ಕಡಲೆಗೆ ಬೆಂಬಲ ಬೆಲೆ ಖರೀದಿ ಕೇಂದ್ರ ತೆರೆಯಿರಿ

KannadaprabhaNewsNetwork |  
Published : Jan 06, 2026, 02:45 AM IST
ಕಡಲೆ ಖರೀದಿ ಕೇಂದ್ರ ಆರಂಭಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸಬೇಕೆಂದು ಒತ್ತಾಯಿಸಿ ಕುಂದಗೋಳದಲ್ಲಿ ತಹಸೀಲ್ದಾರ್‌ಗೆ ರೈತರ ಮನವಿ ಸಲ್ಲಿಸಿದರು. | Kannada Prabha

ಸಾರಾಂಶ

ನಾಲ್ಕೈದು ವರ್ಷಗಳಿಂದ ಪ್ರಕೃತಿ ವಿಕೋಪ ಹಾಗೂ ಅತಿವೃಷ್ಟಿಯಿಂದ ತಾಲೂಕಿನ ರೈತರು ತತ್ತರಿಸಿ ಹೋಗಿದ್ದಾರೆ. ಮುಂಗಾರು ಹಂಗಾಮಿನಲ್ಲಿ ಬಿತ್ತನೆ, ಗೊಬ್ಬರ ಹಾಗೂ ಕ್ರಿಮಿನಾಶಕಕ್ಕಾಗಿ ಸಾಲ-ಸೋಲ ಮಾಡಿ ಹಾಕಿದ್ದ ಬಂಡವಾಳವೂ ಕೈಗೆ ಬರದಂತಾಗಿದೆ.

ಕುಂದಗೋಳ:

ಅತಿವೃಷ್ಟಿಯಿಂದ ಬೆಳೆಹಾನಿಯಾಗಿ ಸಂಕಷ್ಟದಲ್ಲಿರುವ ರೈತರಿಗೆ ಪರಿಹಾರ ನೀಡಬೇಕು. ಕಡಲೆ ಬೆಳೆಗೆ ಬೆಂಬಲ ಬೆಲೆ ನಿಗದಿಪಡಿಸಿ ಖರೀದಿ ಕೇಂದ್ರ ತೆರೆಯಬೇಕು ಎಂದು ಒತ್ತಾಯಿಸಿ ಕುಂದಗೋಳ ಬೆಳೆ ರಕ್ಷಕ ರೈತ ಸಂಘವು ಪ್ರತಿಭಟನೆ ನಡೆಸಿತು.ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ ತಹಸೀಲ್ದಾರ್‌ ರಾಜು ಮಾವರಕರ್‌ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ನಾಲ್ಕೈದು ವರ್ಷಗಳಿಂದ ಪ್ರಕೃತಿ ವಿಕೋಪ ಹಾಗೂ ಅತಿವೃಷ್ಟಿಯಿಂದ ತಾಲೂಕಿನ ರೈತರು ತತ್ತರಿಸಿ ಹೋಗಿದ್ದಾರೆ. ಮುಂಗಾರು ಹಂಗಾಮಿನಲ್ಲಿ ಬಿತ್ತನೆ, ಗೊಬ್ಬರ ಹಾಗೂ ಕ್ರಿಮಿನಾಶಕಕ್ಕಾಗಿ ಸಾಲ-ಸೋಲ ಮಾಡಿ ಹಾಕಿದ್ದ ಬಂಡವಾಳವೂ ಕೈಗೆ ಬರದಂತಾಗಿದೆ. ಪರಿಣಾಮ ರೈತರು ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದು, ಈ ಕೂಡಲೇ ರಾಷ್ಟ್ರೀಕೃತ ಹಾಗೂ ಸಹಕಾರಿ ಬ್ಯಾಂಕ್‌ಗಳಲ್ಲಿರುವ ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು ಎಂದು ಆಗ್ರಹಿಸಿದರು.ಹೊಸದಾಗಿ ಬೆಳೆಸಾಲ ಪಡೆಯಲು ಬ್ಯಾಂಕ್‌ಗಳು ಸಿಬಿಲ್ ಸ್ಕೋರ್‌ ನೋಡುವುದನ್ನು ಕೈಬಿಟ್ಟು ರೈತರಿಗೆ ವಿನಾಯಿತಿ ನೀಡಬೇಕು. ಪ್ರತಿ ಎಕರೆಗೆ 10 ಕ್ವಿಂಟಲ್ ಹಾಗೂ 5 ಎಕರೆಗಿಂತ ಹೆಚ್ಚು ಜಮೀನು ಹೊಂದಿರುವವರಿಗೆ ಕನಿಷ್ಠ 50 ಕ್ವಿಂಟಲ್ ಕಡಲೆ ಖರೀದಿಸಬೇಕು. ಮಾರಾಟ ಮಾಡಿದ ಮೇಲೆ ರೈತರ ಖಾತೆಗೆ ಒಂದು ವಾರದೊಳಗೆ ಹಣ ಜಮೆ ಮಾಡಬೇಕು ಎಂದು ಒತ್ತಾಯಿಸಿದರು.

ಕುಂದಗೋಳ ಬೆಳೆರಕ್ಷಕ ರೈತ ಸಂಘದ ಅಧ್ಯಕ್ಷ ಸೋಮರಾವ್ ಆರ್. ದೇಸಾಯಿ ಹಾಗೂ ರೈತ ಮುಖಂಡರಾದ ನಾಗರಾಜ ದೇಶಪಾಂಡೆ ಮಾತನಾಡಿದರು. ಈ ವೇಳೆ ರೈತ ಮುಖಂಡರಾದ ಸಿದ್ದಪ್ಪ ಇಂಗಳಳ್ಳಿ, ಲಕ್ಷ್ಮಣ ಚುಳಕಿ, ಮಲ್ಲೇಶ ಅವಾರಿ, ಮಲ್ಲಪ್ಪ ತಡಸದ, ರುದ್ರಪ್ಪ ಕಿರೇಸೂರ, ಶಿವಲಿಂಗಪ್ಪ ಸವಣೂರ, ಲಕ್ಷ್ಮಣ ರಂಗನಾಯ್ಕರ, ಮಂಜು ಯಲಿಗಾರ, ಪರಶುರಾಮ ಕಲಾಲ, ಶಂಕರಗೌಡ ದೊಡ್ಡಮನಿ, ಪರಮೇಶಿ ಕಿರೇಸೂರ, ರಾಮಣ್ಣ ಮುದೆಣ್ಣವರ, ಬಸವರಾಜ ಬ್ಯಾಹಟ್ಟಿ, ದೇವಪ್ಪ ಇಚ್ಚಂಗಿ, ರಾಜೇಸಾಬ್‌ ಕಳ್ಳಿಮನಿ, ಕಲ್ಲಪ್ಪ ಉಗರಗೋಳ, ಎನ್‌.ಎಂ. ಮುಗಳಿ, ಗದಗಿನ ಸೋಮಣ್ಣ ಕುಂಬಾರ ಸೇರಿದಂತೆ ಹಲವು ರೈತರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹುಬ್ಬಳ್ಳಿ ವಿವಸ್ತ್ರ ಕೇಸ್‌ನಲ್ಲಿ ತಲೆದಂಡಕ್ಕೆ ಬಿಜೆಪಿ ಗಡುವು
ಶೀಘ್ರ ‘ಬಾಕಿ ಲಕ್ಷ್ಮಿ’ ಬಿಡುಗಡೆ - ಬಿಪಿಎಲ್‌ ರದ್ದಾದವರಿಗೆ ಇಲ್ಲ ಗೃಹಲಕ್ಷ್ಮಿ ಹಣ