- ಹಳ್ಳಿಗಳಲ್ಲಿ ಯುವಜನರ ದಂಡು । ಆರತಿ ಬೆಳಗಿ ಮಹಿಳೆಯರಿಂದ ಸ್ವಾಗತ- - - ಕನ್ನಡಪ್ರಭ ವಾರ್ತೆ ಹೊನ್ನಾಳಿ
ವಿನಯಕುಮಾರ್ ಆಗಮಿಸುತ್ತಿದ್ದಂತೆ ಪಟಾಕಿ ಸಿಡಿಸಿ ಸಂಭ್ರಮಿಸಿದರು. ಹೂವಿನ ಹಾರಗಳ ಹಾಕಿ ಬರಮಾಡಿಕೊಂಡರು. ವಿನಯ್ ಪರ ಜೈಕಾರಗಳು ಮುಗಿಲು ಮುಟ್ಟಿದವು. ಮಹಿಳೆಯರು ಆರತಿ ಬೆಳಗಿ ಸ್ವಾಗತ ಕೋರಿದರು.
ಹೊನ್ನಾಳಿ- ನ್ಯಾಮತಿ ತಾಲೂಕಿನ ಸುರಹೊನ್ನೆ ಗ್ರಾಮದಲ್ಲಿ ನೂರಾರು ಯುವಕರು ಬಿಸಿಲಿನ ಝಳದ ನಡುವೆಯೂ ರೋಡ್ ಶೋನಲ್ಲಿ ಪಾಲ್ಗೊಂಡು ಬೆಂಬಲ ಸೂಚಿಸಿದರು. ಮಹಿಳೆಯರು, ಹಿರಿಯರು ಸೇರಿದಂತೆ ಎಲ್ಲ ವರ್ಗದವರೂ ವಿನಯ್ ಕುಮಾರ್ ಸ್ವಾಭಿಮಾನ ಹೋರಾಟಕ್ಕೆ ಬೆಂಬಲ ಇದೆ ಎಂದು ಹೇಳಿದರೆ, ಮಾಜಿ ಸೈನಿಕರು ಬಹಿರಂಗವಾಗಿಯೇ ಬೆಂಬಲ ವ್ಯಕ್ತಪಡಿಸಿದರು.ಪ್ರಚಾರದಲ್ಲಿ ಮಾಜಿ ಸೈನಿಕ ಉಮೇಶ್, ಭೋವಿ ಸಮಾಜ ಅಧ್ಯಕ್ಷ ನಾಗರಾಜಪ್ಪ, ಮಾದನಬಾವಿ ಕರಿಬಸಪ್ಪ, ಚನ್ನೇಶ್, ದೊಡ್ಡೆತ್ತಿನಹಳ್ಳಿ ಕರಿಬಸಪ್ಪ, ತಗ್ಗಿನಹಳ್ಳಿ ನಾಗೇಶ, ಗಣೇಶ, ಹಿರೇಗೊಣಿಗೆರೆ ಗ್ರಾಮದ ಹನುಮಂತು, ಹುಲುಗೇಶ್ ಮತ್ತಿತರರು ಹಾಜರಿದ್ದರು.
ದಾಗಿನಕಟ್ಟೆಯಲ್ಲಿ ಬೆಂಬಲ ಘೋಷಣೆ:ದಾಗಿನಕಟ್ಟೆಯಲ್ಲಿಯೂ ವಿನಯ್ ಮತಯಾಚಿಸಿದರು. ಹೊನ್ನಾಳಿ ತಾಲೂಕಿನಲ್ಲಿ ಜ್ವಲಂತ ಸಮಸ್ಯೆಗಳಿವೆ. ಇದುವರೆಗೆ ಅಧಿಕಾರ ನಡೆಸಿದವರು ಕ್ಷೇತ್ರ ಅಭಿವೃದ್ಧಿ ಮಾಡಿಲ್ಲ. 20 ವರ್ಷ ಸಂಸದರಾದರೂ ಡಾ. ಜಿ.ಎಂ. ಸಿದ್ದೇಶ್ವರ ನಮ್ಮ ಗ್ರಾಮದ ಸಮಸ್ಯೆಗಳ ಪರಿಹಾರಕ್ಕೆ ಯತ್ನಿಸಿಲ್ಲ. ಶಾಮನೂರು ಶಿವಶಂಕರಪ್ಪರ ಕುಟುಂಬದವರು ಇತ್ತ ತಲೆಯೇ ಹಾಕಿಲ್ಲ. ಇಂಥವರಿಗೆ ಮತ ಹಾಕುವ ಬದಲು ನಮ್ಮೂರಿಗೆ ಬಂದಿರುವ ಸ್ವಾಭಿಮಾನಿ ವಿನಯ್ ಅವರಿಗೆ ಮತ ಹಾಕುತ್ತೇವೆ ಎಂದು ಗ್ರಾಮಸ್ಥರು ಬಹಿರಂಗವಾಗಿಯೇ ಘೋಷಿಸಿದರು.
ವಿನಯಕುಮಾರ್ ಮಾತನಾಡಿ, ಜಿಲ್ಲೆಯಲ್ಲಿ ಎರಡು ಕುಟುಂಬದವರಿಗೆ ಮಾತ್ರ ಅಧಿಕಾರ ಸಿಕ್ಕಿದೆ. ಈ ಬಾರಿ ಸ್ವಾಭಿಮಾನಿಯಾಗಿ, ನಿಮ್ಮೆಲ್ಲರ ಪ್ರತಿನಿಧಿಯಾಗಿ ಸ್ಪರ್ಧಿಸಿದ್ದೇನೆ. ಅಭಿವೃದ್ಧಿಗಾಗಿ, ಕುಟುಂಬ ರಾಜಕಾರಣಕ್ಕೆ ಅಂತ್ಯ ಹಾಡಲು ನನಗೆ ಗೆಲ್ಲಿಸಬೆಕು. ನನ್ನ ಗುರುತು ಗ್ಯಾಸ್ ಸಿಲಿಂಡರ್ ಚಿಹ್ನೆ, ಕ್ರಮ ಸಂಖ್ಯೆ 28. ನೀವೂ ಮತ ಹಾಕಿ. ಈ ಭಾಗದ ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯುವ ಕೆಲಸ ಮಾಡುವ ಜೊತೆಗೆ ಪರಿಹರಿಸಲು ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದು ಭರವಸೆ ನೀಡಿದರು.ದಾಗಿನಕಟ್ಟೆ ಗ್ರಾಮದ ಸಂಗಾಹಳ್ಳಿ ಕರಿಬಸಪ್ಪ, ಯಲ್ಲೋದಹಳ್ಳಿ ಕೆ.ಎಸ್. ರಾಜಪ್ಪ, ಸಂಗಾಹಳ್ಳಿ ರಾಮಚಂದ್ರಪ್ಪ, ಪರಮೇಶ, ಸತೀಶ, ಹನುಮಂತ, ರಾಜೇಶ, ಸುರೇಶ ಮತ್ತಿತರರು ಉಪಸ್ಥಿತರಿದ್ದರು.
- - - -4ಎಚ್.ಎಲ್.ಐ2:ಹೊನ್ನಾಳಿ- ನ್ಯಾಮತಿ ಅವಳಿ ತಾಲೂಕಿನ ವ್ಯಾಪ್ತಿ ಹಲವಾರು ಗ್ರಾಮಗಳಲ್ಲಿ ದಾವಣಗೆರೆ ಲೋಕಸಭಾ ಚುನಾವಣೆ ಪಕ್ಷೇತರ ಅಭ್ಯರ್ಥಿ ಬಿ.ಜಿ.ವಿನಯಕುಮಾರ್ ಮತಯಾಚನೆ ನಡೆಸಿದರು.