ಸಿದ್ಧಗಂಗಾ ಶ್ರೀಗಳ ದಾಸೋಹ ಸಂಸ್ಕೃತಿ ಅಜರಾಮರ: ಎಲ್.ಸಂದೇಶ್

KannadaprabhaNewsNetwork |  
Published : Jan 05, 2026, 01:30 AM IST
೪ಕೆಎಂಎನ್‌ಡಿ-೨ಮಂಡ್ಯ ಸ್ವರ್ಣಸಂದ್ರ ಬಡಾವಣೆಯ ಶ್ರೀ ಶಿವಕುಮಾರಮಹಾಸ್ವಾಮೀಜಿಯವರ ಉದ್ಯಾನವನದಲ್ಲಿ ಕಾಯಕಯೋಗಿ ಫೌಂಡೇಶನ್ ವತಿಯಿಂದ ಹುಣ್ಣಿಮೆಯ ಅಂಗವಾಗಿ ‘ದಾಸೋಹಹುಣ್ಣಿಮೆ’ ಕಾರ್ಯಕ್ರಮ ನಡೆಯಿತು. | Kannada Prabha

ಸಾರಾಂಶ

ಪ್ರತಿನಿತ್ಯ ೧೨ ಸಾವಿರ ಮಕ್ಕಳಿಗೆ ದಾಸೋಹ ಸೇವೆ ನಡೆಸುತ್ತಿರುವ ಶ್ರೀಗಳ ಸ್ಮರಣಾರ್ಥ ಮಂಡ್ಯದಲ್ಲಿ ಪ್ರತಿ ಹುಣ್ಣಿಮೆಯಲ್ಲೂ ಅನ್ನಸಂತರ್ಪಣೆ ಮಾಡುವ ಪುಣ್ಯದ ಕೆಲಸವನ್ನು ಕಾಯಕಯೋಗಿ ಫೌಂಡೇಶನ್ ಮಾಡುತ್ತಾ ಬಂದಿರುವುದು ಶ್ಲಾಘನೀಯ.

ಕನ್ನಡಪ್ರಭ ವಾರ್ತೆ ಮಂಡ್ಯ

ಹನ್ನೆರಡನೇ ಶತಮಾನದ ಬಸವಣ್ಣನವರ ಕಾಯಕ ಮತ್ತು ದಾಸೋಹವನ್ನು ಇಪ್ಪತ್ತೊಂದನೇ ಶತಮಾನದಲ್ಲಿ ಅಕ್ಷರಶ: ಅನುಷ್ಟಾನಕ್ಕೆ ತಂದು ಹಸಿದುಬಂದವರಿಗೆ ಅನ್ನ ನೀಡುವುದೇ ನಿಜವಾದ ಧರ್ಮ ಎಂಬ ದಿವ್ಯ ಸಂದೇಶವನ್ನು ಜಗತ್ತಿಗೆ ಸಾರಿದ ಕರ್ನಾಟಕರತ್ನ, ಪದ್ಮಭೂಷಣ ಸಿದ್ಧಗಂಗಾಶ್ರೀಗಳ ದಾಸೋಹ ಸಂಸ್ಕೃತಿ ಅಜರಾಮರವಾಗಿದೆ ಎಂದು ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆ ಅಧ್ಯಕ್ಷ ಎಲ್.ಸಂದೇಶ್ ಅಭಿಪ್ರಾಯಿಸಿದರು.

ನಗರದ ಸ್ವರ್ಣಸಂದ್ರ ಬಡಾವಣೆಯ ಶ್ರೀಶಿವಕುಮಾರ ಮಹಾ ಸ್ವಾಮೀಜಿಯವರ ಉದ್ಯಾನವನದಲ್ಲಿ ಕಾಯಕಯೋಗಿ ಫೌಂಡೇಶನ್ ವತಿಯಿಂದ ಹುಣ್ಣಿಮೆಯ ಅಂಗವಾಗಿ ಶಾಸಕ ಪಿ.ರವಿಕುಮಾರ್ ಗಣಿಗ ಅವರ ಜನ್ಮದಿನಾಚರಣೆಯ ಪ್ರಯುಕ್ತ ನಡೆದ ‘ದಾಸೋಹ ಹುಣ್ಣಿಮೆ’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಅನುಭವಮಂಟಪದ ಪ್ರಯೋಗ ಶಾಲೆಯಂತೆ ಶ್ರೀಸಿದ್ದಗಂಗಾಮಠ ಎಲ್ಲಾ ಜಾತಿ, ಧರ್ಮದ ಬಡ ಮಕ್ಕಳಿಗೆ ಅನ್ನ, ಅರಿವು, ಆಸರೆಯನ್ನು ನೀಡಿ ಕೋಟ್ಯಂತರ ಮಕ್ಕಳ ಭವಿಷ್ಯವನ್ನು ರೂಪಿಸುತ್ತಾ ಬಂದಿದೆ. ಪ್ರತಿನಿತ್ಯ ೧೨ ಸಾವಿರ ಮಕ್ಕಳಿಗೆ ದಾಸೋಹ ಸೇವೆ ನಡೆಸುತ್ತಿರುವ ಶ್ರೀಗಳ ಸ್ಮರಣಾರ್ಥ ಮಂಡ್ಯದಲ್ಲಿ ಪ್ರತಿ ಹುಣ್ಣಿಮೆಯಲ್ಲೂ ಅನ್ನಸಂತರ್ಪಣೆ ಮಾಡುವ ಪುಣ್ಯದ ಕೆಲಸವನ್ನು ಕಾಯಕಯೋಗಿ ಫೌಂಡೇಶನ್ ಮಾಡುತ್ತಾ ಬಂದಿರುವುದು ಶ್ಲಾಘನೀಯ ಎಂದರು.

ಜಾಗತಿಕ ಲಿಂಗಾಯತ ಮಹಾಸಭಾ ಕಾರ್ಯಾಧ್ಯಕ್ಷ ಎಂ.ಎಸ್.ಮಂಜುನಾಥ್ ಬೆಟ್ಟಹಳ್ಳಿ ಮಾತನಾಡಿ, ಪರಮಪೂಜ್ಯರ ಹೆಸರು ಮಂಡ್ಯದ ನೆಲದಲ್ಲಿ ಚಿರಸ್ಥಾಯಿಯಾಗಿ ಉಳಿಯಬೇಕೆಂಬ ಸದುದ್ದೇಶದಿಂದ ಪತ್ರಕರ್ತರಾದ ಶಿವಕುಮಾರ್ ಅವರು ನಗರಸಭೆ ಹಾಗೂ ಸರ್ಕಾರದ ಸಹಕಾರದೊಂದಿಗೆ ಹಸಿರಿನಿಂದ ಕಂಗೊಳಿಸುವ ಉದ್ಯಾನವನ್ನು ನಿರ್ಮಾಣ ಮಾಡಿ ಧ್ಯಾನ ಹಾಗೂ ಯೋಗಾಭ್ಯಾಸಕ್ಕಾಗಿ ಧ್ಯಾನಕೇಂದ್ರ ಸ್ಥಾಪಿಸಿರುವುದು ಜನಮೆಚ್ಚುಗೆಯ ಕೆಲಸವಾಗಿದೆ ಎಂದರು.

ಕಾಯಕಯೋಗಿ ಫೌಂಡೇಶನ್ ಅಧ್ಯಕ್ಷ ಎಂ.ಶಿವಕುಮಾರ್ ಮಾತನಾಡಿ, ಮಂಡ್ಯ ನಗರದ ಪ್ರವೇಶದ್ವಾರದಲ್ಲೇ ಇರುವ ಸಿದ್ದಗಂಗಾಶ್ರೀಗಳ ಉದ್ಯಾನವನದಲ್ಲಿ ನೂರಾರು ಮಂದಿ ವಯೋವೃದ್ಧರು, ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸರ್ಕಾರದ ಸಹಕಾರದೊಂದಿಗೆ ನಿರ್ಮಾಣ ಮಾಡಿರುವ ಧ್ಯಾನಕೇಂದ್ರವನ್ನು ಸದುಪಯೋಗ ಪಡಿಸಿಕೊಂಡು ಧ್ಯಾನ ಮತ್ತು ಯೋಗವನ್ನು ಅಭ್ಯಾಸ ಮಾಡುವ ಮೂಲಕ ಮನ:ಶಾಂತಿ ಪಡೆದುಕೊಳ್ಳಬೇಕೆಂದರು.

ದಾಸೋಹಹುಣ್ಣಿಮೆಯ ದಾಸೋಹಿಗಳಾದ ಮುಡಾ ಮಾಜಿ ಸದಸ್ಯ ಸಿ.ದೇವಣ್ಣಪುರ ಅವರಿಗೆ ಸಿದ್ದಗಂಗಾಶ್ರಿ ಸೇವಾಸಮಿತಿ ಅಧ್ಯಕ್ಷ ಎಂ.ಆರ್.ಮಂಜುನಾಥ್ ‘ದಾಸೋಹಸಿರಿ’ ಪ್ರಶಸ್ತಿ ನೀಡಿ ಗೌರವಿಸಿದರು. ವೇದಿಕೆಯಲ್ಲಿ ಜಾಗತಿಕ ಲಿಂಗಾಯತ ಮಹಾಸಭಾ ಪದಾಕಾರಿಗಳಾದ ಎಚ್.ವಿ.ಶಿವರುದ್ರಪ್ಪ, ಮೆಣಸಗೆರೆ ಶಿವಲಿಂಗಯ್ಯ, ಜಿ.ಮಹಾಂತಪ್ಪ, ಅಮೃತಿ ಶಂಕರ್, ತೇಜಸ್, ಕೈಲಾಸಮೂರ್ತಿ, ಬಸವಣ್ಣ, ಉದ್ಯಮಿ ಸುರೇಶ್ ಕಿರಗಂದೂರು, ಜಗದೀಶ್, ರಾಮೇಗೌಡ, ಬಸವರಾಜ್ ಮತ್ತಿತರರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದೀರ್ಘಾವಧಿ ಸಿಎಂ ಸಂಭ್ರಮಕ್ಕೆ ಗೃಹಲಕ್ಷ್ಮಿ ಹಣ ನೀಡಿದ ಮಹಿಳೆ!
4 ಜಿಲ್ಲೆಗಳಲ್ಲಿ 13 ಸಾವಿರ ಕೇಸ್‌ ಬಾಕಿ : ಸಚಿವ ತರಾಟೆ