾಜದಿಂದ ಅನುಭವಿಸಬಹುದಾದ ದೈಹಿಕ, ಮಾನಸಿಕ ಕಿರುಕುಳಗಳ ಕುರಿತಾದ ಪೋಕ್ಸೊ ಪ್ರಕರಣ, ಟ್ರಾಫಿಕ್, ವಾಹನ ಬಳಕೆಯಲ್ಲಿ ಮುನ್ನೆಚ್ಚರಿಕೆ ತೆಗೆದುಕೊಳ್ಳುವ ಕುರಿತಂತೆ ಹಲವಾರು ಮಾಹಿತಿಗಳನ್ನು ತಿಳಿಸಿದರು.

ಈ ಸಂದರ್ಭದಲ್ಲಿ ಶಿಕ್ಷಕಿ ಸವಿತಾ ಗೌರಿಮಠ ಮಾತನಾಡಿ, ಮಕ್ಕಳಿಗೆ ಪೊಲೀಸ್ ಠಾಣೆಗಳು ಮತ್ತು ಪೊಲೀಸರ ಕುರಿತಾಗಿ ಇರುವ ಭಯವನ್ನು ಈ ಕಾರ್ಯಕ್ರಮದ ಮೂಲಕ ಠಾಣಾ ಅಧಿಕಾರಿಗಳು ಮತ್ತು ಸಿಬ್ಬಂದಿ ತೆಗೆದು ಹಾಕಿ, ಮಕ್ಕಳಲ್ಲಿ ಕಾನೂನು ಸುರಕ್ಷತೆ ಮತ್ತು ಸಿಗಬಹುದಾದ ರಕ್ಷಣೆ ಕುರಿತು ಉಪಯುಕ್ತ ಮಾಹಿತಿ ನೀಡುವ ಮೂಲಕ ಪೊಲೀಸ್ ಇಲಾಖೆ ಸಮಾಜ ಸ್ನೇಹಿ ಎಂಬುದನ್ನು ಸಾಕ್ಷಿಕರಿದ್ದಾರೆ ಎಂದರು.

ಠಾಣಾ ಸಿಬ್ಬಂದಿ ವಿದ್ಯಾರ್ಥಿಗಳಿಗೆ ಸಿಹಿ ಹಂಚಿ, ಶಿಕ್ಷಕರಿಗೆ ಹೂ ಗುಚ್ಛ ನೀಡುವ ಮೂಲಕ ತೆರೆದ ಮನೆ ಕಾರ್ಯಕ್ರಮಕ್ಕೆ ಸ್ವಾಗತಿದರು. ಶಿಗ್ಗಾಂವಿ ಠಾಣೆ ಪಿಎಸ್‌ಐ ಪಿ.ಎಫ್‌. ನಿರುಳ್ಳಿ, ಮಹಿಳಾ ಎಎಸ್‌ಐ ಜಿವಿ ಹೊನ್ನಳಿ, ಎಎನ್ ದೇವಾಡಿಗಾ, ಶಿಕ್ಷಕಿಯರಾದ ಗಾಯತ್ರಿ ಎಂ.ವಿ., ಶ್ವೇತಾ ದುಭೆ, ಸ್ವಪ್ನಾ ಪಟ್ಟೇದ, ನಿಖಿತಾ ಕಂಕನವಾಡ, ಸವಿತಾ ಹೊನ್ನಣ್ಣನವರ, ಲಕ್ಷ್ಮೀ ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹರಿಹರ ಪ್ರಮುಖ ರಸ್ತೆಗಳಲ್ಲಿ ಬೀದಿದೀಪ, ಸಿಸಿ ಕ್ಯಾಮೆರಾ ಅಳವಡಿಸಿ
ಪ್ರೀತಿಸುವಂತೆ ಪೊಲೀಸ್‌ ಇನ್‌ಸ್ಪೆಕ್ಟರ್‌ಬೆನ್ನತ್ತಿದ್ದ ಮಹಿಳೆ ಈಗ ಜೈಲು ಪಾಲು