ಬೀಡಾಡಿ ದನ ಹಿಡಿವ ಕಾರ್ಯಾಚರಣೆ: ಕಡೂರಿನ ಗೋಶಾಲೆಗೆ 9 ರಾಸು

KannadaprabhaNewsNetwork |  
Published : Sep 11, 2026, 01:30 AM IST
10 ಎಚ್‍ಎಚ್‍ಆರ್ ಪಿ 02ಸಮಿಪದ ಹನುಮಂತಾಪುರದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 63 ನೇ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯನ್ನು ರೈತ ಸಂಘದ ಹೆಚ್.ಆರ್ ಬಸವರಾಜಪ್ಪ ಉದ್ಘಾಟಿಸಿದರು. ಸಿ.ಹನುಮಂತು, ಲೋಕೆಶ್‍ರಾವ್, ನಾಗರಾಜ್‍ಗೌಡ ಇತರರಿದ್ದರು. | Kannada Prabha

ಸಾರಾಂಶ

ಬೀಡಾಡಿ ದನಗಳ ಸಂಖ್ಯೆ ಹೆಚ್ಚಾಗಿ, ಅಪಘಾತಗಳು ಹೆಚ್ಚುತ್ತಿವೆ. ಈ ಹಿನ್ನೆಲೆ ಪ.ಪಂ ಆಡಳಿತಾಧಿಕಾರಿ ಡಾ.ನೂರಲ್ ಹುದಾ, ಮುಖ್ಯಾಧಿಕಾರಿ ಆರ್.ವಿ.ಮಂಜುನಾಥ್ ಮಾರ್ಗದರ್ಶನದಲ್ಲಿ ಪಶು ಇಲಾಖೆ, ಪೊಲೀಸ್ ಇಲಾಖೆಯ ಸಹಕಾರದಲ್ಲಿ ಬುಧವಾರ ಸಂಜೆ ಕಾರ್ಯಾಚರಣೆ ನಡೆಸಿ 9 ದನಗಳನ್ನು ಹಿಡಿದು ಕಡೂರಿನ ಸರ್ಕಾರದ ಎಮ್ಮೆದೊಡ್ಡಿ ಗೋಶಾಲೆಗೆ ಲಾರಿಯ ಮೂಲಕ ಕಳಿಸಲಾಯಿತು.

ನರಸಿಂಹರಾಜಪುರ: ಬೀಡಾಡಿ ದನಗಳ ಸಂಖ್ಯೆ ಹೆಚ್ಚಾಗಿ, ಅಪಘಾತಗಳು ಹೆಚ್ಚುತ್ತಿವೆ. ಈ ಹಿನ್ನೆಲೆ ಪ.ಪಂ ಆಡಳಿತಾಧಿಕಾರಿ ಡಾ.ನೂರಲ್ ಹುದಾ, ಮುಖ್ಯಾಧಿಕಾರಿ ಆರ್.ವಿ.ಮಂಜುನಾಥ್ ಮಾರ್ಗದರ್ಶನದಲ್ಲಿ ಪಶು ಇಲಾಖೆ, ಪೊಲೀಸ್ ಇಲಾಖೆಯ ಸಹಕಾರದಲ್ಲಿ ಬುಧವಾರ ಸಂಜೆ ಕಾರ್ಯಾಚರಣೆ ನಡೆಸಿ 9 ದನಗಳನ್ನು ಹಿಡಿದು ಕಡೂರಿನ ಸರ್ಕಾರದ ಎಮ್ಮೆದೊಡ್ಡಿ ಗೋಶಾಲೆಗೆ ಲಾರಿಯ ಮೂಲಕ ಕಳಿಸಲಾಯಿತು.

ಕಳೆದ ಕೆಲವು ತಿಂಗಳಿಂದ ಪಟ್ಟಣದಲ್ಲಿ ರಾತ್ರಿ ವೇಳೆ ಅಂಬೇಡ್ಕರ್ ವೃತ್ತ, ಹಳೇಪೇಟೆ, ಹಳೇ ಪೆಟ್ರೋಲ್ ಬಂಕ್, ಮಂಡಗದ್ದೆ ಸರ್ಕಲ್, ಪ.ಪಂ ಎದುರಿನ ಮುಖ್ಯ ರಸ್ತೆಗಳಲ್ಲಿ ದನಗಳು ಮಲಗಿ ಬಿಡುತ್ತಿದ್ದವು. ಇದರಿಂದ ವಾಹನ ಸವಾರರಿಗೆ ಬಹಳಷ್ಟು ಸಮಸ್ಯೆಯಾಗುತ್ತಿತ್ತು. ಕಪ್ಪು ಹಸುಗಳು ನಿಂತಿದ್ದರೆ ಅಥವಾ ಮಲಗಿದ್ದರೆ ವಾಹನ ಸವಾರರಿಗೆ ಕಾಣದೆ ಅಪಘಾತಗಳು ಸಂಭವಿಸಿದ್ದವು. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಬೀಡಾಡಿ ದನಗಳನ್ನು ಗೋಶಾಲೆಗೆ ಕಳಿಸುವಂತೆ ಮನವಿ ಮಾಡಿದ್ದರು.

ದನ ಹಿಡಿವ ಕಾರ್ಯಚರಣೆ ವೇಳೆ ಪ.ಪಂ ಆಡಳಿತಾಧಿತಾರಿ ತಹಸೀಲ್ದಾರ್‌ ಡಾ.ನೂರಲ್ ಹುದಾ, ಮುಖ್ಯಾಧಿಕಾರಿ ಆರ್.ವಿ.ಮಂಜುನಾಥ್, ಪಶು ವೈದ್ಯಾಧಿಕಾರಿ ಡಾ. ವಿನಯ್, ಹಸು ಪರೀಕ್ಷಿಕ ಶೇಷಾಚಲ, ಪಿಎಸ್‌ಐ ನೂತನ್, ಪಟ್ಟಣ ಪಂಚಾಯಿತಿಯ ರೆವಿನ್ಯೂ ಇನ್ಸ್ ಪೆಕ್ಟರ್ ವಿಜಯಕುಮಾರ್ ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಚಂದ್ರಗುತ್ತಿಯಲ್ಲಿ ದಸರಾ ಉತ್ಸವಕ್ಕೆ ಸಕಲ ಸಿದ್ಧತೆ
₹ 2.5 ಕೋಟಿ ಅನುದಾನದಲ್ಲಿ ವಿವಿಧ ಕಾಮಗಾರಿಗೆ ಚಾಲನೆ: ಎಚ್. ಗಣಪತಿ