ಕಲಕೇರಿ ವಿರುಪಾಪುರದ ಮುದುಕೇಶ್ವರ ಮಠಕ್ಕೆ ಉತ್ತರಾಧಿಕಾರಿ ನೇಮಕಕ್ಕೆ ವಿರೋಧ

KannadaprabhaNewsNetwork |  
Published : Feb 11, 2026, 02:30 AM IST
10ಎಂಡಿಜಿ1, ಮುಂಡರಗಿ ಪಟ್ಟಣದಲ್ಲಿ ಕಲಕೇರಿ-ವಿರುಪಾಪೂರ ಶ್ರೀ ಮುದುಕೇಶ್ವರ ಮಠದ ವಂಶಸ್ಥರದಾ ಹಾಲಯ್ಯ ಹಿರೇಮಠ ಮತ್ತು ಭಕ್ತರು ಮಂಗಳವಾರ ಸುದ್ದಿಗೋಷ್ಠಿ ನಡೆಸಿದರು. | Kannada Prabha

ಸಾರಾಂಶ

ಕಳೆದ ಡಿ‌. 8ರಂದು ಶ್ರೀಗಳು ಶ್ರೀಮಠದಲ್ಲಿ ಸಭೆ ಕರೆದು ಚರ್ಚಿಸುವ ಬದಲು ಖಾಸಗಿ ಜಾಗದಲ್ಲಿ ಸಭೆ ಕರೆದು ಏಕಾಏಕಿ ತಮ್ಮ ಸಹೋದರನ ಮಗನನ್ನು ಉತ್ತರಾಧಿಕಾರಿ ಎಂದು ನೇಮಕ‌ ಮಾಡಿ ಪಟ್ಟಾಧಿಕಾರಕ್ಕೆ ಮುಂದಾಗಿರುವುದು ಸರಿಯಲ್ಲ ಎಂದು ಕಲಕೇರಿ-ವಿರುಪಾಪುರ ಮುದುಕೇಶ್ವರ ಮಠದ ವಂಶಸ್ಥ ಹಾಲಯ್ಯ ಹಿರೇಮಠ ತಿಳಿಸಿದರು.

ಮುಂಡರಗಿ: ತಾಲೂಕಿನ ಕಲಕೇರಿ- ವಿರುಪಾಪುರದ ಮುದುಕೇಶ್ವರ ಮಠಕ್ಕೆ ಡಿ. 8ರಂದು ಉತ್ತರಾಧಿಕಾರಿ ನೇಮಕಕ್ಕೆ ವಿರೋಧವಿದ್ದು, ಕೂಡಲೇ ನೇಮಕವನ್ನು ರದ್ದುಗೊಳಿಸಬೇಕು. ಇಲ್ಲದಿದ್ದರೆ ನ್ಯಾಯಾಲಯದ ಮೆಟ್ಟಿಲೇರಬೇಕಾಗುತ್ತದೆ ಎಂದು ಕಲಕೇರಿ-ವಿರುಪಾಪುರ ಮುದುಕೇಶ್ವರ ಮಠದ ವಂಶಸ್ಥ ಹಾಲಯ್ಯ ಹಿರೇಮಠ ಎಚ್ಚರಿಸಿದರು.ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಒಂದು ಮಠ, ಪೀಠಕ್ಕೆ ಉತ್ತರಾಧಿಕಾರಿ ನೇಮಕ ಮಾಡಬೇಕಾದರೆ ಆ ಊರಿನ ಗುರು-ಹಿರಿಯರು ಅಥವಾ ಆ ಮಠವು ವಂಶಪರಂಪರೆಯ ಮಠವಾಗಿದ್ದರೆ ಆ‌ ಮಠಕ್ಕೆ‌ ಸಂಬಂಧಪಟ್ಟ ವಂಶಸ್ಥರಿಗೆ ತಿಳಿಸಿ ಎಲ್ಲರ ಸಮ್ಮುಖದಲ್ಲಿ ಪರಸ್ಪರವಾಗಿ ಚರ್ಚಿಸಿ ನೇಮಕ ಮಾಡಬೇಕು. ಆದರೆ ಮುದುಕೇಶ್ವರ ಶಿವಾಚಾರ್ಯ ಸ್ವಾಮೀಜಿ ಯಾರಿಗೂ ತಿಳಿಸದೇ ತರಾತುರಿಯಲ್ಲಿ ತಮ್ಮ ತಮ್ಮನ ಮಗನನ್ನು ಶ್ರೀಮಠದ ಉತ್ತರಾಧಿಕಾರಿ ಎಂದು ನೇಮಿಸಿ ಪಟ್ಟಾಧಿಕಾರ ಮಾಡಲು ಮುಂದಾಗಿರುವುದಕ್ಕೆ ವಿರೋಧವಿದೆ ಎಂದರು.ಮುದುಕೇಶ್ವರ ಶಿವಾಚಾರ್ಯ ಸ್ವಾಮೀಜಿ ಅವರಿಗೆ ಪಟ್ಟಾಧಿಕಾರ ಮಾಡುವ ಸಂದರ್ಭದಲ್ಲಿ ಪೂಜ್ಯರು, ಶ್ರೀಮಠದ ವಂಶಸ್ಥರು ಹಾಗೂ ಶ್ರೀಮಠದ ಸದ್ಭಕ್ತರ ಸಮ್ಮುಖದಲ್ಲಿ ಅಣ್ಣ- ತಮ್ಮಂದಿರಲ್ಲಿ ಒಮ್ಮೆ ಒಂದು ಕುಟುಂಬದಿಂದ, ಇನ್ನೊಮ್ಮೆ ಮತ್ತೊಂದು ಕುಟುಂಬದವರಿಂದ ಉತ್ತರಾಧಿಕಾರದ ಪಟ್ಟಾಧಿಕಾರ ಮಾಡುವ ಬಗ್ಗೆ ಮೌಖಿಕವಾಗಿ ನಿರ್ಧರಿಸಲಾಗಿತ್ತು. ಈ ಬಗ್ಗೆ ಪ್ರಸ್ತುತ ಸ್ವಾಮೀಜಿ ಸಮ್ಮತಿ ವ್ಯಕ್ತಪಡಿಸಿದ್ದರು. ಅಲ್ಲದೇ ಈ ಕುರಿತು ತಾವೇ ಖುದ್ದಾಗಿ ಈಗಿನ ಸ್ವಾಮೀಜಿಯವರೊಂದಿಗೆ ಪ್ರಸ್ತಾಪಿಸಿದಾಗ ನನ್ನ ಮಾತಿಗೆ ಒಪ್ಪಿಗೆ ಸೂಚಿಸಿದ್ದರು.ಆದರೆ ಕಳೆದ ಡಿ‌. 8ರಂದು ಶ್ರೀಗಳು ಶ್ರೀಮಠದಲ್ಲಿ ಸಭೆ ಕರೆದು ಚರ್ಚಿಸುವ ಬದಲು ಖಾಸಗಿ ಜಾಗದಲ್ಲಿ ಸಭೆ ಕರೆದು ಏಕಾಏಕಿ ತಮ್ಮ ಸಹೋದರನ ಮಗನನ್ನು ಉತ್ತರಾಧಿಕಾರಿ ಎಂದು ನೇಮಕ‌ ಮಾಡಿ ಪಟ್ಟಾಧಿಕಾರಕ್ಕೆ ಮುಂದಾಗಿರುವುದು ಸರಿಯಲ್ಲ. ಶ್ರೀಮಠದ ಉತ್ತರಾಧಿಕಾರಿ ಪಟ್ಟಾಧಿಕಾರಕ್ಕೆ ಈ ಬಾರಿ ನಮ್ಮ ಕುಟುಂಬಸ್ಥರಿಗೆ ಅವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.ಸುದ್ದಿಗೋಷ್ಠಿಯಲ್ಲಿ ಶ್ರೀಮಠದ ಸ್ವಾಮಿಗಳ ವಂಶಸ್ಥರಾದ ಅಶೋಕ ಹಿರೇಮಠ, ಮುದಕಯ್ಯ ಹಿರೇಮಠ, ಗಂಗಾಧರಯ್ಯ ಹಿರೇಮಠ, ಚಂದ್ರಶೇಖರಯ್ಯ ಹಿರೇಮಠ, ಮುದುಕಯ್ಯ ಶಿ. ಹಿರೇಮಠ, ಮಲ್ಲಿಕಾರ್ಜುನಯ್ಯ ಹಿರೇಮಠ, ಭಕ್ತರಾದ ವೀರಯ್ಯ ಕಣವಿಮಠ, ರಾಮಣ್ಣ ಹುಳಕಣ್ಣವರ, ಚನ್ನವೀರಯ್ಯ ಸಾಲಿಮಠ, ವಿ.ಕೆ. ಯಲಿಗಾರಮಠ, ರುದ್ರಗೌಡ ಪಾಟೀಲ, ಹನುಮಂತ ಮೇಟಿ, ಶೇಖರಯ್ಯ ಹೆಸರೂರಮಠ, ಮಂಜಯ್ಯ ಹಿರೇಮಠ, ಧರಣಯ್ಯ ಸಂಕಿನಮಠ, ಈರಯ್ಯ ತಿಪಸನಾಳ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಯುವ ಪೀಳಿಗೆ ಪೋಷಕಾಂಶಗಳ ಕೊರತೆ
ಪುಟ 2ಕ್ಕೆ ಬಾಟಮ್....ಗುರುವಂದನಾ, ಸ್ನೇಹ ಸಮ್ಮಿಲನ ಕಾರ್ಯಕ್ರಮ