ಬುಡಕಟ್ಟು ಸಮಾಜಸೇವಾ ಕಾರ್ಯ ಶಿಬಿರಕ್ಕೆ ತೆರೆ

KannadaprabhaNewsNetwork |  
Published : Mar 20, 2024, 01:16 AM ISTUpdated : Mar 20, 2024, 01:17 AM IST
ಯಲ್ಲಾಪುರ ತಾಲೂಕಿನ ಹಿತ್ಲಳ್ಳಿಯಲ್ಲಿ ಜಮಖಂಡಿಯ ಬಾಗಲಕೋಟೆ ವಿಶ್ವವಿದ್ಯಾಲಯದವರು ಇತ್ತೀಚೆಗೆ ಹಮ್ಮಿಕೊಂಡಿದ್ದ ೭ ದಿನಗಳ ಬುಡಕಟ್ಟು ಸಮಾಜಸೇವಾ ಕಾರ್ಯ ಶಿಬಿರ ಮುಕ್ತಾಯಗೊಂಡಿತು. | Kannada Prabha

ಸಾರಾಂಶ

ಮಾ. ೧೧ರಂದು ಆರಂಭಗೊಂಡಿದ್ದ ಶಿಬಿರದ ಸಮಾರೋಪ ಸಮಾರಂಭವು ಮಾ. ೧೭ರಂದು ನಡೆಯಿತು.

ಯಲ್ಲಾಪುರ: ತಾಲೂಕಿನ ಹಿತ್ಲಳ್ಳಿಯಲ್ಲಿ ಜಮಖಂಡಿಯ ಬಾಗಲಕೋಟೆ ವಿಶ್ವವಿದ್ಯಾಲಯದವರು ಇತ್ತೀಚೆಗೆ ಹಮ್ಮಿಕೊಂಡಿದ್ದ ೭ ದಿನಗಳ ಬುಡಕಟ್ಟು ಸಮಾಜಸೇವಾ ಕಾರ್ಯ ಶಿಬಿರವು ಯಶಸ್ವಿಯಾಗಿ ಮುಕ್ತಾಯಗೊಂಡಿತು.

ಬುಡಕಟ್ಟು ಸಮುದಾಯ ವ್ಯವಸ್ಥೆ ಮತ್ತು ಜೀವನವನ್ನು ಅರ್ಥೈಸಿಕೊಳ್ಳುವುದು, ಬುಡಕಟ್ಟು ಸಮಸ್ಯೆಗಳನ್ನು ಅಭ್ಯಸಿಸುವುದು ಹಾಗೂ ಪರಿಹಾರ ತಂತ್ರಗಳನ್ನು ಅಳವಡಿಸಿಕೊಳ್ಳುವ ವಿಧಾನಗಳನ್ನು ಕಂಡುಕೊಳ್ಳುವುದು, ಸರ್ಕಾರಿ ಕಾರ್ಯಕ್ರಮಗಳ ಅನುಷ್ಠಾನದ ಬಗೆಯನ್ನು ಅರಿಯುವುದು, ಬುಡಕಟ್ಟು ಜನರ ಮೇಲೆ ನಡೆಯುತ್ತಿರುವ ಪಾಶ್ಚಾತ್ಯೀಕರಣ ಮತ್ತು ತಂತ್ರಜ್ಞಾನದ ಪರಿಣಾಮಗಳನ್ನು ಅಧ್ಯಯನ ಮಾಡುವುದು, ನಾಯಕತ್ವದ ಲಕ್ಷಣಗಳನ್ನು ಅರಿತು, ಅವುಗಳನ್ನು ವೃದ್ಧಿಪಡಿಸಿಕೊಳ್ಳುವುದು ಸೇರಿದಂತೆ ಅನೇಕ ಮಹತ್ವದ ವಿಚಾರಗಳ ಕುರಿತಂತೆ ಸ್ಥಳದಲ್ಲಿ ಅಧ್ಯಯನ ಮಾಡಲೆಂದು ಆಗಮಿಸಿದ ವಿ.ವಿ.ಯ ವಿದ್ಯಾರ್ಥಿಗಳು ಗಣೇಶಪಾಲ, ಜಡ್ಡೀಗದ್ದೆ, ಆಗ್ರಳ್ಳಿ, ಹುಲ್ಲೋರಮನೆ, ಬೋರಿಹೊಂಡ, ನಂದೀಬಾವಿ, ತೋಳಗೋಡ, ಹರಿಗದ್ದೆ, ಕೋಟೆಮನೆ, ಉಮ್ಮಚಗಿ, ಮುಂತಾದ ಪ್ರದೇಶಗಳ ಬುಡಕಟ್ಟು ಸಮುದಾಯದವರು ವಾಸಿಸುವ ಪ್ರದೇಶಗಳಿಗೆ ತೆರಳಿದ್ದರು. ಮಾ. ೧೧ರಂದು ಆರಂಭಗೊಂಡಿದ್ದ ಶಿಬಿರದ ಸಮಾರೋಪ ಸಮಾರಂಭವು ಮಾ. ೧೭ರಂದು ನಡೆಯಿತು. ಗ್ರಾಪಂ ಮಾಜಿ ಅಧ್ಯಕ್ಷ ಸದಾಶಿವ ಭಟ್ಟ ಅಧ್ಯಕ್ಷತೆ ವಹಿಸಿದ್ದರು. ಜ್ಯೋತಿಷ್ಯಾಚಾರ್ಯ ನಾಗೇಂದ್ರ ಭಟ್ಟ ಹಿತ್ಲಳ್ಳಿ ಉಪಸ್ಥಿತಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಜಿ.ವಿ. ಹೆಗಡೆ, ಪ್ರೌಢಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷ ನಾಗೇಂದ್ರ ಹೆಗಡೆ, ನಿವೃತ್ತ ಶಿಕ್ಷಕ ಎನ್.ವಿ. ಹೆಗಡೆ, ಸಾಮಾಜಿಕ ಕಾರ್ಯಕರ್ತರಾದ ಮಹಾಬಲೇಶ್ವರ ಶಾನಭಾಗ, ಮಂಜುನಾಥ ಶೇಟ್, ಬಾಲಚಂದ್ರ ಹೆಗಡೆ, ಗ್ರಾ.ಪಂ. ಸದಸ್ಯೆ ಸುಶೀಲಾ ಸಿದ್ದಿ, ರಂಗ ಕಲಾವಿದ ಶೇಖರ ಸಿದ್ದಿ, ವಿ.ವಿ.ಯ ಉಪನ್ಯಾಸಕರೂ, ಶಿಬಿರದ ಸಹನಿರ್ದೇಶಕರೂ ಆದ ಗಣಪತಿ ಉಪ್ಪಾರ ಸೇರಿದಂತೆ ವಿವಿಧ ಪ್ರಮುಖರು ಉಪಸ್ಥಿತರಿದ್ದರು.

ಪ್ರಾಧ್ಯಾಪಕ ಪ್ರವೀಣ ಕುಮಾರ ಪ್ರಾಸ್ತಾವಿಕ ಮಾತನಾಡಿದರು. ವಿದ್ಯಾರ್ಥಿಗಳಾದ ಲಿಂಗರಾಜ ಸ್ವಾಗತಿಸಿದರು. ಕುಮಾರ ನಿರ್ವಹಿಸಿದರು. ಒಂದು ವಾರದ ಶಿಬಿರಕ್ಕೆ ಪಶ್ಚಿಮಘಟ್ಟ ಅಭಿವೃದ್ಧಿ ಕಾರ್ಯಪಡೆಯ ಮಾಜಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ, ಮಂಚೀಕೇರಿಯ ಉಪವಲಯಾರಣ್ಯಾಧಿಕಾರಿ ಪವನ ಲೋಕೋರ್ ಸೇರಿದಂತೆ ವಿವಿಧ ತಜ್ಞರು ಆಗಮಿಸಿ ವಿದ್ಯಾರ್ಥಿಗಳಿಗೆ ಅಗತ್ಯ ಮಾರ್ಗದರ್ಶನ ನೀಡಿದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ