ಹುಣಸಘಟ್ಟದಲ್ಲಿ ತರೀಕೆರೆ ತಾಲೂಕು ಬಂಜಾರ ಸಂಘದ ಕಾರ್ಯಕ್ರಮ
ಇತ್ತೀಚಿನ ದಿನಗಳಲ್ಲಿ ಮೂಲ ಬಂಜಾರ ಸಮುದಾಯದವರು ವಾಸ ಮಾಡುವ ಅಕ್ಕಪಕ್ಕದಲ್ಲಿ ವಾಸ ಮಾಡುತ್ತಿರುವ ಧಾಡಿ ಬಂಜಾರರಲ್ಲಿ ಕೆಲವರು ಮುಸ್ಲಿಂ ಸಮುದಾಯಕ್ಕೆ ಸೇರಿಕೊಂಡು ಮುಸ್ಲಿ ಸಮುದಾಯದ ಆಚರಣೆ ಮಾಡುತ್ತಿರುವುದಕ್ಕೆ ರಾಜ್ಯ ಧಾಡಿ ಬಂಜಾರ ಸಂಘದ ಅಧ್ಯಕ್ಷ ಶಂಕರನಾಯ್ಕ ವಿರೋಧ ವ್ಯಕ್ತಪಡಿಸಿದ್ದಾರೆ.ತಾಲೂಕಿನ ಹುಣಸಘಟ್ಟ ಗ್ರಾಮದಲ್ಲಿ ರಾಜ್ಯ ಧಾಡಿ ಬಂಜಾರ ಸಂಘ ಮತ್ತು ತರೀಕೆರೆ ತಾಲೂಕು ಬಂಜಾರ ಸಂಘದ ದಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು. ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಪಡೆದು ಸರಕಾರದಲ್ಲಿ ಲಭ್ಯವಿರುವ ಸೌಲಭ್ಯ ಪಡೆದುಕೊಂಡು ಮುಸ್ಲಿಂ ಸಮುದಾಯಕ್ಕೆ ಮತಾಂತರಗೊಳ್ಳುತ್ತಿರುವುದು ನಾಚಿಕೆಗೇಡು. ಮುಂದಿನ ದಿನಗಳಲ್ಲಿ ಈ ಬಗ್ಗೆ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದರು.
ಧಾಡಿ ಬಂಜಾರ ಸಂಘದ ರಾಜ್ಯ ಉಪಾಧ್ಯಕ್ಷ ಭೀಮಾನಾಯ್ಕ, ಪ್ರಧಾನ ಕಾರ್ಯದರ್ಶಿ ಭಾಸ್ಕರ್‌ನಾಯ್ಕ, ಪ್ರಾಂಶುಪಾಲ ಪಿರ‍್ಯಾನಾಯ್ಕ ಮತ್ತಿತರರು ಹಾಜರಿದ್ದರು. ಸಂಘದ ಇತರೆ ಮುಖಂಡರು ಮತ್ತಿತರರು ಇದ್ದರು.28ಕೆಟಿಆರ್.ಕೆ.8
ತಾಲೂಕಿನ ಹುಣಸಘಟ್ಟ ಗ್ರಾಮದಲ್ಲಿ ರಾಜ್ಯ ಧಾಡಿ ಬಂಜಾರ ಸಂಘ ಮತ್ತು ತರೀಕೆರೆ ತಾಲೂಕು ಬಂಜಾರ ಸಂಘದಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರಾಜ್ಯ ಧಾಡಿ ಬಂಜಾರ ಸಂಘ ಅಧ್ಯಕ್ಷ ಶಂಕರನಾಯ್ಕಮಾತನಾಡಿದರು.