ರಾಣಿ ಚನ್ನಮ್ಮಳ ಜಯಂತಿ, ವಿಜಯೋತ್ಸವ ಒಂದೇ ದಿನ ಆಚರಣೆಗೆ ವಿರೋಧ

KannadaprabhaNewsNetwork |  
Published : Nov 17, 2024, 01:18 AM IST
ಚನ್ನಮ್ಮನ ಕಿತ್ತೂರಿನಲ್ಲಿ ರಾಜಗುರು ಸಂಸ್ಥಾನ ಕಲ್ಮಠದಲ್ಲಿ ರಾಣಿ ಚನ್ನಮ್ಮಳ 246ನೇ ಜಯಂತಿಯನ್ನು ಮಕ್ಕಳೊಂದಿಗೆ ರಾಜಗುರು ಸಂಸ್ಥಾನ ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ ಆಚರಿಸಿದರು. | Kannada Prabha

ಸಾರಾಂಶ

ಹಲವಾರು ವರ್ಷಗಳಿಂದ ನ.14ರಂದೇ ರಾಣಿ ಚನ್ನಮ್ಮಳ ಜಯಂತಿ ಆಚರಿಸಲಾಗುತ್ತದೆ. ಈ ಕುರಿತು ಸರ್ಕಾರಕ್ಕೆ ಎಷ್ಟು ಸಲ ಮನವಿ ಮಾಡಿದರೂ ಕಿತ್ತೂರು ವಿಜಯೋತ್ಸವ ದಿನವೇ ಚನ್ನಮ್ಮಳ ಜಯಂತಿ ಆಚರಿಸುತ್ತಿರುವುದಕ್ಕೆ ರಾಜಗುರು ಸಂಸ್ಥಾನ ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ ಕಳವಳ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಚನ್ನಮ್ಮನ ಕಿತ್ತೂರು

ಹಲವಾರು ವರ್ಷಗಳಿಂದ ನ.14ರಂದೇ ರಾಣಿ ಚನ್ನಮ್ಮಳ ಜಯಂತಿ ಆಚರಿಸಲಾಗುತ್ತದೆ. ಈ ಕುರಿತು ಸರ್ಕಾರಕ್ಕೆ ಎಷ್ಟು ಸಲ ಮನವಿ ಮಾಡಿದರೂ ಕಿತ್ತೂರು ವಿಜಯೋತ್ಸವ ದಿನವೇ ಚನ್ನಮ್ಮಳ ಜಯಂತಿ ಆಚರಿಸುತ್ತಿರುವುದಕ್ಕೆ ರಾಜಗುರು ಸಂಸ್ಥಾನ ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ ಕಳವಳ ವ್ಯಕ್ತಪಡಿಸಿದರು.

ರಾಜಗುರು ಸಂಸ್ಥಾನ ಕಲ್ಮಠದಲ್ಲಿ ಗುರುವಾರ ನಡೆದ ರಾಣಿ ಚನ್ನಮ್ಮಳ 246ನೇ ಜಯಂತಿ ಮತ್ತು ಮಕ್ಕಳ ದಿನಾಚರಣೆ ಅಂಗವಾಗಿ ನಡೆದ ಸಮಾರಂಭದಲ್ಲಿ ಮಾತನಾಡಿದ ಅವರು, ಸರ್ಕಾರದ ಮೇಲೆ ಜನಪ್ರತಿನಿಧಿಗಳು ಒತ್ತಡ ತಂದು ಈ ಕೂಡಲೇ ಸರಿಪಡಿಸುವ ಕೆಲಸ ಮಾಡಬೇಕು. ಹೀಗಾಗದಂತೆ ನೋಡಿಕೊಳ್ಳಬೇಕೆಂದು ಒತ್ತಾಯಿಸಿದರು.

ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕದ ಆಧ್ಯಕ್ಷ ಡಾ.ಎಸ್.ಬಿ. ದಳವಾಯಿ ಮಾತನಾಡಿ, ವೀರ ರಾಣಿ ಚನ್ನಮ್ಮಳ ಜಯಂತಿಯನ್ನು ನ.14ರಂದು ಆಚರಿಸುತ್ತಾ ಬರಲಾಗಿದೆ. ಸರ್ಕಾರ ಅಕ್ಟೋಬರ್ 23 ರಂದು ಚನ್ನಮ್ಮಳ ಜಯಂತಿ ಆಚರಿಸುವುದರ ಮೂಲಕ ಜನತೆಯಲ್ಲಿ ಗೊಂದಲ ಮೂಡಿಸುತ್ತಿರುವುದಕ್ಕೆ ವಿಷಾದ ವ್ಯಕ್ತಪಡಿಸಿದ ಅವರು, ಮಕ್ಕಳಲ್ಲಿ ಚನ್ನಮ್ಮನ ಜಯಂತಿ ಮತ್ತು ವಿಜಯೋತ್ಸವ ಕುರಿತು ಸರಿಯಾದ ಮಾಹಿತಿ ನೀಡಬೇಕೆಂದು ಶಿಕ್ಷಕರಲ್ಲಿ ಮನವಿ ಮಾಡಿದರು. ವಿದ್ಯಾರ್ಥಿಗಳಿಗೆ ಮಕ್ಕಳ ದಿನಾಚರಣೆಯ ಶುಭಾಶಯಗಳನ್ನು ತಿಳಿಸುತ್ತಾ ದೂರದರ್ಶನ ಮತ್ತು ಮೊಬೈಲ್‌ ದೂರವಿರುವಂತೆ ಮನವಿ ಮಾಡಿದರು.

ರಾಜಗುರು ಶಿಕ್ಷಣ ಸಂಸ್ಥೆಯ ಶಿಕ್ಷಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು. ದೀನಾ ಲಂಗೋಟಿ ಸ್ವಾಗತಿಸಿದರು. ನಂದಿನಿ ಹಿರೇಮಠ ವಂದಿಸಿದರು. ರಾಜೇಶ್ವರಿ ಕಳಸಣ್ಣವರ ನಿರೂಪಿಸಿದರು. ನಂತರ ಮಕ್ಕಳಿಂದ ವೇಷಭೂಷಣ ಮತ್ತು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಲ್ಸ್‌ ಪೋಲಿಯೋ ಹಾಕಿಸಿ, ಅಂಗವಿಕತೆ ತಪ್ಪಿಸಿ
ಪುಷ್ಪಗಿರಿ ಜೇಸಿಗೆ 50 ವರ್ಷ: ಸಂಭ್ರಮ ಆಚರಣೆ