ದೇಶದ ಸೈನಿಕರ ತಾಕತ್ತು ಸಾರಿದ ಆಪರೇಷನ್ ಸಿಂದೂರ

KannadaprabhaNewsNetwork |  
Published : May 30, 2025, 12:06 AM IST
೨೯ಎಚ್‌ಆರ್‌ಆರ್೧ ಹಾಗೂ ೧ ಎ ನಗರದಲ್ಲಿ ನಾಗರೀಕ ಹಿತರಕ್ಷಣಾ ಸಮಿತಿಯಿಂದ ಗುರುವಾರ ಹಮ್ಮಿಕೊಂಡಿದ್ದ ವಿಜಯ ತಿರಂಗಾ ಯಾತ್ರೆಯ ದೃಶ್ಯ.೨೯ಎಚ್‌ಆರ್‌ಆರ್೧ ಬಿ ವಿಜಯ ತಿರಂಗಾ ಯಾತ್ರೆಯ ಅಂಗವಾಗಿ ಗುರುವಾರ ನಗರದ ಎಚ್.ಕೆ.ವೀರಪ್ಪ ಕಲ್ಯಾಣ ಮಂಟಪದಲ್ಲಿ ನಡೆದ ಸಾರ್ವಜನಿಕ ಸಭೆಯನ್ನು ಭಾರತ ಮಾತೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟನೆ ಮಾಡಲಾಯಿತು. ಶಾಸಕ ಬಿ.ಪಿ.ಹರೀಶ್, ವೀರೇಶ್ ಹನಗವಾಡಿ,ಯಾದವ ಕೃಷ್ಣ, ಚಂದ್ರಶೇಖರ್ ಪೂಜಾರ್ ಹಾಗೂ ಇತರರಿದ್ದರು. | Kannada Prabha

ಸಾರಾಂಶ

ಆಪರೇಷನ್ ಸಿಂದೂರ ಮೂಲಕ ಜಗತ್ತಿಗೆ ಭಾರತ ದೇಶದ ತಾಕತ್ತನ್ನು ಪರಿಚಯಿಸಿದ ಕೀರ್ತಿ ಸೈನಿಕರು ಹಾಗೂ ವಿಜ್ಞಾನಿಗಳಿಗೆ ಸಲ್ಲುತ್ತದೆ ಎಂದು ದಕ್ಷಿಣ ಪ್ರಾಂತ ಸಹ ಸಂಪರ್ಕ ಪ್ರಮುಖ ಯಾದವ ಕೃಷ್ಣ ಹೇಳಿದ್ದಾರೆ.

- ಹರಿಹರದಲ್ಲಿ ಯಾದವ ಕೃಷ್ಣ ಶ್ಲಾಘನೆ । ನಾಗರೀಕ ಹಿತರಕ್ಷಣಾ ಸಮಿತಿಯಿಂದ ವಿಜಯ ತಿರಂಗಾ ಯಾತ್ರೆ ಸಭೆ

- - -

ಕನ್ನಡಪ್ರಭ ವಾರ್ತೆ ಹರಿಹರ

ಆಪರೇಷನ್ ಸಿಂದೂರ ಮೂಲಕ ಜಗತ್ತಿಗೆ ಭಾರತ ದೇಶದ ತಾಕತ್ತನ್ನು ಪರಿಚಯಿಸಿದ ಕೀರ್ತಿ ಸೈನಿಕರು ಹಾಗೂ ವಿಜ್ಞಾನಿಗಳಿಗೆ ಸಲ್ಲುತ್ತದೆ ಎಂದು ಆರ್‌ಎಸ್‌ಎಸ್‌ ದಕ್ಷಿಣ ಪ್ರಾಂತ ಸಹ ಸಂಪರ್ಕ ಪ್ರಮುಖ ಯಾದವ ಕೃಷ್ಣ ಹೇಳಿದರು.

ನಗರದಲ್ಲಿ ನಾಗರೀಕ ಹಿತರಕ್ಷಣಾ ಸಮಿತಿಯಿಂದ ಗುರುವಾರ ವಿಜಯ ತಿರಂಗಾ ಯಾತ್ರೆ ಅಂಗವಾಗಿ ಎಚ್.ಕೆ.ವೀರಪ್ಪ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ಸಾರ್ವಜನಿಕ ಸಭೆಯಲ್ಲಿ ಅವರು ಮಾತನಾಡಿದರು.

ಪಹಲ್ಗಾಂನಲ್ಲಿ ಅಮಾಯಕ ಪ್ರವಾಸಿಗರ ಧರ್ಮವನ್ನು ಕೇಳಿ ಹತ್ಯೆಯನ್ನು ಮಾಡಿದ ಭಯೋತ್ಪಾದಕರ ಪೈಶಾಚಿಕ ಕೃತ್ಯ ಕೋಟ್ಯಂತರ ಭಾರತೀಯರ ಸಹನೆ ಅಣಕಿಸುವಂತಿತ್ತು. ಇಡೀ ಜಗತ್ತು ಭಾರತ ಪ್ರತೀಕಾರ ತೀರಿಸಿಕೊಳ್ಳಲಿ ಎಂದು ಕಾಯುತ್ತಿತ್ತು. ಆಪರೇಷನ್ ಸಿಂದೂರ ಕೇವಲ ನಾಲ್ಕು ದಿನಗಳಲ್ಲಿ ಮಾನವೀಯತೆಯೊಂದಿಗೆ ಯುದ್ಧ ಮಾಡಿ ಶತ್ರು ರಾಷ್ಟ್ರದೊಂದಿಗೆ ಇಡೀ ಜಗತ್ತಿಗೆ ನಮ್ಮ ಶಕ್ತಿ ಎನೆಂದು ನಮ್ಮ ಭಾರತ ದೇಶ ತೋರಿಸಿದೆ.

ಪಾಕಿಸ್ತಾನದ ಹೃದಯ ಭಾಗಕ್ಕೆ ಭಾರತದ ಕ್ಷೀಪಣಿಗಳು ನುಗ್ಗಿ ೧೧ ಎರ್ ಬೇಸ್ ಹಾಗೂ ೯ ಭಯೋತ್ಪಾದಕರ ತರಬೇತಿ ಕೇಂದ್ರಗಳನ್ನು ದ್ವಂಸ ಮಾಡಿವೆ. ಕಳೆದ ೭೫ ವರ್ಷಗಳಲ್ಲಿ ಅನೇಕ ವಿಜಯೋತ್ಸವವನ್ನು ಸೈನಿಕರ ದಾಳಿ ನಂತರ ನಾವು ಆಚರಿಸಿದ್ದೇವೆ. ಆದರೆ ಆಪರೇಷನ್ ಸಿಂದೂರ ಮೂಲಕ ಇದು ಸೌಮ್ಯ ಸ್ವಾಭಾವದ ಭಾರತವಲ್ಲ ಎಂಬುದು ನಾಲ್ಕು ದಿಕ್ಕುಗಳಿಗೆ ತಿಳಿಸಲಾಗಿದೆ. ಈ ಸಂಭ್ರಮದಲ್ಲಿ ವಿಜಯೋತ್ಸವ ಆಚರಿಸುತ್ತಿರುವುದು ನಮ್ಮ ಹೆಮ್ಮೆ ಎಂದರು.

ಬೆಳಗ್ಗೆ ನಗರದ ಹರಿಹರೇಶ್ವರ ದೇವಸ್ಥಾನ ದಿಂದ ಆರಂಭವಾದ ತಿರಂಗಾ ಯಾತ್ರೆಗೆ ನಿವೃತ್ತ ಯೋಧರಾದ ಅಣ್ಣಪ್ಪ, ಪ್ರಕಾಶ್, ಶಿವಕುಮಾರ್ ಯಲವಟ್ಟಿ, ವೀರೇಶ್ ಇವರು ಚಾಲನೆ ನೀಡಿದರು. ದೇವಸ್ಥಾನ ರಸ್ತೆ, ರಾಣಿ ಚೆನ್ನಮ್ಮ ವೃತ್ತ, ಗಾಂಧಿ ವೃತ್ತ, ಶೋಭಾ ಟಾಕೀಸ್ ರಸ್ತೆ, ಶಿವಮೊಗ್ಗ ರಸ್ತೆ ಮೂಲಕ ಎಚ್.ಕೆ.ವೀರಪ್ಪ ಕಲ್ಯಾಣ ಮಂಟಪದವರೆಗೆ ತಿರಂಗಾ ಯಾತ್ರೆ ಸಾಗಿತು, ಯಾತ್ರೆಯುದ್ದಕ್ಕೂ ಭಾರತ ಮಾತಾಕೀ ಜೈ, ಜಮ್ಮು ಮತ್ತು ಕಾಶ್ಮಿರ ಭಾರತ ಮಾತೆಯ ಸಿಂದೂರ, ಆವಾಜ್ ದೋ ಹಮ್ ಎಕ್ ಹೈ, ವಂದೇ ಮಾತರಂ ಸೇರಿದಂತೆ ದೇಶ ಭಕ್ತಿಯ ಘೋಷಣೆಗಳು ಮೊಳಗಿದವು.

ತಿರಂಗಾ ಯಾತ್ರೆಯಲ್ಲಿ ಶಾಸಕ ಬಿ.ಪಿ. ಹರೀಶ್, ಬಿಜೆಪಿ ಮುಖಂಡರಾದ ಗಾಯತ್ರಿ ಸಿದ್ದೇಶ್ವರ, ವೀರೇಶ್ ಹನಗವಾಡಿ, ಚಂದ್ರಶೇಖರ್ ಪೂಜಾರ್, ಅಜೀತ್ ಸಾವಂತ್, ಲಿಂಗರಾಜ್ ಹಿಂಡಸಘಟ್ಟ, ರಾಜು ರೋಖಡೆ, ಬಾತಿ ಚಂದ್ರಶೇಖರ್, ಸತೀಶ್ ಪೂಜಾರಿ, ನಾಗರೀಕ ಹಿತರಕ್ಷಣಾ ಸಮಿತಿಯ ಎಸ್.ಕೃಷ್ಣಮೂರ್ತಿ ಶ್ರೇಷ್ಟಿ, ನಾಗಮಣಿ ಶಾಸ್ತ್ರಿ, ನಗರಸಭಾ ಅಧ್ಯಕ್ಷೆ ಕವಿತಾ ಬೇಡರ್, ಸದಸ್ಯರಾದ ಆಟೋ ಹನುಮಂತಪ್ಪ, ಆಶ್ವಿನಿ ಕೃಷ್ಣ, ಮುಖಂಡರಾದ ಎಚ್.ದಿನೇಶ್, ಧರಣೇಂದ್ರ, ಚಂದ್ರಕಾಂತಗೌಡ, ಕಾಲೇಜು ವಿದ್ಯಾರ್ಥಿಗಳು, ದೇಶಭಕ್ತರು ಉಪಸ್ಥಿತರಿದ್ದರು.

- - -

-೨೯ಎಚ್‌ಆರ್‌ಆರ್೧ ಹಾಗೂ೧ಎ: ಹರಿಹರ ನಗರದಲ್ಲಿ ನಾಗರೀಕ ಹಿತರಕ್ಷಣಾ ಸಮಿತಿಯಿಂದ ಗುರುವಾರ ಹಮ್ಮಿಕೊಂಡಿದ್ದ ವಿಜಯ ತಿರಂಗಾ ಯಾತ್ರೆಯ ದೃಶ್ಯ. -೨೯ಎಚ್‌ಆರ್‌ಆರ್೧ಸಿ:

ವಿಜಯ ತಿರಂಗಾ ಯಾತ್ರೆ ಅಂಗವಾಗಿ ಗುರುವಾರ ನಗರದ ಎಚ್.ಕೆ. ವೀರಪ್ಪ ಕಲ್ಯಾಣ ಮಂಟಪದಲ್ಲಿ ನಡೆದ ಸಾರ್ವಜನಿಕ ಸಭೆಯನ್ನು ಭಾರತ ಮಾತೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟನೆ ಮಾಡಲಾಯಿತು. ಶಾಸಕ ಬಿ.ಪಿ.ಹರೀಶ್, ವೀರೇಶ್ ಹನಗವಾಡಿ, ಯಾದವ ಕೃಷ್ಣ, ಚಂದ್ರಶೇಖರ್ ಪೂಜಾರ್ ಇತರರಿದ್ದರು.

PREV

Recommended Stories

ಡಾ.ಪ್ರಭಾಕರ್‌ ಕೋರೆ 78ನೇ ಜನ್ಮದಿನ ಅರ್ಥಪೂರ್ಣ ಆಚರಣೆ
ರಾಜಕೀಯ ದುರುದ್ದೇಶಕ್ಕೆ ದೇವಾಲಯಗಳ ಬಳಕೆ ಸಲ್ಲದು