ಹನುಮಸಾಗರ: ಮಕ್ಕಳಿಗೆ ಅಭ್ಯಾಸದ ಜತೆಗೆ ವಿವಿಧ ಚಟುವಟಿಕೆ ಹಮ್ಮಿಕೊಂಡು ಕಲಿಕೆಯಲ್ಲಿ ಆಸಕ್ತಿ ಮೂಡಿಸುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದು ಗ್ರಾಪಂ ಅಧ್ಯಕ್ಷ ರುದ್ರಗೌಡ ಗೌಡಪ್ಪನವರ ಹೇಳಿದರು.
ಇಂದು ಜನರ ಮನಸ್ಥಿತಿ ಮಕ್ಕಳು ಓದಬಾರದು ಆದರೆ ಉತ್ತಮ ಶ್ರೇಣಿಯಲ್ಲಿ ಪಾಸ್ ಆಗಬೇಕು. ದುಡಿಮೆ ಮಾಡಬಾರದು ಆದರೂ ಹಣ ಬರಬೇಕು ಎಂಬ ಪರಿಸ್ಥಿತಿ ಇದೆ.ಮಕ್ಕಳು ನಿರಂತರವಾಗಿ ಅಭ್ಯಾಸ ಮಾಡಿದರೆ ಉನ್ನತ ಹುದ್ದೆ ನಿಮ್ಮನ್ನು ಹುಡುಕಿ ಬರುತ್ತದೆ ಎಂದರು.
ಸಿಆರ್‌ಪಿ ಲೆಂಕಪ್ಪ ವಾಲಿಕಾರ ಮಾತನಾಡಿ, ಬುನಾದಿ ಸಾಕ್ಷರತೆ ಹಾಗೂ ಸಂಖ್ಯಾ ಜ್ಞಾನ ಬಲಪಡಿಸುವ ಉದ್ದೇಶದಿಂದ ಈ ಕಲಿಕಾ ಹಬ್ಬ ಹಮ್ಮಿಕೊಳ್ಳಲಾಗುತ್ತಿದೆ. ಈ ಹಬ್ಬದಲ್ಲಿ 7 ಸ್ವರ್ಧೆ ಹಮ್ಮಿಕೊಳ್ಳಲಾಗುವುದು. ಇದರಲ್ಲಿ ಆಯ್ಕೆಯಾದ ಮಕ್ಕಳಿಗೆ ಪ್ರಶಸ್ತಿ ನೀಡಲಾಗುವುದು. ಕಥೆ ಹೇಳುವುದು, ಗಣಿತ ಚಟುವಟಿಕೆ, ಆಹಾರ ವಿಂಗಡಣೆಯ ಮಹತ್ವ, ಪರಿಸರ ಸಂರಕ್ಷಣೆ ಹಾಗೂ ಜಾಗೃತಿ ಮೂಡಿಸುವ ಛದ್ಮವೇಷ, ಲಘು ಸಂಭಾಷಣೆ, ಪಾತ್ರಾಭಿನಯ ಸ್ಪರ್ಧೆ ಇದೆ ಎಂದರು.ಕೆಪಿಎಸ್ ಉಪಾಧ್ಯಕ್ಷ ಬಸವರಾಜ ದ್ಯಾವಣ್ಣನವರ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿರ್ದೇಶಕಿ ಗೌರಮ್ಮ ತಳವಾರ, ಉಮಾ ನಾಗೂರ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಉಪಾಧ್ಯಕ್ಷ
ಯಲ್ಲನಗೌಡ ಪಾಟೀಲ್, ಮುಖ್ಯ ಶಿಕ್ಷಕರಾದ ಮಲ್ಲಪ್ಪ ಕುಂಬಾರ, ಗಂಗಾಧರಪ್ಪ, ಬಸಪ್ಪ ಬಂಡಿವಡ್ಡರ, ಭಾರತಿ ದೇಸಾಯಿ, ಮೈಬೂಬ ಬಾಗವಾನ, ಚಂದಪ್ಪ ಹಕ್ಕಿ, ಸದಾಶಿವಯ್ಯ ಹಿರೇಮಠ, ಬಸವರಾಜ ವಡ್ಡರ,ಮೈಬೂಬ ಮೇಣೆದಾಳ, ರಾಜಕುಮಾರ ನಾಯಕ, ಮೈಬೂಬಸಾಬ್ ಕಂದಗಲ್,ಅಶೋಕ ಕಟ್ಟಿಮನಿ, ಮುಖಂಡ ಮುದಿಯಪ್ಪ ವಾಲ್ಮೀಕಿ, ಹನುಮಸಾಗರ ಕ್ಲಸ್ಟರ್ ಮಟ್ಟದ ವ್ಯಾಪ್ತಿಯ 11 ಶಾಲೆಗಳ ಶಿಕ್ಷಕರು, ವಿದ್ಯಾರ್ಥಿಗಳು ಇದ್ದರು.