ನಗರದ ಅನಧಿಕೃತ ಬಡಾವಣೆಗಳ ಏಕನಿವೇಶ ವಿನ್ಯಾಸಕ್ಕೆ ಅರ್ಜಿ ಸಲ್ಲಿಸಲು ಅವಕಾಶ

KannadaprabhaNewsNetwork |  
Published : Apr 11, 2026, 12:15 AM IST
ಫೋಟೋ: ೮ಪಿಟಿಆರ್- ಪ್ರೆಸ್ ಪುಡಾಸುದ್ಧಿಗೋಷ್ಠಿಯಲ್ಲಿ ಪುಡಾ ಅಧ್ಯಕ್ಷ ಅಮಳ ರಾಮಚಂದ್ರ ಮಾತನಾಡಿದರು. | Kannada Prabha

ಸಾರಾಂಶ

ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ರಚಿಸಿರುವ ಬಡಾವಣೆಗಳಲ್ಲಿನ ಬಿ-ಖಾತಾಗಳಿಗೆ ಎ-ಖಾತಾ ನೀಡುವ ಕುರಿತು ಸರ್ಕಾರ ಆದೇಶಿಸಿದ್ದು, ಈ ಹಿನ್ನೆಲೆಯಲ್ಲಿ ನಿವೇಶನದ ಸಂಪರ್ಕ ರಸ್ತೆಯನ್ನು ನಗರಸಭೆಯು ಸಾರ್ವಜನಿಕ ರಸ್ತೆ ಎಂದು ಘೋಷಿಸಿ ಅದರ ದಾಖಲೆಗಳನ್ನಿಟ್ಟು ಪುತ್ತೂರು ನಗರಾಭಿವೃದ್ಧಿ ಪ್ರಾಧಿಕಾರ(ಪುಡಾ)ಕ್ಕೆ ಏಕ ನಿವೇಶನ ವಿನ್ಯಾಸಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಪುಡಾ ಅಧ್ಯಕ್ಷ ಅಮಳ ರಾಮಚಂದ್ರ ಭಟ್ ತಿಳಿಸಿದ್ದಾರೆ.

ಪುತ್ತೂರು: ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ರಚಿಸಿರುವ ಬಡಾವಣೆಗಳಲ್ಲಿನ ಬಿ-ಖಾತಾಗಳಿಗೆ ಎ-ಖಾತಾ ನೀಡುವ ಕುರಿತು ಸರ್ಕಾರ ಆದೇಶಿಸಿದ್ದು, ಈ ಹಿನ್ನೆಲೆಯಲ್ಲಿ ನಿವೇಶನದ ಸಂಪರ್ಕ ರಸ್ತೆಯನ್ನು ನಗರಸಭೆಯು ಸಾರ್ವಜನಿಕ ರಸ್ತೆ ಎಂದು ಘೋಷಿಸಿ ಅದರ ದಾಖಲೆಗಳನ್ನಿಟ್ಟು ಪುತ್ತೂರು ನಗರಾಭಿವೃದ್ಧಿ ಪ್ರಾಧಿಕಾರ(ಪುಡಾ)ಕ್ಕೆ ಏಕ ನಿವೇಶನ ವಿನ್ಯಾಸಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಪುಡಾ ಅಧ್ಯಕ್ಷ ಅಮಳ ರಾಮಚಂದ್ರ ಭಟ್ ತಿಳಿಸಿದ್ದಾರೆ.ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅನಧಿಕೃತ ವಿಭಾಗದ ಮಾಡಿದ ನಿವೇಶನ(ಕಟ್ ಕನ್ವರ್ಷನ್)ದ ಸಮಸ್ಯೆಯಿಂದ ಜನತೆಗೆ ಸಾಕಷ್ಟು ತೊಂದರೆ ಉಂಟಾಗಿದ್ದು, ಹೀಗಾಗಿ ಅದನ್ನು ಬಗೆಹರಿಸಲು ಸಾಕಷ್ಟು ಬೇಡಿಕೆ ಇತ್ತು. ಪುತ್ತೂರಿನಲ್ಲಿ ಈ ಸಮಸ್ಯೆ ಗಂಭೀರವಾಗಿದ್ದ ಹಿನ್ನೆಲೆಯಲ್ಲಿ ಪುತ್ತೂರು ಶಾಸಕರು, ಸಚಿವರು, ಅಧಿಕಾರಿಗಳ ಜತೆಗೆ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸಲು ವಿಶೇಷ ಪ್ರಯತ್ನ ಮಾಡಿದ್ದರು. ಜತೆಗೆ ಪುಡಾದಿಂದಲೂ ಸಾಕಷ್ಟು ಒತ್ತಡ ಹಾಕಿ ಬೆಂಗಳೂರಿಗೆ ಓಡಾಡಿ ಸರ್ಕಾರದ ಆದೇಶ ಬರುವಂತೆ ಪ್ರಯತ್ನಿಸಲಾಗಿತ್ತು ಎಂದು ತಿಳಿಸಿದರು.

ಪುಡಾ ಸದಸ್ಯ ಕಾರ್ಯದರ್ಶಿ ಗುರುಪ್ರಸಾದ್ ಅವರು ಸರಕಾರದ ಆದೇಶದ ಕುರಿತು ಮಾಹಿತಿ ನೀಡಿ, ಸರಕಾರವು ಬಿ-ಖಾತಾದಿಂದ ಎ-ಖಾತ ನೀಡುವ ಆದೇಶಕ್ಕೆ ಸಂಬಂಧಿಸಿ ೬ ವಿಂಗಡಣೆಗಳನ್ನು ಮಾಡಿದೆ. ನಗರ ಸ್ಥಳೀಯಾಡಳಿತ ಈಗಾಗಲೇ ಬಿ-ಖಾತಾ ನೀಡಿ ಕಟ್ಟಡ ನಿರ್ಮಿಸಲು ಉದ್ದೇಶಿಸಿರುವ ಖಾಲಿ ನಿವೇಶಗಳು, ನಗರ ಸ್ಥಳೀಯಾಡಳಿತದಿಂದ ಬಿ-ಖಾತಾ ಪಡೆದು ಅಥವಾ ಪಡೆಯದೇ ಪರವಾನಿಗೆ ಇಲ್ಲದೆ ನಿರ್ಮಾಣ ಮಾಡಿದ ಕಟ್ಟಡಗಳಿಗೆ ಈ ಆದೇಶ ಅನುಕೂಲವಾಗಲಿದೆ.ರಾಜ್ಯ ನಗರ-ಗ್ರಾಮಾಂತರ ಯೋಜನಾ ಕಾಯ್ದೆ-೧೯೬೧ನ್ನು ಉಲ್ಲಂಘಿಸಿ ನಿರ್ಮಿಸಿದ ಅಪಾರ್ಟ್ ಮೆಂಟ್/ಘಟಕಗಳು, ಭೂ ಪರಿವರ್ತನೆ ಆಗದೇ ಕಂದಾಯ ಸರ್ವೆ ಸಂಖ್ಯೆ/ಹಿಸ್ಸಾ ಸರ್ವೆ ಸಂಖ್ಯೆ ಹೊಂದಿರುವ ವಿಭಜನೆ ಮಾಡದೇ ಕೆಟಿಸಿಪಿ ಕಾಯ್ದೆ ೧೯೬೧ರಡಿ ಅನುಮೋದನೆ ಪಡೆಯದಿರುವ ಖಾಲಿ ಭೂಮಿಗೆ ಖಾತಾ ನೀಡುವ ಪ್ರಕ್ರಿಯೆ ನಡೆಯಲಿದೆ.ಭೂ ಪರಿವರ್ತನೆಯಾದ ಬಳಿಕ ಸಕ್ಷಮ ಪ್ರಾಧಿಕಾರದಿಂದ ವಿನ್ಯಾಸ ಅನುಮೋದನೆ ಪಡೆಯದೆ ಖಾಲಿ ಭೂಮಿಯನ್ನು ಉಪ-ವಿಭಾಗ ಮಾಡಿ ನೋಂದಾಯಿತ ಪತ್ರಗಳ ಮೂಲಕ ೨೦೨೪ರ ಸೆ. ೧೦ರ ಪೂರ್ವದಲ್ಲಿ ಮಾರಾಟ ಮಾಡಿದ ಪ್ರಕರಣಗಳು, ಭೂ ಪರಿವರ್ತನೆಯಾಗದೆ ಕಂದಾಯ ಭೂಮಿಯನ್ನು ಅನಧಿಕೃತ ಉಪ-ವಿಭಾಗ ಮಾಡಿ ೨೦೨೪ರ ಸೆ. ೧೦ರ ಪೂರ್ವದಲ್ಲಿ ನೋಂದಾಯಿತ ಪತ್ರದ ಮೂಲಕ ವಹಿವಾಟು ನಡೆಸಿ ನಗರ ಸ್ಥಳೀಯ ಸಂಸ್ಥೆಗಳಿಂದ ಖಾತಾ ನೀಡಲಾಗಿರುವ ಪ್ರಕರಣಗಳಿಗೆ ಆದೇಶದಿಂದ ಅನುಕೂಲವಾಗಲಿದೆ ಎಂದರು.ಜತೆಗೆ ಕಂದಾಯ ಇಲಾಖೆಯಿಂದ ಕರ್ನಾಟಕ ಭೂ ಕಂದಾಯ ಕಾಯ್ದೆ ೧೯೬೪ರ ಕಲಂ ೯೫ಕ್ಕೆ ತಿದ್ದುಪಡಿ ತರಲಾಗಿದ್ದು, ಅದರನ್ವಯ ನಗರ ಹಾಗೂ ಗ್ರಾಮಾಂತರ ಯೋಜನಾ ಕಾಯ್ದೆ ೧೯೬೧ರಡಿಯಲ್ಲಿ ಸರಕಾರದಿಂದ ಅನುಮೋದನೆಗೊಂಡಿರುವ ಮಹಾಯೋಜನೆಗಳ ವ್ಯಾಪ್ತಿಗೆ ಒಳಪಡುವ ಜಮೀನುಗಳಿಗೆ ಸಂಬಂಧಿಸಿ ಮಹಾಯೋಜನೆಯಲ್ಲಿ ನಿರ್ದಿಷ್ಟಪಡಿಸಿರುವ ಭೂ ಉಪಯೋಗಗಳಿಗೆ ಅನುಗುಣವಾಗಿ ಕೃಷಿ ಉದ್ದೇಶದಿಂದ ಕೃಷಿಯೇತರ ಉದ್ದೇಶಗಳಿಗೆ ಭೂ ಪರಿವರ್ತನೆಗೆ ಜಿಲ್ಲಾಧಿಕಾರಿಗಳ ಅನುಮತಿ ಅಗತ್ಯವಿರುವುದಿಲ್ಲ. ಇದಕ್ಕೆ ಸಂಬಂಧಿಸಿ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಿ ಪ್ರಸ್ತಾವನೆಯನ್ನು ಸಭೆಯಲ್ಲಿ ಮಂಡಿಸಿ, ಸಂಬಂಧಪಟ್ಟ ಶುಲ್ಕ ಪಾವತಿಸಬೇಕಾಗಿರುತ್ತದೆ ಎಂದು ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಪುಡಾ ಸದಸ್ಯರಾದ ಲ್ಯಾನ್ಸಿ ಮಸ್ಕರೇನಸ್, ಅನ್ವರ್ ಖಾಸಿಂ, ನಿಹಾಲ್ ಪಿ.ಶೆಟ್ಟಿ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಿಜ್ಞಾನ ವಿಭಾಗದ ಅಭಿರಾಮ್ ವಿ. ಭಟ್ ರಾಜ್ಯಕ್ಕೆ ದ್ವಿತೀಯ
ತಾಯಿಯ ಅಗಲಿಕೆ ನೋವಿನಲ್ಲೂ ಪರೀಕ್ಷೆ ಎದುರಿಸಿ ರಾಜ್ಯಕ್ಕೆ ಪ್ರಥಮ ಸ್ಥಾನಿಯಾದ ದಿಶಾ