ಆಪರೇಷನ್‌ ಸಿಂದೂರ, ತಿರಂಗಾ ಯಾತ್ರೆ

KannadaprabhaNewsNetwork | Published : May 23, 2025 12:07 AM
ಕಾಶ್ಮೀರದ ಪಹಲ್ಗಾಮನಲ್ಲಿ ಹಿಂದುಗಳ ಹತ್ಯೆಗೈದ ಪಾಕಿಸ್ತಾನಿ ಉಗ್ರಗಾಮಿಗಳ ನೆಲೆಗಳ ಮೇಲೆ ಆಪರೇಷನ್ ಸಿಂದೂರ ಮೂಲಕ ಯಶಸ್ವಿ ಕಾರ್ಯಾಚರಣೆ ನಡೆಸಿದ ಭಾರತೀಯ ಯೋಧರಿಗೆ ಕೃತಜ್ಞತೆ ಸಲ್ಲಿಸುವ ಉದ್ದೇಶದಿಂದ ಮಾಜಿ ಸೈನಿಕರಿಂದ ಮತ್ತು ಗ್ರಾಮಸ್ಥರಿಂದ ಡಂಬಳ ಹೋಬಳಿಯ ಗ್ರಾಮಸ್ಥರ ಸಂಯುಕ್ತ ಆಶ್ರಯದಲ್ಲಿ ಬೃಹತ್ ತಿರಂಗಾ ಯಾತ್ರಾ ಆಯೋಜಿಸಲಾಗಿತ್ತು.
Follow Us

ಡಂಬಳ: ಕಾಶ್ಮೀರದ ಪಹಲ್ಗಾಮನಲ್ಲಿ ಹಿಂದುಗಳ ಹತ್ಯೆಗೈದ ಪಾಕಿಸ್ತಾನಿ ಉಗ್ರಗಾಮಿಗಳ ನೆಲೆಗಳ ಮೇಲೆ ಆಪರೇಷನ್ ಸಿಂದೂರ ಮೂಲಕ ಯಶಸ್ವಿ ಕಾರ್ಯಾಚರಣೆ ನಡೆಸಿದ ಭಾರತೀಯ ಯೋಧರಿಗೆ ಕೃತಜ್ಞತೆ ಸಲ್ಲಿಸುವ ಉದ್ದೇಶದಿಂದ ಮಾಜಿ ಸೈನಿಕರಿಂದ ಮತ್ತು ಗ್ರಾಮಸ್ಥರಿಂದ ರಾಷ್ಟ್ರದ ಭಕ್ತಿಯ ದ್ಯೋತಕವಾಗಿ ಡಂಬಳ ಹೋಬಳಿಯ ಗ್ರಾಮಸ್ಥರ ಸಂಯುಕ್ತ ಆಶ್ರಯದಲ್ಲಿ ಬೃಹತ್ ತಿರಂಗಾ ಯಾತ್ರಾ ಆಯೋಜಿಸಲಾಗಿತ್ತು.

ಗ್ರಾಮದ ಜಗದ್ಗುರು ತೋಂಟದಾರ್ಯ ಕಲ್ಯಾಣ ಮಂಟಪದ‌ ಆವರಣದಿಂದ ಹರ್ಲಾಪುರದ ಅಭಿನವ ಕೋಟ್ರೇಶ್ವರ ಮಹಾಸ್ವಾಮಿಗಳು ಯಾತ್ರೆಗೆ ಚಾಲನೆ ನೀಡಿದರು. ಇದೇ ಸಂದರ್ಭದಲ್ಲಿ ಗದಗ, ಮುಂಡರಗಿ, ಡಂಬಳ ಭಾಗದ 40ಕ್ಕೂ ಹೆಚ್ಚು ನಿವೃತ್ತ ಸೈನಿಕರನ್ನು ಸನ್ಮಾನಿಸಲಾಯಿತು.

ಗ್ರಾಮದ ತೋಂಟದಾರ್ಯ ಮಠದ ಆವರಣದಿಂದ ಪ್ರಾರಂಭವಾಗಿ ಗ್ರಾ‌ಮ ಪಂಚಾಯತ ಮಾರ್ಗವಾಗಿ ಮುಖ್ಯ ಪೇಟೆಯಿಂದ ಸಾಗಿ ಗ್ರಾಮದ ವಿವಿಧ ಬಡಾವಣೆಗಳಲ್ಲಿ ಸಂಚರಿಸಿತು ನಿವೃತ್ತ ಸೈನಿಕರಿಂದ ಮತ್ತು ಯುವಕರಿಂದ ದೇಶಾಭಿಮಾನದ ಘೋಷವಾಕ್ಯಗಳನ್ನು ಹೇಳುವುದರ ಮೂಲಕ ಸೈನಿಕರ ಜೋತೆ ನಾವಿದ್ದೇವೆ ಎನ್ನುವ ಸಂದೇಶವನ್ನು ನೀಡಿದರು.

ತಿರಂಗಾ ಯಾತ್ರಾಗೆ ಚಾಲನೆ ನೀಡಿ‌ ಮಾತನಾಡಿದ ಸ್ವಾಮೀಜಿ, ಭಾರತ ದೇಶದ ಪರಂಪರೆ ಎಂದರೆ ಉತ್ತಮ ಸಂಸ್ಕಾರ, ಸಂಸ್ಕೃತಿ, ಉತ್ತಮ ಆದರ್ಶಗಳನ್ನು ಹೊಂದಿರುವ ವೀರ ಪರಂಪರೆ ಉಳ್ಳದೇಶವಾಗಿದೆ. ನಮ್ಮ ಸೈನಿಕರ ದೇಶದ ದೊಡ್ಡ ಶಕ್ತಿಯಾಗಿದ್ದಾರೆ ಎಂದು ಹೇಳಿದರು.

ಅಂದಪ್ಪ ಹಾರೂಗೇರಿ ಮಾತನಾಡಿ, ಪಹಲ್ಗಾಮ್ ಘಟನೆ ಬಳಿಕ ಪಾಕಿಸ್ತಾನಕ್ಕೆ ನಮ್ಮ ಹೆಮ್ಮೆಯ ಸೈನಿಕರು ತಕ್ಕ ಉತ್ತರ ನೀಡಿದ್ದಾರೆ. ಪಾಕಿಸ್ತಾನದಲ್ಲಿನ ಉಗ್ರರ ಅಡಗುತಾಣಗಳನ್ನು ತರಬೇತಿ ಶಿಬಿರಗಳನ್ನು ಭಾರತೀಯ ಸೇನಾಪಡೆ ನಾಶಗೊಳಿಸಿದ ನಮ್ಮ ಸೈನಿಕರ ಕಾರ್ಯ ದೇಶದ ಜನತೆ ಎಂದು ಮರೆಯದಂತಹ ಕಾರ್ಯವಾಗಿದೆ ಎಂದು ಹೇಳಿದರು.

ಮಾಜಿ ಸೈನಿಕ ವಾಸಪ್ಪ ಕಾಶಭೋವಿ ಮಾತನಾಡಿ, ಆಪರೇಷನ್ ಸಿಂದೂರ ಮೂಲಕ 72 ತಾಸುಗಳಲ್ಲಿ ಪಾಕಿಸ್ತಾನಕ್ಕೆ ನಮ್ಮ ಸೈನ್ಯ ತಕ್ಕ ಉತ್ತರ ಕೊಟ್ಟಿದೆ. ಭಾರತೀಯ ಯೋಧರು ನಡೆಸಿದ ದಾಳಿಯಿಂದ ಚೇತರಿಸಿಕೊಳ್ಳಲು ಪಾಕಿಸ್ತಾನಕ್ಕೆ ಎರಡು ಮೂರು ವರ್ಷಗಳಾದರೂ ಬೇಕು ಎಂದರು.

ಈ ಸಂದರ್ಭದಲ್ಲಿ ಗ್ರಾಮದ ಹಿರಿಯರಾದ ಜಿ.ವಿ. ಹಿರೇಮಠ, ಬೀರಪ್ಪ ಬಂಡಿ, ಕೃಷ್ಣಾ ಬಂಡಿ, ಕುಬೇರಪ್ಪ ಬಂಡಿ, ರಾಗು ಹಡಪದ, ಯಮನೂರ ದೊಡ್ಡಮನಿ, ನಿಂಗಪ್ಪ ಮಾದರ, ರವಿ ಕರಿಗಾರ, ಮುದ್ಲಿಂಗಪ್ಪ ಕೊರ್ಲಹಳ್ಳಿ, ವೆಂಕನಗೌಡ ಪಾಟೀಲ, ನಾಗರಾಜ ಕಾಟರಳ್ಳಿ, ರಾಜೇಶ ಅರಕಲ್ಲ, ಗವಿಯಪ್ಪ ಮಠದ, ಸಿದ್ದನಗೌಡ ಪಾಟೀಲ, ಪ್ರಭು ಕರಮುಡಿ, ಪಂಚಾಕ್ಷರಯ್ಯ ಹರ್ಲಾಪುರಮಠ , ಮುತ್ತನಗೌಡ ಚಿನ್ನಪ್ಪಗೌಡರ, ಬಸುರಾಜ ಚೆನ್ನಳ್ಳಿ, ಶಿವು ಬಂಡಿ, ಈಶ್ವರಗೌಡ ಪಾಟೀಲ, ಉಮೇಶಗೌಡ ಹಿರೇಗೌಡರ, ಸುರೇಶ ಚವ್ಹಾಣ, ಪ್ರಕಾಶ ಕೋತಂಬ್ರಿ, ಈಶಪ್ಪ ರಂಗಪ್ಪನವರ, ಲಕ್ಷ್ಮಣ ಬೂದಿಹಾಳ, ಹನಮಂತ ಪೂಜಾರ, ಅಮರೇಶ ಸಂಗನಾಳ, ಸೋಮಶೇಖರಯ್ಯ ಹಿರೇಮಠ, ಮುದಕಪ್ಪ ತಳಕಲ್ಲ, ಮುತ್ತಪ್ಪ ರೋಣದ, ಬಸುರಾಜ ಈಟಗಿ, ಮಲ್ಲೇಶ ಪೂಜಾರ, ಪ್ರಮೋದ ನಾಡಗೌಡರ, ವಾಸುದೇವ ಪಾಟೀಲ, ಪಿ.ಡಿ.ಪಾಟೀಲ,ಮುತ್ತಜ್ಜ ಹಿರೇಮಠ, ನಾಗರಾಜ ನವಲಿ, ಫಕೀರಪ್ಪ ಉಳ್ಳಾಗಡ್ಡಿ, ಐಟಿಐ ಕಾಲೇಜಿನ, ಶಾಲಾ ವಿದ್ಯಾರ್ಥಿಗಳು, ಶಾಲಾ ಶಿಕ್ಷಕರು, ಡಂಬಳ ಹೋಬಳಿಯ ಗ್ರಾಮದ ಹಿರಿಯರು, ಯುವಕರು, ಪೋಲಿಸ್ ಇಲಾಖೆ ಇದ್ದರು.