ಕನ್ನಡಪ್ರಭ ವಾರ್ತೆ ಶಿವಮೊಗ್ಗ
ನಗರದ ಸ್ಕೌಟ್ ಭವನದಲ್ಲಿ ಶಿವಮೊಗ್ಗ ಜಿಲ್ಲಾ ಗಾಣಿಗ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಆಯೋಜಿಸಿದ್ದ ಸರ್ವ ಸದಸ್ಯರ ಮಹಾಸಭೆ, ಸಾಧಕರಿಗೆ ಸನ್ಮಾನ, ಪ್ರತಿಭಾ ಪುರಸ್ಕಾರ, ಹಿರಿಯ ನಾಗರಿಕರಿಗೆ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸಾಧಕರು ಸಮಾಜದ ಆಸ್ತಿ. ಸಾಧನೆಯನ್ನು ಗುರುತಿಸಿ ಗೌರವಿಸುವ ಕೆಲಸ ಆಗಬೇಕು. ಹಿರಿಯ ನಾಗರಿಕರ ಸೇವೆ ಮಾಡುವುದು ದೇವರ ಸೇವೆಗೆ ಸಮಾನ. ಜಿಲ್ಲಾ ಗಾಣಿಗ ಸಮಾಜವು ಅರ್ಥಪೂರ್ಣ ಕಾರ್ಯಕ್ರಮವನ್ನು ಆಯೋಜಿಸಿ ಮಾರ್ಗದರ್ಶನ ನೀಡುತ್ತಿರುವುದು ಶ್ಲಾಘನೀಯ ಎಂದು ತಿಳಿಸಿದರು.ಸಂಸದ ಬಿ.ವೈ. ರಾಘವೇಂದ್ರ ಅವರು 20 ವಿದ್ಯಾರ್ಥಿಗಳಿಗೆ ತಾಯಿಯ ಹೆಸರಿನಲ್ಲಿ ₹20 ಸಾವಿರ ನಗದು ಬಹುಮಾನ ನೀಡಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿದರು.
ಭದ್ರಾವತಿ ನಗರಸಭೆ ಮಾಜಿ ಅಧ್ಯಕ್ಷ ಬಿ.ಕೆ. ಮೋಹನ್ ಮಾತನಾಡಿ, ರಾಜಕೀಯವಾಗಿ ಉತ್ತಮವಾಗಿ ಬೆಳೆಯಲು ಗಾಣಿಗ ಸಮಾಜ ಬೆನ್ನು ತಟ್ಟಿ ಆಶೀರ್ವದಿಸಿದೆ. ನಮ್ಮ ಗಳಿಕೆಯಲ್ಲಿ ಸಮಾಜಸೇವೆಗೆ ಸ್ವಲ್ಪ ಹಣ ವಿನಿಯೋಗಿಸಬೇಕು ಎಂದು ಹೇಳಿದರು.
ಉಪಾಧ್ಯಕ್ಷ ಎಸ್.ಎಸ್. ಸತೀಶ್, ಎನ್. ರಾಜಶೇಖರ್, ಪ್ರಧಾನ ಕಾರ್ಯದರ್ಶಿ ಎಂ.ಆರ್. ಕಿರಣ್‌ಕುಮಾರ್ , ರವಿ.ಎಸ್ , ಇಂದೂಧರ, ಗುರುರಾಜ್, ಆನಂದಕುಮಾರ್, ವಾಗೀಶ್ ಕೋಟಿ, ಸಿದ್ದಲಿಂಗಪ್ಪ, ಜಯಂತ್, ಮಲ್ಲಿಕಾರ್ಜುನ ಕಾನೂರು, ರವೀಶ್, ಎನ್.ಜಿ. ಲೋಕೇಶ್, ಆಡಳಿತ ಮಂಡಳಿ ಪದಾಧಿಕಾರಿಗಳು, ನಿರ್ದೇಶಕರು, ಸದಸ್ಯರು ಉಪಸ್ಥಿತರಿದ್ದರು.