ಶಿಗ್ಗಾವಿ: ಮಹಾತ್ಮ ಗಾಂಧೀಜಿಯವರ ಕನಸಿನಂತೆ, ರೈತರ ಮತ್ತು ಗ್ರಾಮೀಣ ಜನಗಳ ಬದುಕು ಬದಲಾದಾಗ ಮಾತ್ರ, ಭಾರತದ ಅಭಿವೃದ್ಧಿ ಸಾಧ್ಯ. ರೈತರು ತಾವು ಬೆಳೆದ ಬೆಳೆಗಳನ್ನು ನೇರವಾಗಿ ಗ್ರಾಹಕರಿಗೆ ತಲುಪಿಸಿದಾಗ ಮಾತ್ರ ಸೂಕ್ತ ಬೆಲೆ ದೊರೆಯುತ್ತದೆ ಎಂದು ಭಾರತ್ ಸೇವಾ ಸಂಸ್ಥೆಯ ಅಧ್ಯಕ್ಷ ಶ್ರೀಕಾಂತ್ ದುಂಡಿಗೌಡ್ರು ಹೇಳಿದರು.
ಕಾರ್ಯಕ್ರಮದ ಮತ್ತೊಬ್ಬ ಅತಿಥಿಯಾದ ವೀರಭದ್ರೇಶ್ವರ ವಿದ್ಯಾ ಸಂಸ್ಥೆಯ ಅಧ್ಯಕ್ಷ ಶಂಕರಗೌಡ ಪೊಲೀಸ್ ಗೌಡ್ರು ಮಾತನಾಡುತ್ತಾ, ಊರಿನಲ್ಲಿ ಸಂತೆಗಳನ್ನು ನಡೆಸುವುದರಿಂದ ಆರ್ಥಿಕ ಚಟುವಟಿಕೆಗಳು ಗರಿಗೆದರಿ, ಹಳ್ಳಿಗಳು ಕೂಡ ಅಭಿವೃದ್ಧಿ ಹೊಂದಲು ಸಾಧ್ಯ, ಈ ನಿಟ್ಟಿನಲ್ಲಿ ನಮ್ಮೂರಿನ ಯುವಕರ ಕಾರ್ಯ ಶ್ಲಾಘ ಗನೀಯವಾದದ್ದು, ಬನ್ನೂರಿನ ಸಮಸ್ತ ನಾಗರಿಕರು ಇದರ ಸದುಪಯೋಗ ಪಡೆದುಕೊಂಡು, ಸಂತೆಯು ಯಶಸ್ವಿಯಾಗಬೇಕಾದರೆ ನಿಮ್ಮೆಲ್ಲರ ಸಹಕಾರವು ಅಗತ್ಯವೆಂದು ಹೇಳಿದರು.
ವಾರದ ಸಂತೆ ಉದ್ಘಾಟನಾ ಕಾರ್ಯಕ್ರಮವನ್ನು ರೈತ ಗೀತೆ ಹಾಡುವುದರೊಂದಿಗೆ ಚಾಲನೆಯನ್ನು ನೀಡಿದರು. ಸಾನಿಧ್ಯವನ್ನು ಗ್ರಾಮದ ಹಿರೇಮಠದ ಶಿವಾನಂದಸ್ವಾಮಿ ಹಿರೇಮಠ್ ವಹಿಸಿದ್ದರು. ಗ್ರಾಮ ಪಂಚಾಯತಿ ಅಧ್ಯಕ್ಷೆ ಗಿರಿಜವ್ವ ದೊಡ್ಡಮನಿ, ಉಪಾಧ್ಯಕ್ಷ ನಿಂಗಪ್ಪ ದುಂಡಪ್ಪನವರ ಹಾಗೂ ಪಂಚಾಯತಿ ವ್ಯಾಪ್ತಿಯಲ್ಲಿಯ ಬನ್ನಿಕೊಪ್ಪ, ಕೆಂಗಾಪುರ ಹಾಗೂ ಮುಗುಳಿ ಗ್ರಾಮದ ಪಂಚಾಯಿತಿಯ ಸರ್ವ ಸದಸ್ಯರು, ಪ್ರಮುಖರಾದ, ಟಿ.ವಿ. ಪಾಟೀಲ್, ಕೆ.ಸಿ. ಸಿದ್ದಣ್ಣವರ, ಬಸಲಿಂಗಪ್ಪ ನರಗುಂದ, ದೇವಪ್ಪ ಬಡಿಗೇರ, ಮಹದೇವಪ್ಪ ಸಿದ್ದಣ್ಣವರ, ಸಿದ್ದನಗೌಡ ಪೊಲೀಸ್ ಗೌಡ್ರು, ವೀರಭದ್ರಗೌಡ ಪೊಲೀಸ್ ಗೌಡ್ರು, ವೀರನಗೌಡ ಹುಡೆ ದಗೌಡ್ರ ಇದ್ದರು.ಕಾರ್ಯಕ್ರಮವನ್ನು ವೀರನಗೌಡ ಹೊನ್ನಗೌಡ್ರು ಸ್ವಾಗತಿಸಿದರು. ವೀರಭದ್ರಪ್ಪ ಅಗಡಿ ನಿರೂಪಿಸಿದರು. ಬಸವರಾಜ್ ಮಾಯಣ್ಣವರ್ ವಂದಿಸಿದರು.