ಸಂಘಟನೆ- ವೈಚಾರಿಕ ನೆಲೆಗಟ್ಟಿನಲ್ಲಿ ವಚನಕ್ರ್ರಾಂತಿ

KannadaprabhaNewsNetwork |  
Published : Sep 24, 2025, 01:00 AM IST
ವಿಜೆಪಿ ೨೩ವಿಜಯಪುರ ಪಟ್ಟಣದ ಗಾಂಧಿಚೌಕದಲ್ಲಿ ನಡೆದ ಶರಣಸಾಹಿತ್ಯ ಸಮ್ಮೇಳನದ ಸಮಾರೊಪ ಕಾರ್ಯಕ್ರಮದಲ್ಲಿ ಜಿಲ್ಲಾ ಶರಣಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ, ಶಿಕ್ಷಣತಜ್ಞ ಎಚ್.ಎಸ್.ರುದ್ರೇಶಮೂರ್ತಿ ಅವರನ್ನು ಸನ್ಮಾನಿಸಲಾಯಿತು. | Kannada Prabha

ಸಾರಾಂಶ

ವಿಜಯಪುರ: ಕೇವಲ ಕರ್ನಾಟಕದ ಚೌಕಟ್ಟಿನಲ್ಲಿ ನಡೆದ ೧೨ನೇ ಶತಮಾನದ ಶರಣಕ್ರಾಂತಿ ಇಂದು ಅನೇಕಾಂಶಗಳಲ್ಲಿ ಇಡೀ ಜಗತ್ತಿಗೆ ವ್ಯಾಪಿಸಿದೆ.

ವಿಜಯಪುರ: ಕೇವಲ ಕರ್ನಾಟಕದ ಚೌಕಟ್ಟಿನಲ್ಲಿ ನಡೆದ ೧೨ನೇ ಶತಮಾನದ ಶರಣಕ್ರಾಂತಿ ಇಂದು ಅನೇಕಾಂಶಗಳಲ್ಲಿ ಇಡೀ ಜಗತ್ತಿಗೆ ವ್ಯಾಪಿಸಿದೆ. ಸಂಘಟನೆ ಮತ್ತು ವೈಚಾರಿಕ ದೃಷ್ಟಿಕೋನಗಳಲ್ಲಿ ವಚನಕ್ರಾಂತಿ ಅಭೂತಪೂರ್ವ ಐತಿಹಾಸಿಕ ಕಾಲಘಟ್ಟವಾಗಿ ಪರಿಣಮಿಸಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಶರಣ ಸಾಹಿತ್ಯ ಪರಿಷತ್‌ಮಾಜಿ ಅಧ್ಯಕ್ಷ, ರುದ್ರೇಶಮೂರ್ತಿ ತಿಳಿಸಿದರು.

ಪಟ್ಟಣದಲ್ಲಿ ಅಖಿಲ ಕರ್ನಾಟಕ ಮಿತ್ರ ಸಂಘ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಶರಣ ಸಾಹಿತ್ಯ ಸಮ್ಮೇಳನ, ಜಿಲ್ಲಾ ಉತ್ಸವ, ಜಿಲ್ಲಾ ಸಹಕಾರ ಸಮ್ಮೇಳನ, ಡಾ.ವಿಷ್ಣುವರ್ಧನ್ ಜನ್ಮದಿನದ ಅಮೃತ ಮಹೋತ್ಸವದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಅಭಿನವ ಭಾರ್ಗವ ಡಾ.ವಿಷ್ಣುವರ್ಧನ್ ಅವರದ್ದು ವೈಶಿಷ್ಟ್ಯಪೂರ್ಣ ವ್ಯಕ್ತಿತ್ವ. ಬದುಕನ್ನು ಅತಿಯಾಗಿ ಪ್ರೀತಿಸಿದರೂ ಒಂದು ಬಗೆಯ ನಿರ್ಲಿಪ್ತಭಾವನೆ ವಿಷ್ಣುವರ್ಧನ್ ಹೊಂದಿದ್ದರು. ಅಧ್ಯಯನಶೀಲರೂ, ಕ್ರೀಡಾಭಿಮಾನಿಯೂ, ಶಾಂತಿಪ್ರಿಯರೂ ಆಗಿದ್ದರು ಎಂದರು.

ವನಕಲ್ಲು ಸುಕ್ಷೇತ್ರ ಶ್ರೀ ಬಸವರಮಾನಂದ ಸ್ವಾಮೀಜಿ ಮಾತನಾಡಿ, ಶರಣರು ಜಾತಿ, ಲಿಂಗ, ಕಸುಬು, ಆರ್ಥಿಕ ಸ್ಥಿತಿ ಮುಂತಾದ ಬೇಧಭಾವಗಳನ್ನು ತಿರಸ್ಕರಿಸಿದ್ದರು. ವಚನಸಾಹಿತ್ಯ ಸಮಾನತೆ, ಶ್ರಮಿಕ, ಕಾಯಕ, ದಾಸೋಹದ ನೆಲೆಯಲ್ಲಿ ಪ್ರಮುಖವಾದುದು. ಧಾರ್ಮಿಕ, ಸಾಮಾಜಿಕ, ದಾರ್ಶನಿಕ ಚಿಂತನೆಗಳನ್ನು ಒಳಗೊಂಡಿವೆ ಎಂದು ಶ್ರೀಗಳು ಅಭಿಪ್ರಾಯಪಟ್ಟರು.

ಅಖಿಲ ಕರ್ನಾಟಕ ಮಿತ್ರ ಸಂಘದ ಅಧ್ಯಕ್ಷ ಚಿ.ಮಾ.ಸುಧಾಕರ್, ಕಾರ್ಯದರ್ಶಿ ವಿ.ವಿಶ್ವನಾಥ್, ಕದಳಿ ವೇದಿಕೆ ಜಿಲ್ಲಾಧ್ಯಕ್ಷೆ ಸ್ವರ್ಣಗೌರಿ, ಜಿಲ್ಲಾ ಶಸಾಪ ಅಧ್ಯಕ್ಷ ಚಂದ್ರಶೇಖರಹಡಪದ್, ತಾಲೂಕು ಶಸಾಪ ಅಧ್ಯಕ್ಷ ಮ.ಸುರೇಶ್‌ಬಾಬು, ಜಿಲ್ಲಾ ಸಹಕಾರ ಸಮ್ಮೇಳನಾಧ್ಯಕ್ಷ ವೆಂಕಟಾಪುರ ಲಕ್ಷ್ಮಣ್, ಆರ್.ಮುನಿರಾಜು, ಮುನಿವೀರಣ್ಣ, ಮುನಿವೆಂಕಟರಮಣಪ್ಪ, ಕೆ.ಎಚ್.ಚಂದ್ರಶೇಖರ್, ಎ.ಬಿ.ಪರಮೇಶ್, ಶ್ರೀನಿವಾಸ್, ಚಿದಾನಂದ ಬಿರಾದಾರ್, ರಾಷ್ಟ್ರೀಯ ಬಸವದಳದ ಅಧ್ಯಕ್ಷ ಬೇಕರಿ ವಿ.ಶಿವಣ್ಣ, ಖಜಾಂಚಿ ಮ.ಜಯದೇವ್, ಹೊಸಕೋಟೆ ಚೌಡೇಗೌಡ, ಡಾ.ವಿಷ್ಣುವರ್ಧನ್ ಅಭಿಮಾನಿಗಳ ಸಂಘದ ಅಧ್ಯಕ್ಷ ಜಿ.ಎಂ.ಚಂದ್ರು, ಕರವೇ ಮಹೇಶ್‌ ಉಪಸ್ಥಿತರಿದ್ದರು.

(ಫೋಟೋ ಕ್ಯಾಫ್ಷನ್‌)

ವಿಜಯಪುರದಲ್ಲಿ ಹಮ್ಮಿಕೊಂಡಿದ್ದ ಶರಣ ಸಾಹಿತ್ಯ ಸಮ್ಮೇಳನದ ಸಮಾರೊಪ ಕಾರ್ಯಕ್ರಮದಲ್ಲಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಎಚ್.ಎಸ್.ರುದ್ರೇಶಮೂರ್ತಿ ಅವರನ್ನು ಸನ್ಮಾನಿಸಲಾಯಿತು.

PREV

Recommended Stories

ಪರ್ವ ಅಂತ್ಯ - ಎಸ್.ಎಲ್. ಭೈರಪ್ಪ ನಿಧನ । ಬೆಂಗಳೂರಲ್ಲಿ ಮಧ್ಯಾಹ್ನವರೆಗೆ ಅಂತಿಮ ದರ್ಶನ
ಬ್ಯಾಂಕರ್‌ಗಳು ಅಗತ್ಯ ಭದ್ರತಾ ವ್ಯವಸ್ಥೆ ಕೈಗೊಳ್ಳಿ