ಅಂಗಾಂಗ ಕಸಿಗೆ ಒಳಗಾದವರಿಂದ ಕ್ರೀಡಾಂಗಣದಲ್ಲಿ ಐಪಿಎಲ್‌ ವೀಕ್ಷಣೆ

KannadaprabhaNewsNetwork |  
Published : May 05, 2024, 02:04 AM IST
Fans 1 | Kannada Prabha

ಸಾರಾಂಶ

ಮಣಿಪಾಲ್‌ ಆಸ್ಪತ್ರೆಯು ವಿವಿಧ ಅಂಗಾಂಗ ಕಸಿಗೆ ಒಳಗಾದ 20 ಮಂದಿಗೆ ಶನಿವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ಹಾಗೂ ಗುಜರಾತ್‌ ಟೈಟಾನ್‌ ನಡುವಿನ ಐಪಿಎಲ್‌ ಪಂದ್ಯಾವಳಿ ವೀಕ್ಷಿಸಲು ವಿಶೇಷ ಅವಕಾಶ ಕಲ್ಪಿಸುವ ಮೂಲಕ ಉಲ್ಲಾಸ ಹಾಗೂ ಭರವಸೆಯ ಅನುಭವ ನೀಡುವ ಪ್ರಯತ್ನ ಮಾಡಿದೆ.

ಕನ್ನಡಪ್ರಭ ವಾರ್ತೆ, ಬೆಂಗಳೂರು

ಮಣಿಪಾಲ್‌ ಆಸ್ಪತ್ರೆಯು ವಿವಿಧ ಅಂಗಾಂಗ ಕಸಿಗೆ ಒಳಗಾದ 20 ಮಂದಿಗೆ ಶನಿವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ಹಾಗೂ ಗುಜರಾತ್‌ ಟೈಟಾನ್‌ ನಡುವಿನ ಐಪಿಎಲ್‌ ಪಂದ್ಯಾವಳಿ ವೀಕ್ಷಿಸಲು ವಿಶೇಷ ಅವಕಾಶ ಕಲ್ಪಿಸುವ ಮೂಲಕ ಉಲ್ಲಾಸ ಹಾಗೂ ಭರವಸೆಯ ಅನುಭವ ನೀಡುವ ಪ್ರಯತ್ನ ಮಾಡಿದೆ.

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ತಂಡದ ಅಧಿಕೃತ ಆರೋಗ್ಯ ಪಾಲುದಾರ ಮಣಿಪಾಲ್‌ ಆಸ್ಪತ್ರೆಯು ಕಿಡ್ನಿ, ಲಿವರ್‌ ಹಾಗೂ ಹೃದಯ ಕಸಿಗೆ ಒಳಗಾಗಿ ಬದುಕುಳಿದವರು ಹಾಗೂ ಅವರ ಕುಟುಂಬ ಸದಸ್ಯರಿಗೆ ಉಲ್ಲಾಸದ ಅನುಭವ ನೀಡಲು ಈ ಪ್ರಯತ್ನ ಮಾಡಿದೆ ಎಂದು ಆಸ್ಪತ್ರೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕಾರ್ತಿಕ್‌ ರಾಜಗೋಪಾಲ್‌ ತಿಳಿಸಿದ್ದಾರೆ.

ಕಸಿಗೆ ಒಳಗಾದವರ ಸುರಕ್ಷತೆಗಾಗಿ ಬಿಸಿಸಿಐ ಮಾರ್ಗಸೂಚಿಗೆ ತಕ್ಕಂತೆ ಆರೋಗ್ಯ ತಪಾಸಣೆ ನಡೆಸಿದ ಬಳಿಕವೇ ಪಂದ್ಯ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ. ಅಗತ್ಯ ಔಷಧ, ಸುರಕ್ಷತೆಗಾಗಿ ಪ್ರತ್ಯೇಕ ಸ್ವಯಂ ಸೇವಕರ ನೇಮಕದ ಜತೆಗೆ ಜನಸಂದಣಿ ಕಡಿಮೆ ಇರುವ ಪ್ರದೇಶದಲ್ಲಿ ಅವರಿಗೆ ಆಸನ ವ್ಯವಸ್ಥೆ ಕಲ್ಪಿಸಲಾಗಿತ್ತು. ತನ್ಮೂಲಕ ನೆಚ್ಚಿನ ಕ್ರಿಕೆಟ್‌ ಆಟಗಾರರನ್ನು ಹತ್ತಿರದಿಂದ ನೋಡಲು ಮತ್ತು ನೇರವಾಗಿ ಪಂದ್ಯದ ಆಹ್ಲಾದಕರ ಅನುಭವ ಪಡೆಯಲು ಅವಕಾಶ ಕಲ್ಪಿಸಲಾಯಿತು ಎಂದು ಆಸ್ಪತ್ರೆಯು ಪ್ರಕಟಣೆಯಲ್ಲಿ ತಿಳಿಸಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಿಜಯನಗರ ಪಾಲಿಕೆ ಬಜಾರ್‌ ಮಳಿಗೆಗಳ ಇ-ಹರಾಜು ಮೂಲಕ ವಿತರಿಸಿ: ಮಹೇಶ್ವರ್ ರಾವ್ ಸೂಚನೆ
ರಸ್ತೆ ಅಪಘಾತ ಸೈಕಲ್‌ ಸವಾರ ಸಾವು