ಚಿಕ್ಕಮಗಳೂರುಚಿಕ್ಕಮಗಳೂರು ನಗರದ ಹೊರವಲಯದ ಮತ್ತಾವರ ಸುತ್ತಮುತ್ತಲ ಗ್ರಾಮಗಳಲ್ಲಿ ನಿರಂತರವಾಗಿ ಸಂಚರಿಸುತ್ತಿರುವ ಒಂಟಿ ಕಾಡಾನೆ ಸೆರೆಹಿಡಿಯಲು ಅರಣ್ಯ ಇಲಾಖೆ ಸಜ್ಜಾಗಿದೆ. ಈ ಹಿನ್ನೆಲೆಯಲ್ಲಿ ದುಬಾರೆ ಮತ್ತು ಸಕ್ರೆಬೈಲು ಆನೆ ಶಿಬಿರ ಗಳಿಂದ ಆರು ಕುಮ್ಕಿ ಆನೆಗಳನ್ನು ಮತ್ತಾವರಕ್ಕೆ ಕರೆತರಲಾಗಿದೆ. ಶುಕ್ರವಾರ ಬೆಳಗ್ಗೆ ಒಂಟಿ ಸಲಗ ಸೆರೆ ಕಾರ್ಯಾಚರಣೆ ಆರಂಭವಾಗಲಿದೆ.
- ಮತ್ತಾವರಕ್ಕೆ ಬಂದ ಆರು ಕುಮ್ಕಿ ಆನೆಗಳು । ಆನೆ ಸೆರೆಗೆ ಶಾಸಕ ಒತ್ತಾಯ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಚಿಕ್ಕಮಗಳೂರು ನಗರದ ಹೊರವಲಯದ ಮತ್ತಾವರ ಸುತ್ತಮುತ್ತಲ ಗ್ರಾಮಗಳಲ್ಲಿ ನಿರಂತರವಾಗಿ ಸಂಚರಿಸುತ್ತಿರುವ ಒಂಟಿ ಕಾಡಾನೆ ಸೆರೆಹಿಡಿಯಲು ಅರಣ್ಯ ಇಲಾಖೆ ಸಜ್ಜಾಗಿದೆ. ಈ ಹಿನ್ನೆಲೆಯಲ್ಲಿ ದುಬಾರೆ ಮತ್ತು ಸಕ್ರೆಬೈಲು ಆನೆ ಶಿಬಿರ ಗಳಿಂದ ಆರು ಕುಮ್ಕಿ ಆನೆಗಳನ್ನು ಮತ್ತಾವರಕ್ಕೆ ಕರೆತರಲಾಗಿದೆ. ಶುಕ್ರವಾರ ಬೆಳಗ್ಗೆ ಒಂಟಿ ಸಲಗ ಸೆರೆ ಕಾರ್ಯಾಚರಣೆ ಆರಂಭವಾಗಲಿದೆ.ದುಬಾರೆ ಆನೆ ಶಿಬಿರದಿಂದ ಸಾಗರ್, ಜ್ಯೂನಿಯರ್ ಅರ್ಜುನ ಹಾಗೂ ಭೀಷ್ಮ ಮತ್ತು ಸಕ್ರೆಬೈಲು ಆನೆ ಶಿಬಿರದಿಂದ ಸುಗ್ರೀವ, ಮಾಣಿಕ್ಯ ಹಾಗೂ ಅಯ್ಯಪ್ಪ ಸೇರಿದಂತೆ ಆರು ಕುಮ್ಕಿ ಆನೆಗಳು ಗುರುವಾರ ಮತ್ತಾವರಕ್ಕೆ ಬಂದಿಳಿದಿವೆ. ಸುಗ್ರೀವ ನೇತೃತ್ವ ದಲ್ಲಿ ಒಂಟಿ ಸಲಗವನ್ನು ಸೆರೆಹಿಡಿಯಲು ಅರಣ್ಯ ಇಲಾಖೆ ಸಿದ್ಧತೆ ಮಾಡಿಕೊಂಡಿದೆ.ಮತ್ತಾವರ, ಬಾಚಿಗನಹಳ್ಳಿ, ಮಾರಿಕಟ್ಟೆ, ಆಲದಗುಡ್ಡೆ, ದಂಬದಹಳ್ಳಿ, ನೆಲ್ಲೂರು ಹಾಗೂ ಇಂದಾವರ ಗ್ರಾಮಗಳ ಸುತ್ತಮುತ್ತ ಈ ಒಂಟಿ ಸಲಗ ನಿರಂತರವಾಗಿ ಸಂಚರಿಸುತ್ತಿದ್ದು, ತೋಟ-ಗದ್ದೆಗಳಿಗೆ ನುಗ್ಗಿ ಬೆಳೆ ಹಾನಿ ಮಾಡುತ್ತಿದೆ. ಇದರಿಂದ ಗ್ರಾಮ ಸ್ಥರು ಆತಂಕದಲ್ಲಿದ್ದಾರೆ. ಮತ್ತಾವರ ಅರಣ್ಯ ಪ್ರದೇಶವನ್ನೇ ನೆಲೆ ಮಾಡಿಕೊಂಡ ಸಲಗದ ಹಾವಳಿ ನಿಯಂತ್ರಿಸಿ ಸೆರೆಹಿಡಿಯು ವಂತೆ ಶಾಸಕ ಎಚ್.ಡಿ.ತಮ್ಮಯ್ಯ ಅರಣ್ಯ ಇಲಾಖೆಗೆ ಒತ್ತಾಯಿಸಿದ್ದರು. ಈ ಹಿನ್ನೆಲೆಯಲ್ಲಿ ಆರು ಕುಮ್ಕಿ ಆನೆ ಗಳನ್ನು ಕರೆತಂದು ಕಾರ್ಯಾಚರಣೆಗೆ ಸಿದ್ಧತೆ ನಡೆಸಲಾಗಿದೆ.ಇತ್ತೀಚೆಗೆ ಬೃಹತ್ ಕಾಡಾನೆಗಳ ಗುಂಪಿನಿಂದ ಬೇರ್ಪಟ್ಟಿರುವ ಆನೆಗಳು ಆಕ್ರಮಣಕಾರಿ ಸ್ವಭಾವ ಹೊಂದಿರುವ ಸಾಧ್ಯತೆಯಿದೆ.
....ಬಾಕ್ಸ್...
ಸಾರ್ವಜನಿಕರು ಎಚ್ಚರಿಕೆ ವಹಿವಹಿಸಲು ಆರಣ್ಯ ಇಲಾಖೆ ಮನವಿ
ಸಾರ್ವಜನಿಕರು ಕಾರ್ಯಾಚರಣೆ ನಡೆಯುವ ಸ್ಥಳದ ಸುತ್ತಮುತ್ತ ಎಚ್ಚರಿಕೆ ವಹಿಸಬೇಕು. ಕಾಡಾನೆಗಳು ಕಂಡುಬಂದಲ್ಲಿ ಅವುಗಳ ಹತ್ತಿರ ತೆರಳುವುದು, ಛಾಯಾಚಿತ್ರ ತೆಗೆಯುವುದು, ಕೋಲು ಅಥವಾ ಇತರ ಉಪಕರಣಗಳಿಂದ ಹಲ್ಲೆ ನಡೆಸಲು ಯತ್ನಿಸುವುದು ಹಾಗೂ ಪಟಾಕಿ ಸಿಡಿಸಿ ಆನೆಗಳನ್ನು ಕೆರಳಿಸುವಂತಹ ಕೃತ್ಯ ಮಾಡಬಾರದು ಎಂದು ಅರಣ್ಯ ಇಲಾಖೆ ಸಾರ್ವಜನಿಕರಲ್ಲಿ ಮನವಿ ಮಾಡಿದೆ.
.....ಕೋಟ್..
ಚಿಕ್ಕಮಗಳೂರು ನಗರದ ಹೊರ ವಲಯದ ಮತ್ತಾವರ ಸುತ್ತುಮುತ್ತಭಾಗದಲ್ಲಿ ಕಳೆದ 10 ದಿನಗಳಿಂದ ಒಂಟಿ ಸಲಗ ಸಂಚರಿಸುತ್ತಿದ್ದು, ಬೇಲೂರಿನ 2 ಪ್ರಾಣ ಹಾನಿ ಬಳಿಕ 10 ಆನೆ ಸೆರೆಗೆ ಅರಣ್ಯ ಇಲಾಖೆ ಪಟ್ಟಿ ಸಿದ್ಧಪಡಿಸಿಕೊಂಡಿತ್ತು. ಆ ಪಟ್ಟಿ ಯಲ್ಲಿ ಈ ಆನೆ ಸಹ ಇದೆ. ಹೀಗಾಗಿ,ಸೆರೆಗೆ ಅರಣ್ಯ ಇಲಾಖೆ ಕುಮ್ಕಿ ಆನೆಗಳನ್ನು ಕರೆ ತಂದಿದೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.