ಕನ್ನಡಪ್ರಭ ವಾರ್ತೆ ವಿಜಯಪುರ
ನಗರದ ಸಂಗನಬಸವ ಸಮುದಾಯ ಭವನದಲ್ಲಿ ವಿಜಯಪುರ ಜಿಲ್ಲಾ ವೀರಶೈವ ಲಿಂಗಾಯತ ಆದಿಬಣಜಿಗ ಕ್ಷೇಮಾಭಿವೃದ್ಧಿ ಸಂಘದಿಂದ ನಡೆದ ಆದಿಬಣಜಿಗ ಸಮಾಜದ ವಧುವರರ ರಾಜ್ಯಮಟ್ಟದ ಸಮ್ಮೇಳನದ ಅಥಿತಿಯಾಗಿ ಆಗಮಿಸಿ ಮಾತನಾಡಿದ ಅವರು, ಸಮಾಜದ ಬಂಧು ಬಳಗದವರಿಗಾಗಿ ವಧುವರರ ಮೇಳ ನಡೆದಂತೆ ರಾಜ್ಯಮಟ್ಟದ ಉದ್ಯೋಗ ಮೇಳವನ್ನೂ ಮಾಡಲು ಸಂಘಟಕರು ಮುಂದಾಗಬೇಕು. ಆದಿಬಣಜಿಗ ಸಮಾಜದಲ್ಲಿ ಇರುವ ಸಣ್ಣ ಉದ್ದಿಮೆಗಳಿಂದ ಬೃಹತ್ ಪ್ರಮಾಣದ ಉದ್ದಿಮೆಗಳು ಒಂದೆಡೆ ಸೇರಿ ಸಮಾಜದ ನಿರುದ್ಯೋಗ ಯುವಕ ಯುವತಿಯರಿಗೆ ಉದ್ಯೋಗ ಸಿಗಲು ಸಹಕಾರಿ ಆಗುವುದಲ್ಲದೆ ಉದ್ದಿಮೆಗಳ ಪರಿಚಯವಾದಂತಾಗುತ್ತದೆ. ಇಂತಹ ವಿಚಾರದ ಕಡೆ ಸಂಘದವರು ಪ್ರಯತ್ನಿಸಬೇಕು ಎಂದರು. ಜೊಲ್ಲೆ ಸಮೂಹ ಸಂಸ್ಥೆಯ ಅಡಿಯಲ್ಲಿರುವ ಬ್ಯಾಂಕಗಳಲ್ಲಿ ವಿವಿಧ ವೃತ್ತಿಪರ ಕೌಶಲ್ಯಾಭಿವೃದ್ದಿ ಕೇಂದ್ರಗಳಲ್ಲಿ ಸಮಾಜದ ಯುವಕ ಯುವತಿಯರು ಉದ್ಯೋಗ ಬಯಸಿ ಅರ್ಜಿಸಲ್ಲಿಸಿದರೆ ಅವರ ಪದವಿಗೆ ತಕ್ಕಂತೆ ನೌಕರಿ ಕೊಡಲು ನಮ್ಮ ಸಂಸ್ಥೆ ಸಿದ್ಧವಿದೆ ಎಂದರು.
ಶಾಸಕ ಯಶವಂತರಾಯಗೌಡ ಪಾಟೀಲ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಮಾಜ ಸಂಘಟನೆ ಜೊತೆಯಲ್ಲಿ ಸಂಸ್ಕಾರ ಸ್ನೇಹದ ಮೂಲಕ ರೈತನ ಮಕ್ಕಳಿಗೆ ಕನ್ಯಾ ಸಿಗಲು ಪ್ರಯತ್ನ ಮಾಡುವ ನಿಮ್ಮ ಸಂಕಲ್ಪ ಶ್ರೇಷ್ಠವಾಗಿದೆ. ಸಮಾಜವು ಸಕಲ ರೀತಿಯಲ್ಲಿ ಬೆಳವಣಿಗೆಯಾಗಲು ನಾನು ಕೂಡ ಸದಾ ನಿಮ್ಮಗಳ ಜೊತೆ ಇರುವುದರೂಂದಿಗೆ ಸಹಾಯ ಸಹಕಾರ ಕೊಡುತ್ತೇನೆ ಎಂದರು.ಜ್ಞಾನಯೋಗಾಶ್ರಮದ ಬಸವಲಿಂಗ ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸಂಘದ ಅಧ್ಯಕ್ಷ ಸೋಮನಿಂಗ ಕಟಾವಿ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಅಣ್ಣಾಸಾಹೇಬ ಜೊಲ್ಲೆ, ಸುರೇಶ ಗಚ್ಚಿನಕಟ್ಟಿ, ಚಂದ್ರಶೇಖರ ಕವಟಗಿ, ಸುರೇಶ ಪರಗೋಡೆ, ಪರಶುರಾಮ ಚಿಂಚಲಿ, ಮಲ್ಲಿಕಾರ್ಜುನ ಬಿಜ್ಜರಗಿ, ಬಸಲಿಂಗಪ್ಪ ಕಪಾಳಿ, ಅಶೋಕ ಟೆಂಗಳೆ, ಸಿದ್ರಾಮಪ್ಪ ಮಡಸನಾಳ, ಈರನಗೌಡ ಬಿರಾದಾರ, ಪರಶುರಾಮ ಗಣಿ, ಮಲ್ಲಿಕಾರ್ಜುನ ಬಟಗಿ, ರಾಜ್ಯದ ವಿವಿಧ ಜಿಲ್ಲೆಗಳು, ಮಹಾರಾಷ್ಟ್ರ, ತೆಲಂಗಾಣ, ಆಂದ್ರಪ್ರದೇಶ ರಾಜ್ಯದಲ್ಲಿ ವಾಸಿಸುವ ಆದಿಬಣಜಿಗ ಸಮಾಜದ ಬಾಂಧವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.