ವಿದ್ಯುತ್ ಕ್ಷೇತ್ರ ಖಾಸಗೀಕರಣಕ್ಕೆ ವಿರೋಧ

KannadaprabhaNewsNetwork |  
Published : Jun 12, 2026, 02:30 AM IST
9ಕೆಪಿಎಲ್6:ಕೊಪ್ಪಳ ನಗರದ  ವಿಭಾಗದ ಅಧಿಕಾರಿ ಮತ್ತು ನೌಕರರು ಕ.ವಿ.ಪ್ರ.ನಿ. ನೌಕರ ಸಂಘದ ವತಿಯಿಂದ ಹಾಗೂ ನೌಕರರ ಅಧಿಕಾರಿಗಳು ಒಕ್ಕೂಟದಿಂದವಿದ್ಯುತ್ ಕ್ಷೇತ್ರವನ್ನು ಖಾಸಗೀಕರಣ ವಿರೋಧಿಸಿ  ವಿದ್ಯುತ್ ನಿಯಂತ್ರಣ ಆಯೋಗಕ್ಕೆ  ಆಕ್ಷೇಪಣೆ ಸಲ್ಲಿಸಿದರು.  | Kannada Prabha

ಸಾರಾಂಶ

ಟಾಟಾ ಕಂಪನಿಯ ಖಾಸಗೀಕರಣ ವಿರೋಧಿಸಿ ಮುಂದಿನ ಹೋರಾಟ ರೂಪರೇಷೆ ನಿಗದಿಪಡಿಸಲು ಸಭೆ ನಡೆಸುವ ಮೂಲಕ ಮುಂದಿನ ಉಗ್ರ ಹೋರಾಟಕ್ಕೆ ಬೆಂಬಲ

ಕೊಪ್ಪಳ: ವಿದ್ಯುತ್ ಕ್ಷೇತ್ರದ ಖಾಸಗೀಕರಣ ವಿರೋಧಿಸಿ ವಿದ್ಯುತ್ ನಿಯಂತ್ರಣ ಆಯೋಗಕ್ಕೆ ನಗರ ವಿಭಾಗದ ಅಧಿಕಾರಿ ಮತ್ತು ನೌಕರರು ಕವಿಪ್ರನಿ ನೌಕರ ಸಂಘ ಹಾಗೂ ನೌಕರರ ಅಧಿಕಾರಿಗಳು ಒಕ್ಕೂಟದಿಂದ ಆಕ್ಷೇಪಣೆ ಸಲ್ಲಿಸಿದರು.

ಸಂಘಟನಾ ಕಾರ್ಯದರ್ಶಿ ನಾಗರಾಜ ಗಾಯಕವಾಡ್, ಕೇಂದ್ರ ಸಮಿತಿಯ ಸದಸ್ಯ ಅನಾಳಪ್ಪ ಮಾತನಾಡಿ, ಟಾಟಾ ಕಂಪನಿಯ ಖಾಸಗೀಕರಣ ವಿರೋಧಿಸಿ ಮುಂದಿನ ಹೋರಾಟ ರೂಪರೇಷೆ ನಿಗದಿಪಡಿಸಲು ಸಭೆ ನಡೆಸುವ ಮೂಲಕ ಮುಂದಿನ ಉಗ್ರ ಹೋರಾಟಕ್ಕೆ ಬೆಂಬಲ ಸೂಚಿಸಿದರು. ಕೇಂದ್ರ ಸಮಿತಿ ಆದೇಶದಂತೆ ಮುಂದಿನ ಹೋರಾಟಕ್ಕೆ ಸಜ್ಜಾಗುವಂತೆ ನಿರ್ಣಯ ಕೈಗೊಳ್ಳಲಾಯಿತು ಎಂದು ತಿಳಿಸಿದರು.

ಕೊಪ್ಪಳ ವೃತ್ತದ ಅಧಿಕ್ಷಕ ಅಭಿಯಂತರರು, ಕಾರ್ಯನಿರ್ವಾಹಕ ಇಂಜನಿಯರ್‌ಗಳು, ಲೆಕ್ಕಾಧಿಕಾರಿಗಳು, ಅಭಿಯಂತರರು, ಲೆಕ್ಕಾಧಿಕಾರಿಗಳು, ಶಾಖಾಧಿಕಾರಿಗಳು, ಸಮಿತಿಯ ಪದಾಧಿಕಾರಿಗಳು, ಕಲ್ಯಾಣ ಸಂಸ್ಥೆಯ ವೃತ್ತದ ಸಂಘಟನಾ ಕಾರ್ಯದರ್ಶಿ, ಕೇಂದ್ರ ಕಾರ್ಯ ಸಮಿತಿ ಸದಸ್ಯರು, ಇಂಜಿನಿಯರ್ ಅಸೋಸಿಯೇಷನ್ ಕೇಂದ್ರ ಸಮಿತಿ ಸದಸ್ಯರು, ಅಧ್ಯಕ್ಷರು, ಕಾರ್ಯದರ್ಶಿಗಳು, ಲೆಕ್ಕಾಧಿಕಾರಿಗಳ ಸಂಘ ಕೇಂದ್ರ ಸಮಿತಿ ಸದಸ್ಯರು, ಅಧ್ಯಕ್ಷರು, ಕಾರ್ಯದರ್ಶಿಗಳು, ಡಿಪ್ಲೋಮಾ ಇಂಜಿನಿಯರ್ ಸಂಸ್ಥೆಯ ಕೇಂದ್ರ ಸಮಿತಿ ಸದಸ್ಯರು ಅಧ್ಯಕ್ಷರು ಕಾರ್ಯದರ್ಶಿಗಳು, ವೃತ್ತದ ಎಲ್ಲ ವೆಲ್ಫೇರ್ ಅಸೋಸಿಯೇಷನ ಅಧ್ಯಕ್ಷರು ಕಾರ್ಯದರ್ಶಿಗಳು, ಪಿಂಚಣಿದಾರರ ಸಂಘದ ಪದಾಧಿಕಾರಿಗಳು, ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರ ಸಂಘದ ಸದಸ್ಯರು, ರೈತ ಬಾಂಧವರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಹಿಳಾ - ಮಕ್ಕಳ ಇಲಾಖೆಯ ಸಿಬ್ಬಂದಿಗಳಿಗೆ ಮಾಹಿತಿ ಕಾರ್ಯಾಗಾರ
ಎಂಐಟಿಕೆ ವಿದ್ಯಾರ್ಥಿನಿಯರಿಂದ ಸ್ಮಾರ್ಟ್ ಹೈಡ್ರೋಪೋನಿಕ್ಸ್