ಬೀದರ್: ಇದೇ ತಿಂಗಳ18 ಹಾಗೂ 19ರಂದು ಎರಡು ದಿನಗಳ ಕಾಲ ವಿಶ್ವ ವಿಖ್ಯಾತ ವಾಗ್ಮಿಗಳಾದ ಅಮೋಘ ಲೀ ಅವರು ನಗರದ ಹೊರವಲಯದಲ್ಲಿರುವ ಜಗನ್ನಾಥ ಮಂದಿರದಲ್ಲಿ ಎರಡು ದಿನಗಳ ಕಾಲ ಕಾರ್ಯಕ್ರಮ ನೀಡಲಿದ್ದಾರೆ ಎಂದು ವಿಶ್ವ ಹಿಂದು ಪರಿಷತ್ ಕರ್ನಾಟಕ ಉತ್ತರ ಪ್ರಾಂತದ ಕಾರ್ಯಕಾರಿಣಿ ಸದಸ್ಯರಾದ ರಾಮಕೃಷ್ಣನ್ ಸಾಳೆ ತಿಳಿಸಿದರು.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 18ರಂದು ಮಧ್ಯಾಹ್ನ 12 ಗಂಟೆಗೆ ನಗರದ ಹೈದ್ರಾಬಾದ್ ರಸ್ತೆಯಲ್ಲಿರುವ ಶಹಾಪುರ ಗೇಟ್‌ನಲ್ಲಿ ಅವರನ್ನು ಜಗನ್ನಾಥ ಮಂದಿರ ಟ್ರಸ್ಟ್‌ನಿಂದ ಭವ್ಯವಾಗಿ ಸನ್ಮಾನಿಸಿ, ಬೈಕ್ ರ್‍ಯಾಲಿ ಮೂಲಕ ಅವರನ್ನು ನಗರದ ಮಧ್ಯಾಹ್ನ 12.30ಗಂಟೆಗೆ ಜಗನ್ನಾಥ ಮಂದಿರಕ್ಕೆ ಕರೆ ತರಲಾಗುತ್ತದೆ ಎಂದರು.ಸಾಯಂಕಾಲ 6.30 ಗಂಟೆಗೆ ಕಥಾ ಕೀರ್ತನ, ನಂತರ ಆರತಿ, ತದನಂತರ ರಾತ್ರಿ 8 ಗಂಟೆಗೆ ಮಹಾಪ್ರಸಾದ ವಿತರಿಸಲಾಗುವುದು. 19ರಂದು ಬೆಳಿಗ್ಗೆ 5 ಗಂಟೆಗೆ ಮಂಗಲ ಆರತಿ, ಬೆಳಿಗ್ಗೆ 5.30 ಗಂಟೆಯಿಂದ 7.30 ಗಂಟೆ ವರೆಗೆ ಜಪಯಜ್ಞ, ಬೆಳಿಗ್ಗೆ 8.30 ಗಂಟೆಯಿಂದ 9.30 ಗಂಟೆ ವರೆಗೆ ಭಗವತಮ ಕ್ಲಾಸ್, ಸಾಯಂಕಾಲ 6 ಗಂಟೆಯಿಂದ ರಾತ್ರಿ 8.30 ಗಂಟೆ ವರೆಗೆ ಕಥಾ ಕೀರ್ತನ, ನಂತರ ಆರತಿ, ತದನಂತರ ಮಹಾ ಪ್ರಸಾದ ವಿತರಿಸಲಾಗುವುದೆಂದು ಹೇಳಿದರು.
ಜಿಲ್ಲೆಯ ಸನಾತನ ಪರಂಪರೆಯುಳ್ಳ ಸಮುದಾಯದವರು, ಹರಿಭಕ್ತರು, ಶ್ರೀಕೃಷ್ಣನ ಅನುಯಾಯಿಗಳು, ಜಗನ್ನಾಥ ಮಂದಿರದ ಸಮಸ್ತ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಎರಡು ದಿವಸದ ಕಾರ್ಯಕ್ರಮದ ಲಾಭ ಪಡೆದುಕೊಳ್ಳಬೇಕೆಂದು ಕಿವಿಮಾತು ಹೇಳಿದರು.ಜಗನ್ನಾಥ ಮಂದಿರದ ಟ್ರಸ್ಟಿಗಳಾದ ರಾಜಕುಮಾರ ಅಳ್ಳೆ, ಡಾ.ನಿಲೇಶ ದೆಶಮುಖ, ಡಾ.ಯಲ್ಲಾಲಿಂಗ, ಅಭಿಷೇಕ ಆನಂದೆ, ಸಿದ್ರಾಮೇಶ್ವರ ಪತ್ರಿಕಾಗೋಷ್ಟಿಯಲ್ಲಿದ್ದರು.