ಅನ್ಯಾಯದ ವಿರುದ್ಧ ಧ್ವನಿ ಎತ್ತಲು ಸಂಘಟನೆ ಅವಶ್ಯ

KannadaprabhaNewsNetwork |  
Published : Feb 02, 2025, 11:45 PM IST
2ಸಿಎಚ್‌ಎನ್‌54ಹನೂರು ಪಟ್ಟಣದ ಡಾ. ಬಾಬು ಜಗಜೀವನರಾಂ ಸಮುದಾಯ ಭವನದಲ್ಲಿ ಮಾದಿಗ ಸಮುದಾಯ ಮುಖಂಡರು ಹನೂರು ತಾಲೂಕಿನ ಡಾ.ಬಾಬು ಜಗಜೀವನರಾಂ ಸಂಘಗಳ ಒಕ್ಕೂಟದ ಅಧ್ಯಕ್ಷರಾಗಿ ಹಾಗೂ ಪದಾಧಿಕಾರಿಗಳಾಗಿ ಆಯ್ಕೆಯಾದವರಿಗೆ ಹೂವಿನ ಹಾರ ಹಾಕಿ ಸನ್ಮಾನಿಸಿ ಗೌರವಿಸಿ ಶುಭ ಹಾರೈಸಿದರು. | Kannada Prabha

ಸಾರಾಂಶ

ತಾಲೂಕಿನ ಡಾ.ಬಾಬು ಜಗಜೀವನರಾಂ ಸಂಘಗಳ ಒಕ್ಕೂಟದ ಅಧ್ಯಕ್ಷರಾಗಿ ಬೂದುಬಾಳು ಮಾದೇವ, ಉಪಾಧ್ಯಕ್ಷರಾಗಿ ವಡಕೆಹಳ್ಳ ವೀರನ್ ಆಯ್ಕೆಯಾಗಿದ್ದಾರೆ.

ಕನ್ನಡಪ್ರಭ ವಾರ್ತೆ, ಹನೂರು

ತಾಲೂಕಿನ ಡಾ.ಬಾಬು ಜಗಜೀವನರಾಂ ಸಂಘಗಳ ಒಕ್ಕೂಟದ ಅಧ್ಯಕ್ಷರಾಗಿ ಬೂದುಬಾಳು ಮಾದೇವ, ಉಪಾಧ್ಯಕ್ಷರಾಗಿ ವಡಕೆಹಳ್ಳ ವೀರನ್ ಆಯ್ಕೆಯಾಗಿದ್ದಾರೆ.

ಪಟ್ಟಣದ ಡಾ. ಬಾಬು ಜಗಜೀವನರಾಂ ಸಮುದಾಯ ಭವನದಲ್ಲಿ ಭಾನುವಾರ ನಡೆದ ಹನೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಡಾ.ಬಾಬು ಜಗಜೀವನರಾಂ ಸಂಘಗಳ ಒಕ್ಕೂಟದ ಪದಾಧಿಕಾರಿಗಳ ಸಭೆಯಲ್ಲಿ ಆಯ್ಕೆಮಾಡಲಾಗಿದೆ.

ಗೌರವ ಅಧ್ಯಕ್ಷರಾಗಿ ರಾಮಾಪುರ ವಿ.ಟಿ. ಶಿವಣ್ಣ, ಪ್ರಧಾನ ಕಾರ್ಯದರ್ಶಿಯಾಗಿ ಚೆನ್ನಾಲಿಂಗನಹಳ್ಳಿ ರವಿ, ಸಂಘಟನಾ ಕಾರ್ಯದರ್ಶಿಯಾಗಿ ಕೆಂಪಯ್ಯನಹಟ್ಟಿ ದೊರೆ, ಖಜಾಂಚಿಯಾಗಿ ಎಲ್ಲೇಮಾಳ ಗೋವಿಂದ, ಕಾರ್ಯಾಧ್ಯಕ್ಷರಾಗಿ ವಡಕೆಹಳ್ಳ ಗಣೇಶ್ ಅವರು ಅವಿರೋಧವಾಗಿ ಆಯ್ಕೆಯಾದರು.

ಮಾದಿಗ ಸಮುದಾಯ ಮುಖಂಡರು ಆಯ್ಕೆಯಾದ ಪದಾಧಿಕಾರಿಗಳಿಗೆ ಹೂ ಹಾರ ಹಾಕಿ ಸನ್ಮಾನಿಸಿ ಗೌರವಿಸಿ ಶುಭ ಹಾರೈಸಿದರು. ಇದಕ್ಕೂ ಮುನ್ನಾ ಹನೂರು ಪಟ್ಟಣ ಸೇರಿದಂತೆ ಹನೂರು, ರಾಮಾಪುರ, ಲೊಕ್ಕನಹಳ್ಳಿ ಹಾಗೂ ಪಾಳ್ಯ ಹೋಬಳಿ ಭಾಗದ ವಿವಿಧ ಗ್ರಾಮದ ಮಾದಿಗ ಸಮುದಾಯ ನೂರಾರು ಮುಖಂಡರು ಆಗಮಿಸಿ ಪದಾಧಿಕಾರಿಗಳ ಆಯ್ಕೆ, ಒಕ್ಕೂಟ ರಚನೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದು, ಸಂಘಟನೆ ಹಾಗೂ ಸಮುದಾಯ ಜನರ ಅಭಿವೃದ್ಧಿ, ಒಗ್ಗಟ್ಟು ಕುರಿತು ಸುಧೀರ್ಘವಾಗಿ ಚರ್ಚೆ ನೆಡೆಸಿದರು.

ಗ್ಯಾರಂಟಿ ಯೋಜನೆಗಳ ಪ್ರಾಧಿಕಾರ ತಾಲೂಕು ಅಧ್ಯಕ್ಷ ಪಾಳ್ಯ ರಾಚಪ್ಪ ಮಾತನಾಡಿ, ಮಾದಿಗ ಸಮುದಾಯ ಬಂಧುಗಳ ಶ್ರೇಯೋಭಿವೃದ್ಧಿ ಹಾಗೂ ಹಕ್ಕು, ಅಧಿಕಾರ ಸೇರಿದಂತೆ ಅನ್ಯಾಯದ ವಿರುದ್ಧ ಧ್ವನಿ ಎತ್ತಲು ಸಂಘಟನೆ ಅತ್ಯವಶ್ಯಕವಾಗಿದೆ. ಈ ನಿಟ್ಟಿನಲ್ಲಿ ಒಕ್ಕೂಟ ರಚನೆ ಮಾಡಲಾಗಿದ್ದು, ಒಮ್ಮತವಾಗಿ ಪದಾಧಿಕಾರಿಗಳ ಆಯ್ಕೆ ಮಾಡಲಾಗಿದೆ. ಒಕ್ಕೂಟದ ಪದಾಧಿಕಾರಿಗಳ ಜೊತೆಗೂಡಿ ನಾನು ಸಹ ಸಂಘಟನೆಗೆ ಹಾಗೂ ಸಮುದಾಯ ಜನರ ಏಳಿಗೆಗೆ ದುಡಿಯುತ್ತೇನೆ ಎಂದರು.ತಾಲೂಕಿನ ಡಾ.ಬಾಬು ಜಗಜೀವನರಾಂ ಸಂಘಗಳ ಒಕ್ಕೂಟ ನೂತನ ಅಧ್ಯಕ್ಷ ಬೂದುಬಾಳು ಮಾದೇವ ಮಾತನಾಡಿ, ನನ್ನನ್ನು ಒಕ್ಕೂಟದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ ಸಮುದಾಯದ ಎಲ್ಲರಿಗೂ ಚಿರಋಣಿಯಾಗಿರುತ್ತೇನೆ. ಸಮುದಾಯದ ಜನರ ಹಾಗೂ ಗ್ರಾಮಗಳ ಸಮಸ್ಯೆಗಳಿಗೆ ಸ್ಪಂದಿಸುತ್ತಾ, ಅವರಿಗೆ ಸಾಮಾಜಿಕ ನ್ಯಾಯ ದೊರಕಿಸಿಕೊಡುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತೇನೆ. ಅದಕ್ಕಾಗಿ ಸಂಘಟನೆ ಮತ್ತು ಸಮುದಾಯ ಜನರ ಸಹಕಾರ ಅಗತ್ಯವಾಗಿದೆ ಎಂದು ತಿಳಿಸಿದರು. ದೇವರತ್ನ ಫೌಂಡೇಶನ್ ಮೈಸೂರು ವಲಯ ಉಸ್ತುವಾರಿ ಹಾಗೂ ಉದ್ಯಮಿ ರೇವಣ್ಣ, ಹನೂರು ಪ.ಪಂ ಸದಸ್ಯ ಸುದೇಶ್, ಮಾದಿಗ ಸಮುದಾಯ ಮುಖಂಡರಾದ ರಾಮಾಪುರ ನಟೇಶ್, ಹನೂರು ಗುರುಸ್ವಾಮಿ, ಗೋವಿಂದ, ಕಾಮಗೆರೆ ಮಹದೇವ, ಕರಿಯನಪುರ ರಾಚಯ್ಯ, ಪಿಜಿ ಪಾಳ್ಯ ಪಾಪಣ್ಣ, ಚೆನ್ನಾಲಿಂಗನಹಳ್ಳಿ ಗೋವಿಂದ, ರಾಜೇಶ್, ಶಿಕ್ಷಕರುಗಳಾದ ಸಿದ್ದಯ್ಯ, ಶಾಕ್ಯ ಸುಂದರ್ ಮಾದಪ್ಪ ಮಾದಿಗ, ಎಲ್ಲೇಮಾಳ ಸೆಕ್ರದೇವನ್, ಬಣ್ಣಾರಿ, ಪ್ರವೀಣ್, ಹೂಗ್ಯ ಸಂಪತ್ ಮತ್ತಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ