ಯುಜಿಡಿ ಡಂಪಿಂಗ್ ಕಾಮಗಾರಿಗೆ ಸ್ಥಳೀಯ ನಿವಾಸಿಗಳಿಂದ ವಿರೋಧ

KannadaprabhaNewsNetwork |  
Published : Jan 22, 2026, 01:45 AM IST
21ಕೆಎಂಎನ್ ಡಿ16 | Kannada Prabha

ಸಾರಾಂಶ

ಮನೆ ಎದುರು ಕೇವಲ 50 ಅಡಿಗಳ ದೂರದಲ್ಲೇ ಪಶ್ಚಿಮವಾಹಿನಿ ಯುಜಿಡಿ ನೀರನ್ನು ಇಲ್ಲಿ ಸಂಗ್ರಹಿಸಿ ಬಳಿಕ ಬೇರೆಡೆಗೆ ಡಂಪ್ ಮಾಡುವ ಕಾಮಗಾರಿ ನಡೆಸಲು ಮುಂದಾಗಿದ್ದಾರೆ. ಜೊತೆಗೆ ಪಕ್ಕದಲ್ಲಿ ಕಾವೇರಿ ನದಿಯೂ ಹರಿಯುತ್ತಿದ್ದು, ಉದ್ದೇಶಿತ ಕಾಮಗಾರಿಯು ಕೇವಲ ಐದಾರು ಅಡಿ ಹಾಳದಲ್ಲೇ ನೀರು ಬರುತ್ತಿದೆ.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಪಟ್ಟಣ ಹೊರವಲಯದ ಪಶ್ಚಿಮವಾಹಿನಿಯಲ್ಲಿ ವಾಸ ಮಾಡುವ ಸ್ಥಳದ ಬಳಿಯೇ ಪುರಸಭೆಯಿಂದ ಯುಜಿಡಿ ಡಂಪಿಂಗ್ ಕಾಮಗಾರಿ ನಡೆಸುತ್ತಿರುವುದನ್ನು ಸ್ಥಳೀಯ ನಿವಾಸಿಗಳು ತಡೆದು ಆಕ್ರೋಶ ವ್ಯಕ್ತಪಡಿಸಿದರು.

ಮನೆ ಎದುರು ಕೇವಲ 50 ಅಡಿಗಳ ದೂರದಲ್ಲೇ ಪಶ್ಚಿಮವಾಹಿನಿ ಯುಜಿಡಿ ನೀರನ್ನು ಇಲ್ಲಿ ಸಂಗ್ರಹಿಸಿ ಬಳಿಕ ಬೇರೆಡೆಗೆ ಡಂಪ್ ಮಾಡುವ ಕಾಮಗಾರಿ ನಡೆಸಲು ಮುಂದಾಗಿದ್ದಾರೆ. ಜೊತೆಗೆ ಪಕ್ಕದಲ್ಲಿ ಕಾವೇರಿ ನದಿಯೂ ಹರಿಯುತ್ತಿದ್ದು, ಉದ್ದೇಶಿತ ಕಾಮಗಾರಿಯು ಕೇವಲ ಐದಾರು ಅಡಿ ಹಾಳದಲ್ಲೇ ನೀರು ಬರುತ್ತಿದೆ.

ಇದು ನದಿಗೆ ಸಂಪರ್ಕ ಹೊಂದಿದೆ. ಅಲ್ಲದೇ, ಈ ಸ್ಥಳದಿಂದ ಕೂಗಳತೆ ದೂರದಲ್ಲೇ ಮಹಾತ್ಮ ಗಾಂಧೀಜಿ ಅವರ ಚಿತಾಭಸ್ಮ ಬಿಟ್ಟ ಸ್ಥಳ ಇದ್ದು, ಇದನ್ನು ಸ್ಮಾರಕ ಎಂದು ಗುರುತಿಸಲ್ಪಟ್ಟಿದೆ. ಪಶ್ಚಿಮವಾಹಿನಿಯಲ್ಲಿ ಶ್ರಾದ್ಧಾ ಸೇರಿದಂತೆ ಅನೇಕ ಪೂಜಾ ಕೈಂಕರ್ಯಗಳು ನಡೆಯಲಿವೆ. ನಿತ್ಯ ಸಾವಿರಾರು ಪ್ರವಾಸಿಗರು ಭೇಟಿ ನೀಡಲಿದ್ದಾರೆ.

ಇಂತಹ ಸ್ಥಳದಲ್ಲಿ ಯುಜಿಡಿ ಸಂಗ್ರಹಿಸಿ ನಂತರ ಡಂಪಿಂಗ್ ಮಾಡುವ ಕಾಮಗಾರಿ ನಡೆಸುತ್ತಿರುವುದು ಸರಿಯಲ್ಲ. ಇಲ್ಲಿನ ನಿವಾಸಿಗಳು ಸಹ ಈ ಕಾಮಗಾರಿಯನ್ನು ವಿರೋಧಿಸುತ್ತಿಲ್ಲ, ಬದಲಿಗೆ ಜನ ವಸತಿ ಪ್ರದೇಶದಿಂದ ದೂರಕ್ಕೆ ಸ್ಥಳಾಂತರಿಸುವಂತೆ ಸ್ಥಳೀಯ ನಿವಾಸಿಗಳು ಆಗ್ರಹಿಸಿದರು.

ಈಗಾಗಲೇ ಪುರಸಭೆ, ಪರಿಸರ ಮಾಲಿನ್ಯ ಹಾಗೂ ಪಾಲಹಳ್ಳಿ ಗ್ರಾಪಂಗೆ ಮನವಿ ಮಾಡಿದ್ದರೂ ಅಧಿಕಾರಿಗಳು ಕ್ಯಾರೇ ಎನ್ನದೆ ಕಾಮಗಾರಿ ನಡೆಸುತ್ತಿದ್ದಾರೆ. ಸ್ಥಳಾಂತರ ಮಾಡದ ಹೊರತು ಕಾಮಗಾರಿ ನಡೆಸಲು ಬಿಡುವುದಿಲ್ಲ ಎಂದು ಎಚ್ಚರಿಕೆ ಪಶ್ವಿಮವಾಹಿನಿ ನಿವಾಸಿ ಸರಸ್ಪತಿ ಎಚ್ಚರಿಕೆ ನೀಡಿದರು.

ಇಂದು ಕುರುಕ್ಷೇತ್ರ ನಾಟಕ ಪ್ರದರ್ಶನ

ಮಂಡ್ಯ: ಶ್ರೀಸಿದ್ದಾರ್ಥ ಕಲಾ ಬಳಗದಿಂದ ಜ.22ರಂದು ನಗರದ ಕಲಾಮಂದಿರದಲ್ಲಿ ಹಿರಿಯ ರಂಗಭೂಮಿ ಕಲಾವಿದ ಹೆಮ್ಮಿಗೆ ಎಚ್.ಎನ್.ಅಂಕರಾಜು ಮೊದಲ ನಿರ್ದೇಶನದ ರಂಗ ಪ್ರವೇಶ ಹಾಗೂ ಕುರುಕ್ಷೇತ್ರ ಅಥವಾ ಗೀತೋಪದೇಶ ಪೌರಾಣಿಕ ನಾಟಕ ಪ್ರದರ್ಶನ ನಡೆಯಲಿದೆ. ಕಾರ್ಯಕ್ರಮವನ್ನು ಶಾಸಕರಾದ ರಮೇಶ ಬಂಡಿಸಿದ್ದೇಗೌಡ ಹಾಗೂ ಪಿ.ರವಿಕುಮಾರ್ ಉದ್ಘಾಟಿಸಲಿದ್ದಾರೆ. ಮುಡಾ ಅಧ್ಯಕ್ಷ ಬಿ.ಪಿ. ಪ್ರಕಾಶ್, ಹಿರಿಯ ರಂಗಭೂಮಿ ಕಲಾವಿದ ನಾಟಕ ನಿರ್ದೇಶಕ ಎಚ್.ಎನ್.ಅಂಕರಾಜು ಹೆಮ್ಮಿಗೆ, ಕಲಾ ಪೋಷಕ ಕೊತ್ತತ್ತಿ ಮಹದೇವು ಸೇರಿದಂತೆ ಹಲವರು ಪಾಲ್ಗೊಳ್ಳಲಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬ್ಯಾಲೆಟ್‌ನಲ್ಲಿ ಮತದಾನ ನಡೆಸಿದರೆ ತಪ್ಪೇನು? ರಾಜ್ಯ ಚುನಾವಣಾ ಆಯುಕ್ತ
ಜಾಗತಿಕ ಸವಾಲಿಗೆ ನವೋದ್ಯಮ ಉತ್ತರ : ರಾಧಾಕೃಷ್ಣನ್‌