ಬೀದಿ ಬದಿ ವ್ಯಾಪಾರಿಗಳ ಸಬಲೀಕರಣಕ್ಕೆ ಸಂಘಟನೆ ಅಗತ್ಯ

KannadaprabhaNewsNetwork |  
Published : Nov 07, 2026, 02:15 AM IST
ಗದಗ ನಗರದ ಕರ್ನಾಟಕ ಭವನದಲ್ಲಿ ಬೀದಿ ಬದಿ ವ್ಯಾಪಾರಿ ಸಂಘಟನೆ ಪದಾಧಿಕಾರಿಗಳಿಗಾಗಿ ತರಬೇತಿ ಶಿಬಿರ ನಡೆಯಿತು. | Kannada Prabha

ಸಾರಾಂಶ

ವ್ಯಾಪಾರಿಗಳ ಹಕ್ಕುಗಳ ರಕ್ಷಣೆಗಾಗಿ ವಕಾಲತ್ತಿನ ವಿವಿಧ ಹಂತಗಳು ಮತ್ತು ಕ್ರಿಯಾಯೋಜನೆಗಳ ಕುರಿತು ಅವರು ವಿಸ್ತೃತವಾಗಿ ಮಾರ್ಗದರ್ಶನ ನೀಡಿದರು.

ಗದಗ: ಬೀದಿ ಬದಿ ವ್ಯಾಪಾರಿಗಳ ಸಬಲೀಕರಣಕ್ಕೆ ಸಮುದಾಯ ಸಂಘಟನೆ, ಪರಿಣಾಮಕಾರಿ ಸಂವಹನ, ನಾಯಕತ್ವ ಸಾಮರ್ಥ್ಯ ವೃದ್ಧಿ ಹಾಗೂ ಕಾನೂನು ಜಾಗೃತಿ ಅತ್ಯಗತ್ಯ ಎಂದು ವಕೀಲರು ಹಾಗೂ ಕಾನೂನು ಸಲಹೆಗಾರ ಎಂ. ಬಿ. ನದಾಫ್ ಹೇಳಿದರು.

ಗದಗ ನಗರದ ಕರ್ನಾಟಕ ಭವನದಲ್ಲಿ ಬೀದಿ ಬದಿ ವ್ಯಾಪಾರಿ ಸಂಘಟನೆ ಪದಾಧಿಕಾರಿಗಳಿಗಾಗಿ ಆಯೋಜಿಸಲಾಗಿದ್ದ ವಕಾಲತ್ತು ಕುರಿತು ರಾಜ್ಯ ಮಟ್ಟದ ತರಬೇತಿ ಶಿಬಿರದಲ್ಲಿ ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಅವರು ಮಾತನಾಡಿದರು. ವ್ಯಾಪಾರಿಗಳ ಹಕ್ಕುಗಳ ರಕ್ಷಣೆಗಾಗಿ ವಕಾಲತ್ತಿನ ವಿವಿಧ ಹಂತಗಳು ಮತ್ತು ಕ್ರಿಯಾಯೋಜನೆಗಳ ಕುರಿತು ಅವರು ವಿಸ್ತೃತವಾಗಿ ಮಾರ್ಗದರ್ಶನ ನೀಡಿದರು. ಶಿಬಿರವನ್ನು ನವದೆಹಲಿಯ ಹಾಕರ್ಸ್ ಜಂಟಿ ಕ್ರಿಯಾ ಸಮಿತಿಯ ರಾಷ್ಟ್ರೀಯ ಅಧ್ಯಕ್ಷರಾದ ಧರ್ಮೇಂದ್ರ ಕುಮಾರ್ ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಹಾಕರ್ಸ್ ಜಂಟಿ ಕ್ರಿಯಾ ಸಮಿತಿಯ ಕರ್ನಾಟಕ ರಾಜ್ಯ ಸಂಯೋಜಕರಾಗಿ ಅನ್ವರ್ ಶಿರಹಟ್ಟಿ ಅವರನ್ನು ನೇಮಕ ಮಾಡಿ ಆದೇಶ ಪತ್ರ ವಿತರಿಸಲಾಯಿತು.

ವೇದಿಕೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೆ. ಮಹಮ್ಮದ್ ಇರ್ಫಾನ್ ಡಂಬಳ ವಹಿಸಿದ್ದರು. ಗದಗ ಜಿಲ್ಲೆಯ 9 ಸ್ಥಳೀಯ ಸಂಸ್ಥೆಗಳ ಸಮುದಾಯ ಸಂಘಟನಾ ಅಧಿಕಾರಿಗಳು ಹಾಗೂ ರಾಜ್ಯದ ವಿವಿಧ ಜಿಲ್ಲೆಗಳ ಅಧ್ಯಕ್ಷರು, ಪದಾಧಿಕಾರಿಗಳು ಭಾಗವಹಿಸಿದ್ದರು. ಗದಗ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಉಮರ್ ಫಾರೂಕ್ ಹುಬ್ಬಳ್ಳಿ, ನಗರ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷ ಎಂ.ಎನ್. ಶಾಲಗಾರ, ಬಿಜೆಪಿ ಮುಖಂಡ ಇರ್ಷಾದ್ ಮಾನ್ವಿ, ಸಮಾಜ ಚಿಂತಕರಾದ ರಿಯಾಜ್ ಡಾಲಾಯತ್, ಜಾವೇದ್ ಟಿನ್ವಾಲೆ, ಮಹಮ್ಮದ್ ಗೌಸ್ ಸವಣೂರ, ಸುರೇಶ, ಅನ್ಸರ್ ಬಾಷಾ, ಶಬನಾ ಬೆಳಗಾಂವ, ಮುನಿಲಕ್ಷ್ಮಿ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಬ್ಬಿಗೆ ಸ್ಥಳೀಯ ರಿಕವರಿ ಆಧಾರದಲ್ಲಿ ನ್ಯಾಯಯುತ ಬೆಲೆ ನೀಡಲು ಆಗ್ರಹ
ಕರ್ತವ್ಯ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ವಹಿಸಿದ್ದರೆ ಸೂಕ್ತ ಕ್ರಮ