ಬದಲಾದ ಜೀವನಶೈಲಿ ಮಾನವ ದೇಹದ ಮೇಲೆ ಪ್ರತಿಕೂಲ ಪರಿಣಾಮ ಉಂಟು ಮಾಡಲಿವೆ ಎಂಬವುದಕ್ಕೆ ಸಾಕ್ಷಿ ಇತ್ತೀಚಿನದಲ್ಲಿ ಜನರು ಆಸ್ಪತ್ರೆಗೆ ಅಲೆಯುತ್ತಾ ಹಣ ವ್ಯಯ ಮಾಡುತ್ತಿದ್ದಾರೆ. ರಾಗಿ ಉತ್ತಮ ಆಹಾರ, ಆದರೆ ರಾಗಿ ಬೆಳೆ ದಿನಕಳೆದಂತೆ ಇಳಿಮುಖವಾಗುತ್ತಿದೆ. ಬಿಳಿ ಅಕ್ಕಿ ಆರೋಗ್ಯಕ್ಕೆ ಹಾನಿ ಎಂದು ತಿಳಿದರೂ ಜನರು ಮಾತ್ರ ಬಾಯಿರುಚಿಗೆ ಮಾರು ಹೋಗುತ್ತಿದ್ದಾರೆ. ಕೃಷಿಕರು ಮಣ್ಣಿನ ಜೀವಸತ್ವ ಉಳಿಸಲು ಸಾವಯವ ಕೃಷಿ ಕಡೆ ಹೆಚ್ಚಿನ ಗಮನ ನೀಡಬೇಕು ಎಂದು ಹಾಸನ ಆಕಾಶವಾಣಿ ಮುಖ್ಯಸ್ಥ ಡಾ.ವಿಜಯ ಅಂಗಡಿ ಹೇಳಿದರು.
ಕನ್ನಡಪ್ರಭ ವಾರ್ತೆ ಬೇಲೂರು
ಕೃಷಿಕರು ಮಣ್ಣಿನ ಜೀವಸತ್ವ ಉಳಿಸಲು ಸಾವಯವ ಕೃಷಿ ಕಡೆ ಹೆಚ್ಚಿನ ಗಮನ ನೀಡಬೇಕು ಎಂದು ಹಾಸನ ಆಕಾಶವಾಣಿ ಮುಖ್ಯಸ್ಥ ಡಾ.ವಿಜಯ ಅಂಗಡಿ ಹೇಳಿದರು.ತಾಲೂಕಿನ ಹೆಬ್ಬಾಳು ಗ್ರಾಮದ ಉದ್ಯಮಿ ಸುಧಾಕರ್ ತೋಟದ ಮನೆ ಆವರಣದಲ್ಲಿ ಹಮ್ಮಿಕೊಂಡಿದ್ದ ಕೃಷಿ ಸಮಾರಂಭದಲ್ಲಿ ಪ್ರಗತಿಪರ ಗಣ್ಯರಿಗೆ ಸನ್ಮಾನಿಸಿ ಮಾತನಾಡಿದ ಅವರು, ಇತ್ತೀಚಿನ ದಿನದಲ್ಲಿ ಬಹುತೇಕ ರೈತಾಪಿ ವರ್ಗ ರಸಾಯನಿಕ ಕೃಷಿಗೆ ಹೆಚ್ಚಿನ ಉತ್ತೇಜನ ನೀಡುತ್ತಾ ಬಂದಿದ್ದಾರೆ. ಇದ್ದರಿಂದ ಮಣ್ಣಿನ ಜೀವಕಣದ ಮೇಲೆ ಕೆಟ್ಟ ಪರಿಣಾಮ ಹಾಗೂ ಜೊತೆಗೆ ಮಾನವ ಆರೋಗ್ಯದ ಮೇಲೆ ಮಾರಕ ಉಂಟಾಗುತ್ತಿದೆ. ಆದ್ದರಿಂದ ಕೃಷಿಕರು ಮಣ್ಣಿನ ಜೀವಸತ್ವ ಉಳಿಸಲು ಸಾವಯವ ಕೃಷಿ ಕಡೆ ಹೆಚ್ಚಿನ ಗಮನ ನೀಡಬೇಕಾಗಿದೆ ಎಂದರು.ಬದಲಾದ ಜೀವನಶೈಲಿ ಮಾನವ ದೇಹದ ಮೇಲೆ ಪ್ರತಿಕೂಲ ಪರಿಣಾಮ ಉಂಟು ಮಾಡಲಿವೆ ಎಂಬವುದಕ್ಕೆ ಸಾಕ್ಷಿ ಇತ್ತೀಚಿನದಲ್ಲಿ ಜನರು ಆಸ್ಪತ್ರೆಗೆ ಅಲೆಯುತ್ತಾ ಹಣ ವ್ಯಯ ಮಾಡುತ್ತಿದ್ದಾರೆ. ರಾಗಿ ಉತ್ತಮ ಆಹಾರ, ಆದರೆ ರಾಗಿ ಬೆಳೆ ದಿನಕಳೆದಂತೆ ಇಳಿಮುಖವಾಗುತ್ತಿದೆ. ಬಿಳಿ ಅಕ್ಕಿ ಆರೋಗ್ಯಕ್ಕೆ ಹಾನಿ ಎಂದು ತಿಳಿದರೂ ಜನರು ಮಾತ್ರ ಬಾಯಿರುಚಿಗೆ ಮಾರು ಹೋಗುತ್ತಿದ್ದಾರೆ. ಹೆಬ್ಬಾಳು ಸುಧಾಕರ್ ವ್ಯಾಸಂಗದ ಬಳಿಕ ಬೆಂಗಳೂರಿನಲ್ಲಿ ಗ್ಯಾರೇಜ್ ಒಂದರಲ್ಲಿ ಕೆಲಸ ಮಾಡಿದ ಹುಡುಗ ಶ್ರದ್ಧೆಯಿಂದ ಇಂದು ಮಾರುತಿ ಶೋರಂ ಸ್ಥಾಪಿಸಿ ಸಾವಿರ ಜನರಿಗೆ ಉದ್ಯೋಗ ನೀಡಿದ್ದಾರೆ. ಅವರು ಉದ್ಯಮಿಯ ಜೊತೆಗೆ ತಮ್ಮ ಪೋಷಕರು ಉಳಿಸಿಕೊಂಡು ಬಂದ ಕೃಷಿಭೂಮಿಗೆ ಪುಷ್ಠಿ ನೀಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತಾ ಇಂದು ತೋಟದ ಮನೆಯಲ್ಲಿಯೇ ಕೃಷಿ ಕಾರ್ಯಕ್ರಮ ಏರ್ಪಡಿಸಿ ಹತ್ತಾರು ಪ್ರಗತಿ ಪರ ಕೃಷಿಕರನ್ನು ಸನ್ಮಾನಿಸಿದ್ದಾರೆ ಎಂದರು.
ಬೇಲೂರು ತಾಲೂಕು ಜೆಡಿಎಸ್ ಅಧ್ಯಕ್ಷ ತೊ.ಚ.ಅನಂತಸುಬ್ಬರಾಯ ಮಾತನಾಡಿ, ಹೆಬ್ಬಾಳು ಅಪ್ಪಣ್ಣಯ್ಯ ಕುಟುಂಬವರ್ಗ ಆರ್ಥಿಕವಾಗಿ ಸಬಲರಾಗಿದ್ದು, ಅಪ್ಪಣ್ಣಯ್ಯನವರ ಟ್ರಸ್ಟ್ ಸ್ಥಾಪಿಸಿ ವಿದ್ಯಾರ್ಥಿಗಳ ಓದಿಗೆ ಸಹಕಾರ ನೀಡಬೇಕು ಎಂದು ಸಲಹೆ ನೀಡಿದರು. ನಿವೃತ್ತ ತಹಸೀಲ್ದಾರ್ ವಿರೂಪಕ್ಷಯ್ಯ ಮಾತನಾಡಿ, ನಾನು ಬೇಲೂರಿನಲ್ಲಿ ತಹಸೀಲ್ದಾರಾಗಿ ಕರ್ತವ್ಯ ನಿರ್ವಹಿಸಿದ ಸಂದರ್ಭದಲ್ಲಿ ಯಗಚಿ ಮುಳುಗಡೆ ಸಂತ್ರಸ್ತರಿಗೆ ಭೂಮಿ ಮತ್ತು ಇನ್ನು ಮುಂತಾದ ಕೆಲಸ ಮಾಡಿದ್ದು, ಹತ್ತಾರು ಮಂತ್ರಿಗಳಲ್ಲಿ ಆಪ್ತ ಕಾರ್ಯದರ್ಶಿಯಾಗಿ ಕೆಲಸ ನಿರ್ವಹಿಸಿದ ಬಗ್ಗೆ ತಿಳಿಸಿದರು.ರಾಜ್ಯ ಕೃಷಿಕ ಸಮಾಜ ಪ್ರತಿನಿಧಿ ಬಿ.ಎಂ.ದೊಡ್ಡವೀರೇಗೌಡ ಮಾತನಾಡಿ, ಹೆಬ್ಬಾಳಿನ ಬಸವಯ್ಯ, ನಿಲಮ್ಮ, ಮಕ್ಕಳಾದ ಅಪ್ಪಣ್ಣಯ್ಯ, ಹಾಲಪ್ಪಯ್ಯ ಹಾಗೂ ರುದ್ರಪ್ಪನವರ ಸಮಾಜಕ್ಕೆ ತಮ್ಮದೇ ಕೊಡುಗೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಅವರು ನೆನಪು ಅರ್ಥಪೂರ್ಣವೆಂದರು.ಕಾರ್ಯಕ್ರಮದಲ್ಲಿ ಕರ್ನಾಟಕ ಸರ್ಕಾರದ ಜವಳಿ-ಸಕ್ಕರೆ ಮತ್ತು ಕೃಷಿ ಮಾರಕಟ್ಟೆ ಸಚಿವರ ಆಪ್ತ ಕಾರ್ಯದರ್ಶಿ ಕೆ.ಸಿ. ವಿರೂಪಾಕ್ಷ, ಎಚ್.ಜಿ. ಮಲ್ಲೇಗೌಡ, ಮೂಳೆನಹಳ್ಳಿ ರೇವಣ್ಣಯ್ಯ, ಎಚ್.ಬಿ. ಚಂದ್ರಶೇಖರಯ್ಯ, ಪ್ರಸಾದ್, ಶಿವೇಗೌಡ, ಪರ್ವತ ಮಲ್ಲೇಗೌಡ, ನಂಜೇಗೌಡ, ಎಚ್.ಜಿ. ಭುವನೇಶ್, ಹೆಬ್ಬಾಳು ಹಾಲಪ್ಪ, ರೇಣುಕಯ್ಯ, ಷಡಕ್ಷರಿ, ಅಭಿಲಾಷ್, ಜಗದೀಶ್ ಇನ್ನು ಮುಂತಾದವರು ಹಾಜರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.