ಕನ್ನಡಪ್ರಭ ವಾರ್ತೆ ಪಾವಗಡ
ಕಾಡುಗೊಲ್ಲ ಯುವ ಸೇನೆ ಪಾವಗಡ ವತಿಯಿಂದ ಭಾನುವಾರ ಪಟ್ಟಣದ ಪ್ರವಾಸಿ ಮಂದಿರದ ಆವರಣದಲ್ಲಿ ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆಗೊಳಿಸಿ ಮಾತನಾಡಿದರು.
ಸಮಾಜದ ಶಿಕ್ಷಣ ಸಂಘಟನೆ ಹೋರಾಟ ನಡೆಸಬೇಕು. ಬದುಕಿನ ಉತ್ತಮ ಮೌಲ್ಯ ಎತ್ತಿಹಿಡಿಯಬೇಕು. ಕಾಡುಗೊಲ್ಲ ಸಮುದಾಯವು ಪುರಾತನ ಕಾಲದಿಂದಲ್ಲೂ ಕಟ್ಟು ಪಾಡುಗಳಿಗೆ ಸೀಮಿತವಾಗಿದೆ. ಕೆಲ ಗೊಡ್ಡು ಸಂಪ್ರದಾಯಗಳಿಗೆ ಮುಕ್ತಿ ಹಾಡಬೇಕಿದ್ದು,ಮುಂದಿನದಿನಗಳಲ್ಲಿ ಕಾಡುಗೊಲ್ಲ ಸಮುದಾಯ ಹೆಚ್ಚಿಗೆ ಸಂಘಟಿತರಾಗಿ ಶೈಕ್ಷಣಿಕ ಅರ್ಥಿಕ ಹಾಗೂ ಸಾಮಾಜಿಕ ಪ್ರಗತಿಗೆ ಕೈಜೋಡಿಸುವಂತೆ ಸಲಹೆ ನೀಡಿದರು.ಈ ಕಾರ್ಯಕ್ರಮದಲ್ಲಿ ಜನಪದ ಕಲಾವಿದ ಮೋಹನ್ ಕುಮಾರ್, ಚಿತ್ರ ನಟರಾದ ಗುಣಾನಂದ, ಸಂಘದ ಗೌರವ ಅಧ್ಯಕ್ಷ ಸಣ್ಣ ನಾಗಣ್ಣ, ಅಧ್ಯಕ್ಷ ದಿವ್ಯ ತೇಜ್ ಯಾದವ್, ಕಾರ್ಯದರ್ಶಿಗಳಾದ ರಾಜಣ್ಣ ಹಾಗೂ ಪದಾಧಿಕಾರಿಗಳಾದ ಈರಣ್ಣ, ನಾಗರಾಜು,ಆನಂದ ದೇವರಹಟ್ಟಿ ನಾಗರಾಜ, ನಾಗಣ್ಣ, ನಾಗೇಶ್, ನವೀನ್ ಚಿಕ್ಕಣ್ಣ ಕೃಷ್ಣಮೂರ್ತಿ ಹರೀಶ್ ಕರಿಯಣ್ಣ, ಗುರು ಟೈಲರ್, ರಾಜಣ್ಣ, ಕೃಷ್ಣ ಚಂದ್ರಶೇಖರ, ಪ್ರೇಮ್ ಇನ್ನು ಹಲವರು ಮುಖಂಡರು ಉಪಸ್ಥಿತರಿದ್ದರು.