ಕನ್ನಡಪ್ರಭ ವಾರ್ತೆ ಮೈಸೂರು
ಸೇವಾ ಮನೋಭಾವ ಇದ್ದಲ್ಲಿ ಮಾತ್ರ ಸಂಘ ಸಂಸ್ಥೆಗಳ ಕಾರ್ಯ ಚಟುವಟಿಕೆಗಳು ಸಾರ್ವಜನಿಕರಿಗೆ ತಲುಪಲು ಸಾಧ್ಯವಾಗಲಿದೆ ಎಂದು ಬಿಜೆಪಿ ನಗರಾಧ್ಯಕ್ಷರಾದ ಮಾಜಿ ಶಾಸಕ ಎಲ್. ನಾಗೇಂದ್ರ ತಿಳಿಸಿದರು.ನಗರದ ಹೊಟೇಲ್ ಮೌರ್ಯ ರೆಸಿಡೆನ್ಸಿಯಲ್ಲಿ ಹೊಸ ಬೆಳಕು ಸೇವಾ ಟ್ರಸ್ಟ್ ಉದ್ಘಾಟಿಸಿ ಮಾತನಾಡಿದ ಅವರು, ನಿಸ್ವಾರ್ಥ ಸಮಾಜಮುಖಿ ಕೆಲಸ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಕೊಳ್ಳುವ ಮೂಲಕ ಸಂಘ ಸಂಸ್ಥೆಗಳ ಸ್ಥಾಪನೆಯ ಸದುದ್ದೇಶ ಈಡೇರುವಂತೆ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಇದೇ ವೇಳೆ ವಿವಿಧ ಕ್ಷೇತ್ರದ ಸಾಧಕರಾದ ಕರಾಟೆ ಮಾಸ್ಟರ್ ದಿಲೀತ್ತು ಉತ್ತಪ್ಪ, ರಕ್ತದಾನಿ ಮಹದೇವಸ್ವಾಮಿ, ಖೋ ಖೋ ಆಟಗಾರ್ತಿ ಚೈತ್ರಾ, ಪೊಲೀಸ್ ಇಲಾಖೆಯ ದಿವಾಕರ್, ಆರ್ಟಿಸ್ಟ್ ಗೌರಿ, ಸಮಾಜ ಸೇವಕರಾದ ಪ್ರಭಾಮಣಿ, ಮಾದೇವಯ್ಯ, ಕಾಂತರಾಜು, ಮಾಲಂಬಿಕ, ಸೌಮ್ಯ ಆರ್. ರವಿ, ಇಬ್ರಾಹಿಂ ರಫೀಕ್ ಅವರಿಗೆ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಬಿಜೆಪಿ ನಗರ ಉಪಾಧ್ಯಕ್ಷೆ ಹೇಮಾ ನಂದೀಶ್, ಹೊಸಬೆಳಕು ಸೇವಾ ಟ್ರಸ್ಟ್ ಸಂಸ್ಥಾಪಕರಾದ ಎಂ.ಎನ್. ಗೀತಾ, ಶಿವಪ್ರಸಾದ್, ಬಿಜೆಪಿ ರಾಜ್ಯ ವಕ್ತಾರ ಎಂ.ಜೆ. ಮಹೇಶ್, ಯೋಗನರಸಿಂಹಸ್ವಾಮಿ ದೇವಸ್ಥಾನದ ಆಡಳಿತಾಧಿಕಾರಿ ಶ್ರೀನಿವಾಸ್ ಮೊದಲಾದವರು ಇದ್ದರು.
ಶ್ರೀವ್ಯಾಸತೀರ್ಥ ವಿದ್ಯಾಪೀಠದ ವಿದ್ಯಾರ್ಥಿಗಳಿಗೆ ಬಹುಮಾನಕನ್ನಡಪ್ರಭ ವಾರ್ತೆ ಮೈಸೂರು
ಶ್ರೀವಿದ್ಯಾಶ್ರೀಶತೀರ್ಥ ಶ್ರೀಪಾದರು ಸ್ಥಾಪಿಸಿದ ಮೈಸೂರಿನ ಶ್ರೀ ವ್ಯಾಸತೀರ್ಥ ವಿದ್ಯಾಪೀಠವು ಅನೇಕ ಶಾಸ್ತ್ರಗಳನ್ನು ಪಾಠ ಮಾಡುವ ವ್ಯವಸ್ಥೆಯನ್ನು ಒಳಗೊಂಡಿದೆ. ಈ ವ್ಯಾಸತೀರ್ಥ ವಿದ್ಯಾಪೀಠವು ವಿದ್ಯಾ ಕ್ಷೇತ್ರದಲ್ಲಿ ಅನೇಕ ಸಾಧನೆಗಳನ್ನು ಮಾಡುತ್ತಿದ್ದು, ಈಗ ಮತ್ತೊಂದು ಸಾಧನೆಯನ್ನು ಮಾಡಿದೆ.ರಾಷ್ಟ್ರ ಮಟ್ಟದ ಸ್ಪರ್ಧೆಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದ ವಿದ್ಯಾಪೀಠದ ಮೂವರು ಬಹುಮಾನವನ್ನು ಪಡೆದು ರಾಜ್ಯಕ್ಕೆ ಕೀರ್ತಿಯನ್ನು ತಂದಿದ್ದಾರೆ. ಡಿ. ಪ್ರಣವಾಚಾರ್ಯ ಅವರು ನ್ಯಾಯಭಾಷಣದಲ್ಲಿ ರಜತ ಪದಕ, ಶ್ರೀಶಾಚಾರ್ಯ ಅಯಾಚಿತ ಅವರು ಬೌದ್ಧಭಾಷಣದಲ್ಲಿ ರಜತ ಪದಕ ಮತ್ತು ಚಿ. ವಲ್ಲಭ ಅವರು ಸಾಹಿತ್ಯಶಲಾಕಾದಲ್ಲಿ ಕಂಚಿನ ಪದಕ ಪಡೆದಿದ್ದಾರೆ. ಈ ವೇಳೆ ಯೋಗ ಗುರು ಬಾಬಾ ರಾಮದೇವ್, ಕೇಂದ್ರ ಸಂಸ್ಕೃತ ವಿವಿ ಕುಲಪತಿ ಡಾ. ಶ್ರೀನಿವಾಸ ವರಖೇಡಿ ಮೊದಲಾದವರು ಉಪಸ್ಥಿತರಿದ್ದರು. ಬಹುಮಾನ ವಿಜೇತರೆಲ್ಲರನ್ನು ಶ್ರೀ ವ್ಯಾಸತೀರ್ಥ ವಿದ್ಯಾಪೀಠವು ಅಭಿನಂದಿಸಿದೆ.