ಶೃಂಗೇರಿ, ಪಟ್ಟಣದ ಮೆಸ್ಕಾಂ ಕಚೇರಿ ಎದುರು ಇರುವ ರಾಜಕಾಲುವೆಯಲ್ಲಿರುವ ಹೂಳು, ತ್ಯಾಜ್ಯ ಮಣ್ಣುಗಳನ್ನು ತುಂಗಾ ನದಿ ದಡದಲ್ಲಿ ಹಾಕುತ್ತಿರುವುದನ್ನು ಸಾರ್ವಜನಿಕರು ವಿರೋಧಿಸಿದ್ದಾರೆ.
ರಾಜಕಾಲುವೆಯ ಹೂಳು ನದಿಗೆ ಸೇರಿದರೆ ನೀರು ಕಲುಷಿತ
-ಮಳೆ ಬಂದರೆ ತ್ಯಾಜ್ಯ, ಹೂಳು ನದಿಗೆ ಸೇರ್ಪಡೆ
- ಕೂಡಲೇ ತ್ಯಾಜ್ಯ ಮಣ್ಣಿನ ರಾಶಿ ತೆರವಿಗೆ ಆಗ್ರಹ
- ಸ್ಥಳೀಯ ಆಡಳಿತ ಕ್ರಮ ಕೈಗೊಳ್ಳಲಿ
ಕನ್ನಡಪ್ರಭ ವಾರ್ತೆ, ಶೃಂಗೇರಿ
ಪಟ್ಟಣದ ಮೆಸ್ಕಾಂ ಕಚೇರಿ ಎದುರು ಇರುವ ರಾಜಕಾಲುವೆಯಲ್ಲಿರುವ ಹೂಳು, ತ್ಯಾಜ್ಯ ಮಣ್ಣುಗಳನ್ನು ತುಂಗಾ ನದಿ ದಡದಲ್ಲಿ ಹಾಕುತ್ತಿರುವುದನ್ನು ಸಾರ್ವಜನಿಕರು ವಿರೋಧಿಸಿದ್ದಾರೆ.
ರಾಜಕಾಲುವೆಯಲ್ಲಿ ಹೂಳು ತುಂಬಿದ್ದು, ಅದರ ಹೂಳೆತ್ತುವ ಕೆಲಸ ನಡೆಯುತ್ತಿದೆ. ಅದರಲ್ಲಿರುವ ಕಸ ಕಡ್ಡಿ, ಹೂಳು, ತ್ಯಾಜ್ಯ ಮಣ್ಣುಗಳನ್ನು ತುಂಗಾ ನದಿ ದಡದಲ್ಲಿ ಸುರಿಯುತ್ತಿರುವುದರಿಂದ ಮಳೆ ಬಂದರೆ ತ್ಯಾಜ್ಯ, ಹೂಳೆಲ್ಲ ನದಿಗೆ ಸೇರಿ ನೀರಿ ಕಲುಷಿತಗೊಳ್ಳುತ್ತದೆ.
ಶೃಂಗೇರಿ ಪಟ್ಟಣಕ್ಕೆ ತುಂಗಾ ನದಿಯ ನೀರೆ ಆಧಾರವಾಗಿದ್ದು, ಈಗಾಗಲೇ ತುಂಗಾ ನದಿ ದಡದುದ್ದಕ್ಕೂ ತ್ಯಾಜ್ಯಗಳ ರಾಶಿಯೇ ಇದ್ದು, ಕಾಲುವೆ, ತ್ಯಾಜ್ಯ, ಮಲೀನ ನೀರೆಲ್ಲ ನದಿಗೆ ಸೇರುತ್ತಿದೆ. ಗಾಂಧಿ ಮೈದಾನದ ತ್ಯಾಜ್ಯ, ಪ್ಲಾಸ್ಟಿಕ್ ಕಸವೆಲ್ಲ ತುಂಗಾ ನದಿಯ ಮಡಿಲು ಸೇರುತ್ತಿದೆ. ತುಂಗಾ ನದಿಯ ನೀರು ಸಾಕಷ್ಟು ಮಲಿನಗೊಂಡಿದೆ.
ಇಷ್ಟೆಲ್ಲ ಆಗಿದ್ದರ ಮತ್ತೆ ತ್ಯಾಜ್ಯ, ಹೂಳನ್ನು ತುಂಗಾ ನದಿಯ ದಡದಲ್ಲಿ ರಾಶಿ ಹಾಕಿ ಮತ್ತೆ ತುಂಗಾನದಿಯ ನೀರು ಮಲಿನ ಗೊಳಿಸುತ್ತಿರುವ ವಿರುದ್ಧ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ಕೂಡಲೇ ಇಲ್ಲಿ ಹಾಕಿರುವ ತ್ಯಾಜ್ಯ ಮಣ್ಣಿನ ರಾಶಿಯನ್ನು ತೆರವು ಗೊಳಿಸಿ ತುಂಗಾನದಿ ದಡದುದ್ದಕ್ಕೂ ತ್ಯಾಜ್ಯ ಹಾಕದಂತೆ ಸ್ಥಳೀಯ ಆಡಳಿತ ಕ್ರಮ ಕೈಗೊಳ್ಳಬೇಕಿದೆ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
4 ಶ್ರೀ ಚಿತ್ರ 2-
ಶೃಂಗೇರಿ ತುಂಗಾ ನದಿ ದಡದಲ್ಲಿ ತ್ಯಾಜ್ಯ ಹೂಳು ಮಣ್ಣು ಸುರಿಯುತ್ತಿರುವುದು
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.