ಆಪರೇಷನ್‌ ಸಿಂದೂರ್: ಸೇನೆಗೆ ಅಭಿನಂದನೆ

KannadaprabhaNewsNetwork | Published : May 10, 2025 1:05 AM
Follow Us

ಸಾರಾಂಶ

ಬಿಜೆಪಿ ಘಟಕದ ಅನೇಕ ಮಂದಿ ಮುಖಂಡರು ಹಾಗೂ ಕಾರ್ಯಕರ್ತರು ಕೇಂದ್ರ ಸರ್ಕಾರ ಹಾಗೂ ಭಾರತೀಯ ಸೇನೆಗೆ ಅಭಿನಂದನೆ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಪಾವಗಡ

ಆಪರೇಷನ್‌ ಸಿಂದೂರ ಹೆಸರಿನಲ್ಲಿ ದಾಳಿ ನಡೆಸಿ ಪಾಕಿಸ್ತಾನ ಭಯೋತ್ಪಾದಕರನ್ನು ಭಾರತೀಯ ಸೇನೆ ಹತ್ಯೆ ಮಾಡಿದ್ದ ಹಿನ್ನಲೆಯಲ್ಲಿ ಶುಕ್ರವಾರ ತಾಲೂಕು ಬಿಜೆಪಿ ಘಟಕದ ಅನೇಕ ಮಂದಿ ಮುಖಂಡರು ಹಾಗೂ ಕಾರ್ಯಕರ್ತರು ಕೇಂದ್ರ ಸರ್ಕಾರ ಹಾಗೂ ಭಾರತೀಯ ಸೇನೆಗೆ ಅಭಿನಂದನೆ ವ್ಯಕ್ತಪಡಿಸಿದರು.

ಇದೇ ವೇಳೆ ತಾಲೂಕು ಬಿಜೆಪಿ ಅಧ್ಯಕ್ಷ ದೊಡ್ಡಹಳ್ಳಿ ಅಶೋಕ್‌ ಮಾತನಾಡಿ,ಅಪರೇಷನ್‌ ಸಿಂದೂರ ಕಾರ್ಯಚರಣೆ ಮೂಲಕ ಭಾರತೀಯ ಸೇನೆ ದಾಳಿ ನಡೆಸಿ ಪಾಕಿಸ್ತಾನ ಉಗ್ರರನ್ನು ದ್ವಂಸಗೊಳಿಸಿದ್ದು ಇಡೀ ದೇಶವೇ ಪ್ರಶಂಸಿಸುತ್ತಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಕೊಟ್ಟ ಮಾತು ಇಟ್ಟ ಹೆಜ್ಜೆಯನ್ನು ತಪ್ಪುವುದಿಲ್ಲ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದು ದೇಶದ ಹೆಮ್ಮೆಯ ಸಂಗತಿಯಾಗಿದೆ. ಭಾರತೀಯ ಸೇನೆಯ ಕಾರ್ಯಕ್ಕೆ ಅಭಿನಂದನೆ ಸಲ್ಲಿಸುವುದಾಗಿ ಹೇಳಿದರು.

ಸಮಾಜ ಸೇವಕ ಹಾಗೂ ಯುವ ಮುಖಂಡರಾದ ನೆರಳೇಕುಂಟೆ ನಾಗೇಂದ್ರಕುಮಾರ್‌ ಮಾತನಾಡಿ, ಪಹಲ್ಗಾಮ್‌ನಲ್ಲಿ ಪಾಕ್ ಭಯೋತ್ಪಾದಕರು 26 ಅಮಾಯಕ ಹಿಂದೂ ಪ್ರವಾಸಿಗಳನ್ನು ಕೊಂದಿದ್ದು ಭಾರತೀಯ ಸೇನೆ ಪಾಕಿಸ್ತಾನ ಭಯೋತ್ಫದಕರಿಗೆ ಸರಿಯಾದ ಬುದ್ದಿ ಕಲಿಸಿದೆ. ಪದೇ ಪದೇ ಕ್ಯಾತೆ ತೆಗೆಯುವ ಮೂಲಕ ತೆರೆಮರೆಯ ಮೇಲೆ ಭಾರತೀಯರ ಮೇಲೆ ಪಾಕಿಸ್ತಾನ ಉಗ್ರರು ದಾಳಿ ನಡೆಸಿದ್ದಾರೆ. ಉಗ್ರರ ಅಟ್ಟಹಾಸ ಶಾಶ್ವತವಾಗಿ ನಿರ್ಮೂಲನ ಅಗಬೇಕು. ನಮ್ಮ ಸೈನಿಕರ ಸುರಕತೆಗೆ ಪ್ರಾರ್ಥಿಸಿ ಇಲ್ಲಿನ ಶ್ರೀ ಶನಿಮಹಾತ್ಮಸ್ವಾಮಿ ಹಾಗೂ ಶ್ರೀ ಆಂಜನೇಯಸ್ವಾಮಿ ಹಾಗೂ ನರಸಿಂಹಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಗಿದೆ ತಿಳಿಸಿ ಭಾರತೀಯ ಸೇನೆಗೆ ಅಭಿನಂದನೆ ಸಲ್ಲಿಸಿದರು.

ಸಚಿವ ಜಮೀರ್‌ ಖಾನ್‌ ಮನವಿಯ ಬೆನ್ನಲೇ ತಾಲೂಕಿನ ಮುಸ್ಲಿಂ ಸಮಾಜದ ಬಂಧುಗಳು ಪಾಕಿಸ್ತಾನ ಭಯೋತ್ಪದಕರ ಧೋರಣೆ ಖಂಡಿಸಿದ್ದು ಪಟ್ಟಣ ಸೇರಿದಂತೆ ತಾಲೂಕಿನ ಎಲ್ಲಾ ಮಸೀದಿಗಳಲ್ಲಿ ಭಾರತ ಹಾಗೂ ಭಾರತೀಯ ಸೈನಿಕರ ಸುರಕ್ಷತೆ ಕೋರಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿರುವುದಾಗಿ ತಿಳಿದುಬಂದಿದೆ.