ವೃಷಭಾವತಿ ಯೋಜನೆಗೆ ವಿರೋಧ ಪಕ್ಷಗಳಿಂದ ಅಪಪ್ರಚಾರ

KannadaprabhaNewsNetwork |  
Published : Jul 04, 2025, 11:49 PM IST
ಪೊಟೊ-3ಕೆಎನ್ಎಲ್ಎಮ್ 1-ನೆಲಮಂಗಲ ನಗರದ ಅರಿಶಿನಕುಂಟೆಯ ಖಾಸಗಿ ಹೋಟಲ್‌ನಲ್ಲಿ ಬ್ಲಾಕ್ ಕಾಂಗ್ರೇಸ್ ಹಾಗೂ ಜಿಲ್ಲಾ ಕಾಂಗ್ರೇಸ್‌ನಿಂದ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಟಿಯನ್ನುಜಿಲ್ಲಾಧ್ಯಕ್ಷ ಸಿ.ಆ‌ರ್ ಗೌಡ ಉದ್ದೇಶಿಸಿ ಮಾತನಾಡಿದರು.ಸಂದರ್ಭದಲ್ಲಿ  ಮುಖಂಡರು ಹಾಗೂ ಕಾರ್ಯಕರ್ತರು ಇದ್ದರು . | Kannada Prabha

ಸಾರಾಂಶ

ನೆಲಮಂಗಲ: ವೃಷಭಾವತಿ ಸಂಸ್ಕರಿಸಿದ ನೀರು ಮಾತ್ರ ನೆಲಮಂಗಲಕ್ಕೆ ಬರುತ್ತದೆ, ನೀರು ಶುದ್ಧವಾಗಿಲ್ಲ ಎಂದರೆ ನಮ್ಮ ಶಾಸಕರು ಹೇಳಿದಂತೆ ಮೊದಲ ಕೆರೆಯಲ್ಲಿಯೇ ಸ್ಥಗಿತ ಮಾಡುತ್ತೇವೆ, ಇದು ನಮ್ಮ ಬದ್ಧತೆ, ವಿರೋಧ ಪಕ್ಷಗಳು ಅಪಪ್ರಚಾರ ಮಾಡಿ ರೈತರನ್ನು ದಿಕ್ಕುತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಸಿ.ಆ‌ರ್.ಗೌಡ ಆಕ್ರೋಶ ವ್ಯಕ್ತಪಡಿಸಿದರು.

ನೆಲಮಂಗಲ: ವೃಷಭಾವತಿ ಸಂಸ್ಕರಿಸಿದ ನೀರು ಮಾತ್ರ ನೆಲಮಂಗಲಕ್ಕೆ ಬರುತ್ತದೆ, ನೀರು ಶುದ್ಧವಾಗಿಲ್ಲ ಎಂದರೆ ನಮ್ಮ ಶಾಸಕರು ಹೇಳಿದಂತೆ ಮೊದಲ ಕೆರೆಯಲ್ಲಿಯೇ ಸ್ಥಗಿತ ಮಾಡುತ್ತೇವೆ, ಇದು ನಮ್ಮ ಬದ್ಧತೆ, ವಿರೋಧ ಪಕ್ಷಗಳು ಅಪಪ್ರಚಾರ ಮಾಡಿ ರೈತರನ್ನು ದಿಕ್ಕುತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಸಿ.ಆ‌ರ್.ಗೌಡ ಆಕ್ರೋಶ ವ್ಯಕ್ತಪಡಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವೃಷಭಾವತಿ ಸಂಸ್ಕರಿಸಿದ ನೀರು ಯಲಹಂಕದಲ್ಲಿ ಶಾಸಕ ವಿಶ್ವನಾಥ್‌, ತುಮಕೂರು ಗ್ರಾಮಾಂತರ ಶಾಸಕ ಸುರೇಶ್‌ಗೌಡ, ಕೇಂದ್ರ ಸಚಿವ ವಿ.ಸೋಮಣ್ಣ ಹಾಗೂ ಶಿಡ್ಲಘಟ್ಟದ ರವಿಕುಮಾರ್‌ ಕ್ಷೇತ್ರದ ರೈತರಿಗೆ ಬೇಕಾಗಿದೆ. ಆದರೆ ಕಾಂಗ್ರೆಸ್ ಶಾಸಕರಿರುವ ನೆಲಮಂಗಲ ಕ್ಷೇತ್ರದ ರೈತರಿಗೆ ಅನ್ಯಾಯ ಮಾಡಲು ವಿರೋಧ ಪಕ್ಷಗಳು ವಿರೋಧ ಮಾಡುತ್ತಿವೆ ಎಂದು ದೂರಿದರು.ವೃಷಭಾವತಿ ಯೋಜನೆ ಯಲಹಂಕ ಕ್ಷೇತ್ರದಿಂದ ಆರಂಭವಾಗಿದ್ದು ನೆಲಮಂಗಲ 50, ಯಲಹಂಕ 7, ಯಶವಂತಪುರ 5, ತುಮಕೂರು ಗ್ರಾಮಾಂತರ 7, ದೊಡ್ಡಬಳ್ಳಾಪುರ 1 ಕೆರೆಗೆ ಅಂತರ್ಜಲ ವೃದ್ಧಿಗಾಗಿ ಸಂಸ್ಕರಿಸಿದ ನೀರನ್ನು ಬಿಡಲಾಗುತ್ತಿದೆ. ನೆಲಮಂಗಲದ ಮೊದಲ ಕೆರೆಗೆ ಶುದ್ಧವಾದ ನೀರು ಬಂದಾಗ ಅಲ್ಲಿಯೇ ಪರೀಕ್ಷೆ ಮಾಡಿ ಶುದ್ಧವಾಗಿದ್ದರೆ ಮಾತ್ರ ಮುಂದಿನ ಕೆರೆಗಳಿಗೆ ನೀರು ಬಿಡಿಸೋಣ ಎಂಬ ಮಾತನ್ನೂ ಕೂಡ ಶಾಸಕರು ಈಗಗಾಲೇ ಹೇಳಿದ್ದಾರೆ. ಬಿಜೆಪಿ, ಜೆಡಿಎಸ್ ಶಾಸಕರಿರುವ ಕ್ಷೇತ್ರಗಳಿಗೆ ಬೇಕಾಗಿರುವ ಈ ನೀರು ಕಾಂಗ್ರೆಸ್ ಶಾಸಕರಿರುವ ಕ್ಷೇತ್ರಕ್ಕೆ ಏಕೆ ಬೇಡ ಹೇಳಿ, ಇದು ವಿರೋಧ ಪಕ್ಷಗಳು ರೈತರಿಗೆ ಮಾಡುತ್ತಿರುವ ಅನ್ಯಾಯ. ಅದನ್ನು ರೈತರು, ಸಾರ್ವಜನಿಕರು ಅರ್ಥ ಮಾಡಿಕೊಳ್ಳಬೇಕು ಎಂದರು.

ಹಿರಿಯ ವಕೀಲ ಹನುಮಂತೇಗೌಡ ಮಾತನಾಡಿ, ವೃಷಭಾವತಿ ಯೋಜನೆಯ ಮೂಲಕ ತುಮಕೂರು ಗ್ರಾಮಾಂತರ ಕ್ಷೇತ್ರದ 7 ಕೆರೆಗಳ ಜತೆ ಉಳಿಕೆ 27 ಕೆರೆಗಳಿಗೆ ನೀರು ನೀಡಬೇಕು ಎಂದು ಮುಖ್ಯಮಂತ್ರಿಗಳಿಗೆ ಕೇಂದ್ರ ಜಲಶಕ್ತಿ ಸಚಿವ ಸೋಮಣ್ಣ ಪತ್ರ ಬರೆದು ಮನವಿ ಮಾಡಿದ್ದಾರೆ. ಈಗಾಗಲೇ ಸುಪ್ರಿಂಕೋರ್ಟ್, ಹೈಕೋರ್ಟ್ ಈ ಯೋಜನೆಯ ನೀರು ಶುದ್ಧವಾಗಿದೆ ರೈತರು ಬಳಕೆ ಮಾಡಿಕೊಳ್ಳಬಹುದು ಎಂಬುದಾಗಿ ತಿಳಿಸಿವೆ. ಆದರೆ ನೆಲಮಂಗಲದಲ್ಲಿ ಕೆಲ ಮುಖಂಡರು ಸುಖಾಸುಮ್ಮನೆ ಅಪಪ್ರಚಾರ ಮಾಡಿ ಗುತ್ತಿಗೆದಾರರಿಗೆ ತೊಂದರೆ ನೀಡುತ್ತಿದ್ದಾರೆ. ಅವರಿಂದ ಕಮಿಷನ್ ಹಣ ಬೇಕು ಎಂದು ಕೆಲಸ ನಿಲ್ಲಿಸಲು ಧಮ್ಕಿ ಹಾಕುತ್ತಿರುವುದು ಸರಿಯಲ್ಲ. ರೈತರಿಗೆ ಲಾಭವಾಗುವ ಯೋಜನೆಗೆ ಕಮಿಷನ್ ಹಣಕ್ಕಾಗಿ ವಿರೋಧ ಮಾಡಿ ರೈತರನ್ನು ದಿಕ್ಕುತಪ್ಪಿಸಲು ಮುಂದಾದರೆ ಜನರಿಗೆ ತಿಳಿಯುವುದಿಲ್ಲವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ದಾಖಲೆ ಬಿಡುಗಡೆ: ಇದೇ ವೇಳೆ ನ್ಯಾಯಾಲಯದ ಆದೇಶ ಪ್ರತಿಗಳು, ಕೇಂದ್ರ ಸಚಿವ ವಿ.ಸೋಮಣ್ಣನವರ ಮನವಿ ಪತ್ರ, ನೀರಿನ ಲಾಭದ ಜತೆ ಸಂಸ್ಕರಿಸಿದ ನೀರಿನ ಶುದ್ಧತೆಯ ದಾಖಲಾತಿಗಳನ್ನು ಬಿಡುಗಡೆ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಎನ್‌ಪಿಎ ಅಧ್ಯಕ್ಷ ಎಂ.ನಾರಾಯಣಗೌಡ, ಮಾಜಿ ಅಧ್ಯಕ್ಷ ಹೇಮಂತ್‌ಕುಮಾರ್, ಜಿಪಂ ಮಾಜಿ ಸದಸ್ಯ ಅರ್ಜುನ್, ಟಿಎಪಿಸಿಎಂಎಸ್ ಅಧ್ಯಕ್ಷ ನರಸಿಂಹಮೂರ್ತಿ, ನಗರಸಭೆ ಉಪಾಧ್ಯಕ್ಷ ಆನಂದ್‌, ಸದಸ್ಯರಾದ ಪ್ರದೀಪ್.ನರಸಿಂಹಮೂರ್ತಿ,ಮುಖಂಡರಾದ ಎಂ.ಕೆ ನಾಗರಾಜು, ಟಿ.ನಾಗರಾಜು, ಮುನಿರಾಜು, ತಟ್ಟೆಕೆರೆಬಾಬು, ಚಿಕ್ಕಣ್ಣ, ಬಿ.ಜಿ ವಾಸು, ನಾರಾಯಣಗೌಡ, ರಂಗಸ್ವಾಮಿ, ಮುನಿಯಪ್ಪ, ಕೆ.ಕೃಷ್ಣಪ್ಪ, ಕೆಂಪರಾಜು, ನಟರಾಜು, ರವಿಕುಮಾರ್, ವಾಸು, ಸಿ.ಎಂಗೌಡ, ರುಕ್ಕಿಣಿ, ಚನ್ನಕೇಶವ, ರಾಮಕೃಷ್ಣ, ಮಂಜುನಾಥ್‌ ಗೌಡ ಮತ್ತಿತರರಿದರು.

ಪೊಟೊ-3ಕೆಎನ್ಎಲ್ಎಮ್ 1-

ನೆಲಮಂಗಲದಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿ.ಆ‌ರ್ ಗೌಡ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಎನ್‌ಪಿಎ ಅಧ್ಯಕ್ಷ ಎಂ.ನಾರಾಯಣಗೌಡ, ಮಾಜಿ ಅಧ್ಯಕ್ಷ ಹೇಮಂತ್‌ಕುಮಾರ್, ಜಿಪಂ ಮಾಜಿ ಸದಸ್ಯ ಅರ್ಜುನ್, ಟಿಎಪಿಸಿಎಂಎಸ್ ಅಧ್ಯಕ್ಷ ನರಸಿಂಹಮೂರ್ತಿ ಇತರರಿದ್ದರು.

PREV