ಪಶು ಆಸ್ಪತ್ರೆ ಸ್ಥಳಾಂತರಕ್ಕೆ ವಿರೋಧ

KannadaprabhaNewsNetwork |  
Published : Dec 05, 2025, 12:45 AM IST
3ಕೆಜಿಎಫ್‌2 | Kannada Prabha

ಸಾರಾಂಶ

ಮಾರಿಕುಪ್ಪಂ ಭಾಗದಲ್ಲಿ ಅಂದಾಜು ೯ ರಿಂದ ೧೦ ಸಾವಿರ ಮೂಕ ಪ್ರಾಣಿಗಳಿಗೆ ಚಿಕಿತ್ಸೆ ನೀಡುತ್ತಿರುವ ಪಶು ಆಸ್ಪತ್ರೆಯಾಗಿದ್ದು, ಈಗ ಆಸ್ಪತ್ರೆಯನ್ನು ಶಾಸಕಿ ರೂಪಕಲಾಶಶಿಧರ್ ಅವರ ಶಿಫಾರಿಸಿ ಮೇರೆಗೆ ತಾಲೂಕಿನ ಬಡಮಾಕನಹಳ್ಳಿಗೆ ಸ್ಥಳಾಂತರ ಮಾಡಲಾಗುತ್ತಿದೆ. ಇದರಿಂದಾಗಿ ಈ ಭಾಗದ ಕೋಳಿ, ಕುರಿ, ಹಸುಗಳ ಚಿಕಿತ್ಸೆಗೆ ತೊಂದರೆಯಾಗಲಿದೆ.

ಕನ್ನಡಪ್ರಭ ವಾರ್ತೆ ಕೆಜಿಎಫ್ಬ್ರಿಟಿಷರ ಕಾಲದ ಮೈಸೂರ್ ಮೈನ್ಸ್‌ನ ಪ್ರಾಥಮಿಕ ಪಶು ಚಿಕ್ಸಿತೆ ಆಸ್ಪತ್ರೆಯನ್ನು ಬೇರೆಡೆಗೆ ಸ್ಥಳಾಂತರ ಮಾಡಿದರೆ ಶಾಸಕರ ಮನೆಯ ಮುಂದೆ ಹಸು, ಕುರಿ, ಮೇಕೆಗಳನ್ನು ಕಟ್ಟಿ ಹೋರಾಟ ಪ್ರತಿಭಟನೆ ನಡೆಸುವುದಾಗಿ ನಗರ ಮತ್ತು ಗ್ರಾಮಾಂತರ ರೈತರು ಮತ್ತು ಹಸು ಸಾಕಣೆದಾರರು ಎಚ್ಚರಿಕೆ ನೀಡಿದ್ದಾರೆ. ಮಾರಿಕುಪ್ಪಂ ಭಾಗದಲ್ಲಿ ಅಂದಾಜು ೯ ರಿಂದ ೧೦ ಸಾವಿರ ಮೂಕ ಪ್ರಾಣಿಗಳಿಗೆ ಚಿಕಿತ್ಸೆ ನೀಡುತ್ತಿರುವ ಪಶು ಆಸ್ಪತ್ರೆಯಾಗಿದ್ದು, ಈಗ ಆಸ್ಪತ್ರೆಯನ್ನು ಶಾಸಕಿ ರೂಪಕಲಾಶಶಿಧರ್ ಅವರ ಶಿಫಾರಿಸಿ ಮೇರೆಗೆ ತಾಲೂಕಿನ ಬಡಮಾಕನಹಳ್ಳಿಗೆ ಸ್ಥಳಾಂತರ ಮಾಡಲಾಗುತ್ತಿದೆ. ಇದರಿಂದಾಗಿ ಈ ಭಾಗದ ಕೋಳಿ, ಕುರಿ, ಹಸುಗಳ ಚಿಕಿತ್ಸೆಗೆ ತೊಂದರೆಯಾಗುತ್ತದೆ ಕೂಡಲೇ ಶಾಸಕರು ಈ ಶಿಫಾರಸನ್ನು ವಾಪಸ್‌ ಪಡೆಯಬೇಕು ಎಂದು ರೈತರು ಒತ್ತಾಯಿಸಿದ್ದಾರೆ.

ಹೈನು ಉತ್ಪಾದಕರಿಗೆ ಕಷ್ಟಮೈಸೂರ್ ಮೈನ್ಸ್‌ನ ಪಶು ಆಸ್ಪತ್ರೆಯ ವ್ಯಾಪ್ತಿ ಚಿನ್ನದ ಗಣಿಗಳ ಕಾರ್ಮಿಕರು ೫ ವಾರ್ಡ್‌ಗಳು, ಗ್ರಾಮಾಂತರ ವ್ಯಾಪ್ತಿಗೆ ಬರುವ ಮಾರಿಕುಪ್ಪಂ, ಬಳಿಗಾಣಹಳ್ಳಿ, ಗಿಡ್ಡೇಗೌಡನಹಲ್ಳಿ, ಕೆಜಿಎಫ್ ಎ-ಬ್ಲಾಕ್, ಸೌತ್-ಬ್ಲಾಕ್, ಹಳ್ಳಿಕಡ್ಯೆ, ಚಿನ್ನಕಲ್ಲು, ನಗರ ಮಿಷನ್ ಲೈನ್, ಪಾರ್ಪೆಂಟರ್ ಬಡಾವಣೆ, ಚಾಂಪಿಯನ್ ರೈಲ್ವೆ ಸ್ಟೇಷನ್ ಬಡಾವಣೆ, ಹೆದ್ಗರ್ ಲೈನ್ ವ್ಯಾಪ್ತಿಯಲ್ಲಿ ಹಲವಾರು ಚಿನ್ನದ ಗಣಿಗಳ ಪ್ರದೇಶದ ಕಾರ್ಮಿಕರ ಕುಟುಂಬಗಳು ಸೀಮೆ ಹಸುಗಳನ್ನು ಸಾಕಿ ಜೀವನ ನಡೆಸುತ್ತಿದ್ದಾರೆ. ಪಶು ಆಸ್ಪತ್ರೆಯನ್ನು ಸ್ಥಳಾಂತರ ಮಾಡುವುದರಿಂದ ರೈತರಿಗೆ ತೊಂದರೆಯಾಗಲಿದೆ. ಪಶು ಸಚಿವರಿಗೆ ಪತ್ರ ಬರೆದಿರುವ ರೈತರು:ಪಶುಸಂಗೋಪಾನ ಸಚಿವರು, ಸರಕಾರದ ಕಾರ್ಯದಶೀಗಳಿಗೆ ಪತ್ರ ಬರೆದಿರುವ ರೈತರು ಹಾಗೂ ಚಿನ್ನದ ಗಣಿಗಳ ಪ್ರದೇಶದ ಸೀಮೆ ಹಸುಗಳನ್ನು ಸಕಾಣಿಕೆ ಮಾಡುತ್ತಿರುವ ರೈತರು ಪತ್ರವನ್ನು ಬರೆದು ಮೂಕ ಪ್ರಾಣಿಗಳ ಆಸ್ಪತ್ರೆಯನ್ನು ಸ್ಥಳಾಂತರ ಮಾಡಿದರೆ ಬಾಯಿಲ್ಲ ಮೂಕ ಪ್ರಾಣಿಗಳಿಗೆ ತೊಂದರೆಯಾಗಲಿದೆ. ಮಾರಿಕುಪ್ಪಂನ ಮೈಸೂರ್ ಮೈನ್ಸ್‌ ಪ್ರಾಥಮಿಕ ಪಶು ಚಿಕಿತ್ಸಾಲಯವನ್ನು ಸ್ಥಾಳಾಂತರ ಮಾಡದೇ ಮುಂದುವರೆಸಬೇಕೆಂದು ಮನವಿ ಮಾಡಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಡೆಲ್ಲಿಯಲ್ಲಿ ಬಿಜೆಪಿ ರೆಬಲ್ಸ್‌ ಟೀಂ:ಬಿಎಲ್‌ಎಸ್‌ ಜತೆ ರಮೇಶ ಚರ್ಚೆ
ಮಳೆ, ಚಳಿ ಪರಿಣಾಮ: ಸೊಪ್ಪು, ತರಕಾರಿ ಬೆಲೆ ಏರಿಕೆ