- ಬೇಡವಾದ ವಿಷಯಕ್ಕೆ ಮಹತ್ವ ಕೊಟ್ಟು ಸದನದ ಸಮಯವನ್ನು ವ್ಯರ್ಥ ಮಾಡಿದ ಬಿಜೆಪಿ
- ಸರ್ವಸಮ್ಮತ ಇಲ್ಲದೇ ಭಿನ್ನಮತ ಸ್ಫೋಟಗೊಂಡಿದ್ದು, ವಿರೋಧ ಪಕ್ಷ ನಾಯಕನ ಬಗ್ಗೆ ಅಪಸ್ವರ
- ಕರ್ನಾಟಕದ ಸಂಕಷ್ಟಗಳಿಗೆ ಧ್ವನಿಯಾಗದ ವಿಪಕ್ಷ ನಾಯಕರು ರಾಜ್ಯ ಜನರ ಕ್ಷೇಮೆ ಕೇಳಬೇಕು- - - ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ರಾಜ್ಯದಲ್ಲಿ ಹಲವು ಸಮಸ್ಯೆಗಳಿದ್ದವು. ಜನ ನಿರೀಕ್ಷೆ ಇಟ್ಟುಕೊಂಡಿದ್ದರು. ಒಂದು ವಿರೋಧ ಪಕ್ಷವಾಗಿ ಸದನದಲ್ಲಿ ಜನರ ಸಮಸ್ಯೆಗಳನ್ನು ಚರ್ಚಿಸುವುದನ್ನು ಬಿಟ್ಟು, ಬೇಡವಾದ ವಿಷಯಕ್ಕೆ ಮಹತ್ವ ಕೊಟ್ಟು ಸದನದ ಸಮಯವನ್ನು ವ್ಯರ್ಥ ಮಾಡಿದರು. ಸದನದಲ್ಲಿ ಬಿಜೆಪಿ ಆಂತರಿಕ ಬೇಗುದಿ ಎದ್ದು ಕಂಡಿದೆ. ಬಿಜೆಪಿಯ ನಾಯಕರುಗಳ ಮಧ್ಯೆಯೇ ಸಾಮರಸ್ಯ ಇರಲಿಲ್ಲ. ಯತ್ನಾಳ್ ಸೇರಿದಂತೆ ಹಲವು ಬಿಜೆಪಿ ಶಾಸಕರು ಬೇರೆ ಬೇರೆ ರೀತಿ ಮಾತನಾಡಿದರು ಎಂದು ಆರೋಪಿಸಿದರು.
ಬಿಜೆಪಿ ಈಗ ಒಡೆದ ಮನೆಯಂತಾಗಿದೆ. ರಾಜ್ಯಾಧ್ಯಕ್ಷರು ದೆಹಲಿಗೆ ಹೋದ ಪುಟ್ಟಾ ಬಂದ ಪುಟ್ಟ ಅಂತಾಗಿದೆ. ಟೀಕೆ ಟಿಪ್ಪಣಿಗಳಲ್ಲಿ ಮಾತ್ರ ವಿರೋಧ ಮಾಡುತ್ತಿದೆ. ಸದನವನ್ನು ವಿರೋಧ ಪಕ್ಷ ವಿಫಲಗೊಳಿಸಿದೆ. ಇದರ ಸಂಪೂರ್ಣ ಹೊಣೆಯನ್ನು ಬಿಜೆಪಿ ನಾಯಕರು ತಗೋಬೇಕು. ಕರ್ನಾಟಕದ ಸಂಕಷ್ಟಗಳಿಗೆ ಧ್ವನಿಯಾಗದ ವಿರೋಧ ಪಕ್ಷದ ನಾಯಕರು ರಾಜ್ಯದ ಜನರ ಕ್ಷೇಮೆ ಕೇಳಬೇಕು ಎಂದು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕೆಪಿಸಿಸಿ ಸದಸ್ಯ ವೈ.ಎಚ್. ನಾಗರಾಜ್ ಪ್ರಮುಖರಾದ ಧೀರರಾಜ್ ಹೊನ್ನವಿಲೆ, ಜಿ.ಪದ್ಮನಾಭ್, ಶಿ.ಜು.ಪಾಶ ಇದ್ದರು.
ಬಿಜೆಪಿಯ ಪ್ರಾಯೋಜಿತ ಮಠಾಧೀಶರಾಗಿ ಸನ್ಮಾನ ಮಾಡಿದ್ದಾರೋ ಗೊತ್ತಿಲ್ಲ. ರಾಘವೇಂದ್ರ ಅವರನ್ನು ಓಲೈಸುವ ಕೆಲಸ ಮಠಾಧೀಶರು ಮಾಡುತ್ತಿದ್ದಾರೆ. ಸಾರ್ಥಕ ಸನ್ಮಾನ ಮಾಡುವುದಾದರೆ ವಿಧಾನ ಪರಿಷತ್ ಸದಸ್ಯ ರುದ್ರೇಗೌಡರಿಗೆ ಸನ್ಮಾನ ಮಾಡಲಿ. ಅವರು ಜಿಲ್ಲೆಯಲ್ಲಿ ಸಾಕಷ್ಟು ಕೆಲಸ ಮಾಡಿದ್ದಾರೆ. ಅಧಿಕಾರತನ, ಶ್ರೀಮಂತಿಗೆ ಬೆಂಬಲಿಸುವ ಕಾರ್ಯ ಸ್ವಾಮೀಜಿಗಳಿಗೆ ತರವಲ್ಲ. ಸ್ವಾಮೀಜಿಗಳು ಸಹ ಬಿಜೆಪಿಯ ಪ್ರಚಾರಕರಾಗಿ ಕೆಲಸ ಮಾಡಿದ್ದಾರೆ. ಸ್ವಾಮೀಜಿಗಳು ಪಕ್ಷಕ್ಕೆ ಸೀಮಿತರಾಗಬಾರದು. ಬಿಜೆಪಿಗೆ ಮೊದಲು ಸಂಸದ ಸ್ಥಾನ ತಂದುಕೊಟ್ಟಿದ್ದು ನಾನು, ನಾನು ನಾಲ್ಕು ಸದನ ಹೋಗಿ ಬಂದಿದ್ದೇನೆ ನಾನು ನೆನಪಾಗಲಿಲ್ಲ. ಮಾಜಿ ಮುಖ್ಯಮಂತ್ರಿ ಮಗ ಅಂತ ರಾಘವೇಂದ್ರ ಸಾಧಕನಾಗಿ ಕಂಡರಾ ಎಂದು ಪ್ರಶ್ನಿಸಿದರು.