ಕ್ರೀಡಾಂಗಣದ ಬಳಿ ನಿವೇಶನ ನೀಡಲು ವಿರೋಧ

KannadaprabhaNewsNetwork |  
Published : May 24, 2024, 12:55 AM IST
೨೩ಬಿಹೆಚ್‌ಆರ್ ೨: ಬಾಳೆಹೊನ್ನೂರಿನ ಅಕ್ಷರನಗರದಲ್ಲಿ ಬಂಡಿಮಠದ ಪ್ರವಾಹ ಸಂತ್ರಸ್ಥರಿಗೆ ನೀಡುವ ನಿವೇಶನ ಜಾಗವನ್ನು ಎನ್.ಆರ್.ಪುರ ತಾಪಂ ಇಓ ನವೀನ್‌ಕುಮಾರ್ ಪರಿಶೀಲಿಸಿದರು. ಸದಾಶಿವ ಆಚಾರ್ಯ, ರಾಮಪ್ಪ, ಸಂತೋಷ್‌ಕುಮಾರ್ ಇದ್ದರು. | Kannada Prabha

ಸಾರಾಂಶ

ಬಾಳೆಹೊನ್ನೂರು: ಬನ್ನೂರು ಗ್ರಾಪಂ ವ್ಯಾಪ್ತಿಯ ಬಂಡಿಮಠದ ಪ್ರವಾಹ ಸಂತ್ರಸ್ಥರಿಗೆ ಬಿ.ಕಣಬೂರು ಗ್ರಾಪಂ ವ್ಯಾಪ್ತಿಯ ಅಕ್ಷರನಗರದ ಕ್ರೀಡಾಂಗಣದ ಬಳಿ ನಿವೇಶನ ನೀಡಬಾರದು ಎಂದು ಗ್ರಾಪಂ ಸದಸ್ಯ ಬಿ.ಸಿ.ಸಂತೋಷ್‌ಕುಮಾರ್ ಒತ್ತಾಯಿಸಿದ್ದಾರೆ.

ಬಾಳೆಹೊನ್ನೂರು: ಬನ್ನೂರು ಗ್ರಾಪಂ ವ್ಯಾಪ್ತಿಯ ಬಂಡಿಮಠದ ಪ್ರವಾಹ ಸಂತ್ರಸ್ಥರಿಗೆ ಬಿ.ಕಣಬೂರು ಗ್ರಾಪಂ ವ್ಯಾಪ್ತಿಯ ಅಕ್ಷರನಗರದ ಕ್ರೀಡಾಂಗಣದ ಬಳಿ ನಿವೇಶನ ನೀಡಬಾರದು ಎಂದು ಗ್ರಾಪಂ ಸದಸ್ಯ ಬಿ.ಸಿ.ಸಂತೋಷ್‌ಕುಮಾರ್ ಒತ್ತಾಯಿಸಿದ್ದಾರೆ.

ಎನ್.ಆರ್.ಪುರ ತಾಪಂ ಇಒ ನವೀನ್‌ಕುಮಾರ್ ಪರಿಶೀಲನೆ ಸ್ಥಳಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮಾತನಾಡಿದ ಅವರು, ಅಕ್ಷರನಗರ, ಮಾಗೋಡು, ರೇಣುಕನಗರ ಸುತ್ತಮುತ್ತ ಮೂರು ಸಾವಿರ ಕುಟುಂಬಗಳು ವಾಸಿಸುತ್ತಿವೆ. ಇಲ್ಲಿ ಮಕ್ಕಳಿಗೆ ಆಟವಾಡಲು ಸುಸಜ್ಜಿತ ಕ್ರೀಡಾಂಗಣವಿಲ್ಲ. ತಾಲೂಕು ಆಡಳಿತ ಕ್ರೀಡಾಂಗಣದ ಜಾಗದಲ್ಲಿ ನಿವೇಶನ ನೀಡಲು ಮುಂದಾಗಿದೆ. ಸಂತ್ರಸ್ಥರಿಗೆ ಅಕ್ಷನಗರದ ಬಳಿ ೧೦ ಎಕರೆಗೂ ಹೆಚ್ಚು ಗೋಮಾಳ ಜಾಗ ಖಾಲಿಯಿದ್ದು ಅಲ್ಲಿ ನಿವೇಶನ ನೀಡಬಹುದು. ಮುಂದಿನ ದಿನದಲ್ಲಿ ಶಾಸರು, ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.

ತಾಪಂ ಇಒ ನವೀನ್‌ಕುಮಾರ್ ಮಾತನಾಡಿ, ಗ್ರಾಮಸ್ಥರ ಅಹವಾಲು ಸ್ವೀಕರಿಸಿ ಪರಿಶೀಲನೆ ನಡೆಸಿ ಮುಂದಿನ ದಿನದಲ್ಲಿ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದರು.

ಬಿ.ಕಣಬೂರು ಗ್ರಾಪಂ ಅಧ್ಯಕ್ಷ ಸದಾಶಿವ ಆಚಾರ್ಯ, ಕಾರ್ಯದರ್ಶಿ ರಾಮಪ್ಪ, ಸ್ಥಳೀಯರಾದ ನಾಗರಾಜ್, ಸಂದೀಪ್‌ಶೆಟ್ಟಿ, ವಿ.ಅಶೋಕ ಮತ್ತಿತರರು ಹಾಜರಿದ್ದರು.೨೩ಬಿಹೆಚ್‌ಆರ್ ೨: ಬಾಳೆಹೊನ್ನೂರಿನ ಅಕ್ಷರನಗರದಲ್ಲಿ ಬಂಡಿಮಠದ ಪ್ರವಾಹ ಸಂತ್ರಸ್ಥರಿಗೆ ನೀಡುವ ನಿವೇಶನ ಜಾಗವನ್ನು ಎನ್.ಆರ್.ಪುರ ತಾಪಂ ಇಒ ನವೀನ್‌ಕುಮಾರ್ ಪರಿಶೀಲಿಸಿದರು. ಸದಾಶಿವ ಆಚಾರ್ಯ, ರಾಮಪ್ಪ, ಸಂತೋಷ್‌ಕುಮಾರ್ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!