-ವಿದ್ಯಾರ್ಥಿನಿಯರ ಹಾಸ್ಟೆಲ್ ಇರುವ ಕಟ್ಟಡದಲ್ಲಿ ಕೋರ್ಟ್ ಕಲಾಪಕ್ಕೆ ಸಿದ್ಧತೆ । ಪೋಷಕರ ಆಕ್ರೋಶಕನ್ನಡಪ್ರಭ ವಾರ್ತೆ ಚೇಳೂರುತಾಲೂಕು ಕಚೇರಿ ಸಮೀಪದ ಪುಲಗಲ್ ಕ್ರಾಸ್ ಬಳಿ ನ್ಯಾಯಾಲಯ ಹಾಗೂ ನ್ಯಾಯಾಧೀಶರ ವಸತಿಗೃಹ ನಿರ್ಮಾಣಕ್ಕಾಗಿ ಗುರುತಿಸಲಾಗಿರುವ ಜಾಗವನ್ನು ಹೈಕೋರ್ಟ್ ಹಾಗೂ ಜಿಲ್ಲಾ ನ್ಯಾಯಾಧೀಶರ ನಿಯೋಗವು ತರಾತುರಿಯಲ್ಲಿ ವೀಕ್ಷಿಸಿತು.ಇದೇ ವೇಳೆ, ಚೇಳೂರು ಪಟ್ಟಣದ ಮಾನಸ ಖಾಸಗಿ ಪದವಿ ಪೂರ್ವ ಕಾಲೇಜು ಕಟ್ಟಡದಲ್ಲಿ ತಾತ್ಕಾಲಿಕ ನ್ಯಾಯಾಲಯ ಸ್ಥಾಪಿಸಲು ಅಧಿಕಾರಿಗಳು ಮುಂದಾಗಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ಭಾರಿ ವಿರೋಧ ವ್ಯಕ್ತವಾಗಿದೆ. ನೂರಾರು ವಿದ್ಯಾರ್ಥಿನಿಯರು ಹಗಲು-ರಾತ್ರಿ ತಂಗುವ ಹಾಸ್ಟೆಲ್ ಇರುವ ಆವರಣದ ಮೊದಲ ಮಹಡಿಯಲ್ಲೇ ಕೋರ್ಟ್ ಕಲಾಪ ನಡೆಸಲು ಸಿದ್ಧತೆ ನಡೆಸಿರುವುದು ಪೋಷಕರ ಆಕ್ರೋಶಕ್ಕೆ ಕಾರಣವಾಗಿದೆ.ದಿನನಿತ್ಯ ಕ್ರಿಮಿನಲ್ ಪ್ರಕರಣಗಳ ಆರೋಪಿಗಳು ಹಾಗೂ ಅಪರಿಚಿತ ಕಕ್ಷಿದಾರರು ಓಡಾಡುವ ಜಾಗದಲ್ಲಿ ವಿದ್ಯಾರ್ಥಿನಿಯರ ಸುರಕ್ಷತೆಗೆ ಧಕ್ಕೆಯಾಗಲಿದ್ದು, ಇದು ಮಹಿಳಾ ಮತ್ತು ಮಕ್ಕಳ ಸುರಕ್ಷತೆಯ ಮಾರ್ಗಸೂಚಿಗಳ ಉಲ್ಲಂಘನೆಯಾಗಿದೆ ಎಂದು ಪೋಷಕರು ದೂರಿದ್ದಾರೆ.ಸ್ಥಳ ಪರಿಶೀಲನೆ ವೇಳೆ ನ್ಯಾಯಾಧೀಶರು ಕೋರ್ಟ್‌ಗೆ ಪ್ರತ್ಯೇಕ ಮೆಟ್ಟಿಲು ನಿರ್ಮಿಸಲು ಸೂಚಿಸಿದ್ದಾರೆ ಎನ್ನಲಾಗಿದ್ದರೂ, ಕೇವಲ ಮೆಟ್ಟಿಲು ಬದಲಿಸಿದರೆ ಸುರಕ್ಷತೆ ಸಿಗುವುದೇ ಎಂದು ಸಾರ್ವಜನಿಕರು ಪ್ರಶ್ನಿಸಿದ್ದು, ನಿರ್ಧಾರ ಬದಲಿಸದಿದ್ದರೆ ಚೇಳೂರು ಬಂದ್ ಮಾಡುವುದಾಗಿ ಎಚ್ಚರಿಸಿದ್ದಾರೆ.ಎರಡು ದಿನ ಕಲಾಪ:
ವಿಳಂಬಕ್ಕೆ ಬೇಸರ:
ನೂತನ ತಾಲೂಕು ಕೇಂದ್ರವಾದ ಚೇಳೂರಿನಲ್ಲಿ ನ್ಯಾಯಾಲಯ ಸ್ಥಾಪನೆಗೆ ಸಂಬಂಧಿಸಿ ಹೈಕೋರ್ಟ್ ಹಾಗೂ ಜಿಲ್ಲಾ ನ್ಯಾಯಾಧೀಶರ ನಿಯೋಗದ ಆಗಮನ ವಿಳಂಬವು ಸಾರ್ವಜನಿಕರು, ಅಧಿಕಾರಿಗಳು ಹಾಗೂ ವಕೀಲರಲ್ಲಿ ತೀವ್ರ ಬೇಸರಕ್ಕೆ ಕಾರಣವಾಯಿತು.ಭಾನುವಾರ ಬೆಳಗ್ಗೆ 12ರ ಸುಮಾರಿಗೆ ನ್ಯಾಯಾಧೀಶರಾದ ಸಂಜೀವ್‌ಕುಮಾರ್ ಹಾಗೂ ಜಿಲ್ಲಾ ನ್ಯಾಯಾಧೀಶರ ತಂಡ ಪಟ್ಟಣಕ್ಕೆ ಆಗಮಿಸಲಿದೆ ಎಂದು ತಿಳಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ತಾಲೂಕು ಮಟ್ಟದ ಹಿರಿಯ ಅಧಿಕಾರಿಗಳು, ವಕೀಲರು ಹಾಗೂ ಸಾರ್ವಜನಿಕರು ಬಿಸಿಲಲ್ಲೂ ಗಂಟೆಗಟ್ಟಲೆ ಕಾದು ಕುಳಿತಿದ್ದರು. ಆದರೆ ಅನಿವಾರ್ಯ ಕಾರಣಗಳಿಂದಾಗಿ ನಿಯೋಗವು ನಿಗದಿತ ಸಮಯಕ್ಕೆ ಬಾರದೆ, ಸಂಜೆ 4.20ರ ಸುಮಾರಿಗೆ ತಡವಾಗಿ ಪಟ್ಟಣಕ್ಕೆ ಬಂದಿತು.ವಕೀಲರ ಸಂಘದಿಂದ ಸನ್ಮಾನ: