ಇಂದು ಕೆಆರ್‌ಎಸ್‌ನಲ್ಲಿ ಆಪರೇಷನ್ ಅಭ್ಯಾಸ್ ಅಣಕು ಪ್ರದರ್ಶನ

KannadaprabhaNewsNetwork |  
Published : May 11, 2025, 01:25 AM IST
10ಕೆಎಂಎನ್ ಡಿ27 | Kannada Prabha

ಸಾರಾಂಶ

ತುರ್ತು ಸಂದರ್ಭದಲ್ಲಿ ಅಣೆಕಟ್ಟು ರಕ್ಷಣೆ ಮಾಡುವ ಕುರಿತಂತೆ ಆಪರೇಷನ್ ಅಭ್ಯಾಸ ಅಣಕು ಪ್ರದರ್ಶನ, ಯುದ್ಧದ ವೇಳೆ, ಬೆಂಕಿ ಅನಾಹುತಗಳು, ಅವಘಡ, ತುರ್ತು ಸಂದರ್ಭದಲ್ಲಿ ಜನರು ಗಾಬರಿ, ಭಯ ಅಥವಾ ಆತಂಕಕ್ಕೆ ಒಳಗಾಗದಂತೆ ಅವರಲ್ಲಿ ಆತ್ಮವಿಶ್ವಾಸ ತುಂಬಿ ಅರಿವು ಮೂಡಿಸುವ ಉದ್ದೇಶದಿಂದ ಅಣುಕು ಪ್ರದರ್ಶನ ಆಯೋಜಿಸಲಾಗಿದೆ.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಕೆಆರ್‌ಎಸ್ ಬೃಂದಾವನ ಉದ್ಯಾನವನದಲ್ಲಿ ಮೇ 11ರಂದು ಅಣೆಕಟ್ಟೆ ರಕ್ಷಣೆ ಕುರಿತಂತೆ ಆಪರೇಷನ್ ಅಭ್ಯಾಸ್ ಅಣಕು ಪ್ರದರ್ಶನದ ಪೂರ್ವಭಾವಿ ಸಿದ್ಧತಾ ಕಾರ್ಯ ನಡೆಯಿತು.

ತಾಲೂಕಿನ ಕೆಆರ್‌ಎಸ್ ವಿಶಾಲ ಉದ್ಯಾನವನದಲ್ಲಿ ಮೇ 11ರ ಸಂಜೆ 4 ರಿಂದ 7ಗಂಟೆವರೆಗೆ ಆಪರೇಷನ್ ಸಿಂದೂರ ಕುರಿತಾಗಿ ಸ್ಥಳೀಯ ಅಧಿಕಾರಿ ವರ್ಗ ಸೇರಿದಂತೆ ಸಾರ್ವಜನಿಕರು, ಪ್ರವಾಸಿಗರು, ವಿದ್ಯಾರ್ಥಿಗಳು ಮಾಕ್ ಡ್ರಿಲ್ ಅಭ್ಯಾಸದ ಮೂಲಕ ಅಣಕು ಪ್ರದರ್ಶನ ಮಾಡುವರು.

ತುರ್ತು ಸಂದರ್ಭದಲ್ಲಿ ಅಣೆಕಟ್ಟು ರಕ್ಷಣೆ ಮಾಡುವ ಕುರಿತಂತೆ ಆಪರೇಷನ್ ಅಭ್ಯಾಸ ಅಣಕು ಪ್ರದರ್ಶನ, ಯುದ್ಧದ ವೇಳೆ, ಬೆಂಕಿ ಅನಾಹುತಗಳು, ಅವಘಡ, ತುರ್ತು ಸಂದರ್ಭದಲ್ಲಿ ಜನರು ಗಾಬರಿ, ಭಯ ಅಥವಾ ಆತಂಕಕ್ಕೆ ಒಳಗಾಗದಂತೆ ಅವರಲ್ಲಿ ಆತ್ಮವಿಶ್ವಾಸ ತುಂಬಿ ಅರಿವು ಮೂಡಿಸುವ ಉದ್ದೇಶದಿಂದ ಅಣುಕು ಪ್ರದರ್ಶನ ಆಯೋಜಿಸಲಾಗಿದೆ. ಜಿಲ್ಲಾಡಳಿತದೊಂದಿಗೆ ಎಲ್ಲರೂ ಸಹಕಾರ ನೀಡಬೇಕು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಮನವಿ ಮಾಡಿದ್ದಾರೆ.

ಅಣುಕು ಕಾರ್ಯಾಚರಣೆಗೆ ವಾರ್ನಿಂಗ್ ಟೀಂ, ಕಂಟ್ರೋಲ್ ರೂಂ, ಇವ್ಯಾಕುಯೇಷನ್ ಟೀಂ, ಅಗ್ನಿ ಶಾಮಕ ದಳ, ಎನ್.ಸಿ.ಸಿ. ತಂಡ, ಹೋಂ ಗಾರ್ಡ್, ಪೊಲೀಸ್ ಇಲಾಖೆ, ಆಂಬ್ಯುಲೆನ್ಸ್‌ , ಪ್ರಥಮ ಚಿಕಿತ್ಸೆ, ವೈದ್ಯಕೀಯ ತಂಡ, ಸಾರಿಗೆ ತಂಡ, ಸಂವಾಹನ ತಂಡಗಳನ್ನು ರಚಿಸಿ ಆಯಾ ಇಲಾಖೆಯ ಅಧಿಕಾರಿಗಳಿಗೆ ಜವಾಬ್ದಾರಿ ವಹಿಸಿದ್ದು, ಈಗಾಗಲೇ ಎಲ್ಲಾ ಸಿದ್ಧತೆಗಳು ನಡೆದಿವೆ ಎಂದು ಎಎಸ್‌ಪಿ ಸಿ.ಇ. ತಿಮ್ಮಯ್ಯ ತಿಳಿಸಿದರು.

ಈ ವೇಳೆ ಎಡಿಸಿ ಬಿ.ಸಿ.ಶಿವಾನಂದ ಮೂರ್ತಿ, ಎಎಸ್ಪಿ 2 ಗಂಗಾಧರ ಮೂರ್ತಿ, ಡಿವೈಎಸ್ಪಿ ಶಾಂತಮಲ್ಲಪ್ಪ, ತಹಸೀಲ್ದಾರ್ ಪರುಶುರಾಮ್ ಸತ್ತಿಗೇರಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿ ಸಾರ್ವಜನಿಕರು ಅಣಕು ಸಿದ್ದತೆಯಲ್ಲಿ ಉಪಸ್ಥಿತರಿದ್ದರು.

ಕೆಆರ್ ಎಸ್ ನೀರಿನ ಮಟ್ಟ

ಗರಿಷ್ಠ ಮಟ್ಟ - 124.80 ಅಡಿ

ಇಂದಿನ ಮಟ್ಟ – 93.42 ಅಡಿ

ಒಳ ಹರಿವು – 122 ಕ್ಯುಸೆಕ್

ಹೊರ ಹರಿವು – 1631 ಕ್ಯುಸೆಕ್

ನೀರಿನ ಸಂಗ್ರಹ – 18.080 ಟಿಎಂಸಿ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''
ಪಲ್ಸ್‌ ಪೋಲಿಯೋ ಹಾಕಿಸಿ, ಅಂಗವಿಕತೆ ತಪ್ಪಿಸಿ