ಸಂಘಟಿತರಾಗಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸಿ: ಮಾಜಿ ಶಾಸಕ ಪಟ್ಟಣಶೆಟ್ಟಿ

KannadaprabhaNewsNetwork |  
Published : Mar 10, 2025, 12:21 AM IST
ಜಿಲ್ಲಾಮಟ್ಟದ ಶಿವಶಿಂಪಿ ಸಮಾಜದ ಸಮಾವೇಶ, ದಾಸಿಮಯ್ಯನವರ ಜಯಂತಿ ಕಾರ್ಯಕ್ರಮವನ್ನು ಎಸ್.ವಿ.ಪಿ.ಸಂಸ್ಥೆಯ ಚೇರಮನ್ ಎ.ಸಿ.ಪಟ್ಟಣದ ಮತ್ತು ಗಣ್ಯರು ಉದ್ಘಾಟಿಸಿದರು. | Kannada Prabha

ಸಾರಾಂಶ

ಶಿವಶಿಂಪಿ ಸಮಾಜ ಬಾಂಧವರು ಶ್ರಮಿಕರು. ಎಲ್ಲರೂ ಸಂಘಟಿತರಾಗಿ, ತಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸುವ ಮೂಲಕ ಸರಕಾರದ ಸೌಲಭ್ಯ ಪಡೆದುಕೊಳ್ಳಬೇಕು ಎಂದು ಮಾಜಿ ಶಾಸಕ ಎಂ.ಕೆ. ಪಟ್ಟಣಶೆಟ್ಟಿ ಸಲಹೆ ನೀಡಿದರು.

ಕನ್ನಡಪ್ರಭ ವಾರ್ತೆ ಬಾದಾಮಿ

ಶಿವಶಿಂಪಿ ಸಮಾಜ ಬಾಂಧವರು ಶ್ರಮಿಕರು. ಎಲ್ಲರೂ ಸಂಘಟಿತರಾಗಿ, ತಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸುವ ಮೂಲಕ ಸರಕಾರದ ಸೌಲಭ್ಯ ಪಡೆದುಕೊಳ್ಳಬೇಕು ಎಂದು ಮಾಜಿ ಶಾಸಕ ಎಂ.ಕೆ. ಪಟ್ಟಣಶೆಟ್ಟಿ ಸಲಹೆ ನೀಡಿದರು.

ಭಾನುವಾರ ನಗರದ ಎಸ್.ವಿ.ಪಿ. ಸಂಸ್ಥೆಯ ಬಸವಭವನದಲ್ಲಿ ಜಿಲ್ಲಾ ಶಿವಶಿಂಪಿ ಸಮಾಜದ ವತಿಯಿಂದ ಹಮ್ಮಿಕೊಂಡಿದ್ದ ಜಿಲ್ಲಾ ಶಿವಶಿಂಪಿ ಸಮಾವೇಶ, ಶಿವದಾಸಿಮಯ್ಯನವರ ಜಯಂತಿ, ಪ್ರತಿಭಾ ಪುರಸ್ಕಾರ, ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಬಟ್ಟೆ ಹೊಲಿದು ಜೀವನ ನಡೆಸುವ ನಿಮ್ಮ ಸಮಾಜದವರು ಶ್ರಮಿಕರು. ಸಣ್ಣ ಸಮಾಜ ಜಿಲ್ಲೆಯಲ್ಲಿ ಉತ್ತಮವಾಗಿ ಸಂಘಟಿತರಾಗುತ್ತಿದ್ದೀರಿ. ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡಿ ಉತ್ತಮ ಪ್ರಜೆಗಳಾಗಿ ಮಾಡಬೇಕು ಎಂದು ಹೇಳಿದರು.

ಶ್ರೀ ವೀರಪುಲಿಕೇಶಿ ವಿದ್ಯಾವರ್ಧಕ ಸಂಸ್ಥೆಯ ಚೇರಮನ್ ಎ.ಸಿ.ಪಟ್ಟಣದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಮಾಜವನ್ನು ಒಟ್ಟಾಗಿ ಮುನ್ನಡೆಸುವುದು ತುಂಬಾ ಕಷ್ಟ. ಮಹಿಳೆಯರು ಸೇರಿದಂತೆ ಎಲ್ಲರೂ ಸಮಾಜವನ್ನು ಮುನ್ನಡೆಸಲು ಸಹಾಯ, ಸಹಕಾರ ಅಗತ್ಯವಾಗಿದೆ ಎಂದು ಹೇಳಿದರು.

ಪಿಕಾರ್ಡ್‌ ಬ್ಯಾಂಕ್ ಅಧ್ಯಕ್ಷ ಮಹಾಂತೇಶ ಮಮದಾಪೂರ, ಜಿಪಂ ಮಾಜಿ ಉಪಾಧ್ಯಕ್ಷ ಹನಮಂತ ಮಾವಿನಮರದ ಮಾತನಾಡಿ, ಈ ಹಿಂದಿನಂತೆ ಮುಂಬರುವ ದಿನಗಳಲ್ಲಿಯೂ ಸಹಿತ ಶಿವಶಿಂಪಿ ಸಮಾಜ ಬಾಂಧವರಿಗೆ ಸಹಕಾರ ನೀಡುವುದಾಗಿ ಭರವಸೆ ನೀಡಿದರು.

ಶಿವಯೋಗಮಂದಿರ ಸಂಸ್ಥೆಯ ಉಪಾಧ್ಯಕ್ಷ ಸದಾಶಿವ ಸ್ವಾಮೀಜಿ, ನವಗೃಹ ಹಿರೇಮಠದ ಶಿವಪೂಜಾ ಶಿವಾಚಾರ್ಯ ಸಾನ್ನಿಧ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ನಿವೃತ್ತ ಪ್ರಾಧ್ಯಾಪಕ ಡಾ.ಮಲ್ಲಿಕಾರ್ಜುನ ಜವಳಿ, ಅಶೋಕ ದೊಮ್ಮಲೂರು ಉಪನ್ಯಾಸ ನೀಡಿದರು. ತಾಲೂಕಾ ಶಿವಶಿಂಪಿ ಸಮಾಜದ ಅಧ್ಯಕ್ಷ ನಾಗಪ್ಪ ಶಿವಣಗಿ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿ, ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳನ್ನು, ಸಾಧಕರನ್ನು ಸನ್ಮಾನಿಸಿ, ಗೌರವಿಸಲಾಯಿತು.

ಶಿವಶಿಂಪಿ ಸಮಾಜದ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಕೋಲಾರ ಪ್ರಸ್ತಾವಿಕವಾಗಿ ಸಮಾಜದ ಸಮಸ್ಯೆಗಳು, ಸಮಾಜವನ್ನು ಮುನ್ನಡೆಸುವ ಕುರಿತು ಮಾತನಾಡಿದರು. ಜಿಲ್ಲೆಯ ವಿವಿದ ತಾಲೂಕುಗಳಿಂದ ಸಹಸ್ರಾರು ಶಿವಶಿಂಪಿ ಸಮಾಜದವರು ಭಾಗವಹಿಸಿದ್ದರು.

ವೇದಿಕೆಯ ಮೇಲೆ ಪುರಸಭೆ ಸದಸ್ಯ ಮಂಜುನಾಥ ಹೊಸಮನಿ, ಫಾರೂಖ ದೊಡಮನಿ, ಚನ್ನಬಸಪ್ಪ ಅಥಣಿ, ವೀರಣ್ಣ ಬೆಳವಣಿಕಿ, ವಿನೋದ ಲೋಣಿ, ಶರಣಪ್ಪ ತಾಳಿಕೋಟಿ, ವೀರಣ್ಣ ಗಂಗಾವತಿ, ಅಶೋಕ ಶಿವಶಿಂಪಿ, ಎಸ್.ಎಸ್.ಶಿರಶಿ, ಗಣೇಶ ಕುಬಸದ, ವೀರಣ್ಣ ಮುತ್ತಗಿ, ರಮೇಶ ಹೆಬ್ಬಳ್ಳಿ, ಶಿವಾನಂದ ಗಂಗಾವತಿ, ಸಂಗಮೇಶ ಸಿಂದಗಿ, ಸಂಗಮೇಶ ಅಂದೇಲಿ, ಚಂದ್ರಶೇಖರ ಸೂಡಿ, ಬಸವಂತಪ್ಪ ಶಿವಶಿಂಪಿ ಸೇರಿದಂತೆ ಇತರರು ಇದ್ದರು.

ಮೆರವಣಿಗೆ: ಬೆಳಗ್ಗೆ 8 ಗಂಟೆಗೆ ಶಿವಾನಂದ ಮಠದಿಂದ ಬಸವಭವನದವರೆಗೆ ಶಿವದಾಸಿಮಯ್ಯನವರ ಭಾವಚಿತ್ರದ ಮೆರವಣಿಗೆ, ಕುಂಭಮೇಳ ಮೆರವಣಿಗೆ ಸಕಲ ಸಂಗೀತ ವಾದ್ಯಗಳ ಮೂಲಕ ಮುಖ್ಯರಸ್ತೆಯ ಮೂಲಕ ಬಸವಭವನಕ್ಕೆ ಬಂದು ತಲುಪಿತು. ಈಲ್ಲೆ ವಿವಿಧ ತಾಲೂಕಿನಿಂದ ಶಿವಶಿಂಪಿ ಸಮಾಜ್ವರು ಭಾಗವಹಿಸಿದ್ದರು. ಶಿವಶಿಂಪಿ ಸಮಾಜವನ್ನು ಚಿನ್ನಪ್ಪರಡ್ಡಿ ವರದಿ ಪ್ರಕಾರ ಒಬಿಸಿ ಪಟ್ಟಿಗೆ ಸೇರಿಸಬೇಕು. ಶಿವದಾಸಿಮಯ್ಯನವರ ಅಧ್ಯಯನ ಕೇಂದ್ರ ಸ್ಥಾಪನೆ ಮಾಡಬೇಕು. ರಾಜಕೀಯವಾಗಿ ಶಿವಶಿಂಪಿ ಸಮಾಜಕ್ಕೆ ಅವಕಾಶ ನೀಡಬೇಕು. ಬಡಮಕ್ಕಳನ್ನು ದತ್ತು ಪಡೆದು ಗುಣಮಟ್ಟದ ಶಿಕ್ಷಣ ನೀಡಲು ಯೋಜನೆ ಹಾಕಿಕೊಳ್ಳಲಾಗಿದೆ

-ಮಲ್ಲಿಕಾರ್ಜುನ ಲೋಣಿ, ಜಿಲ್ಲಾಧ್ಯಕ್ಷರು ಶಿವಶಿಂಪಿ ಸಮಾಜ ಬಾಗಲಕೋಟೆಶಿವಶಿಂಪಿ ಸಮಾಜ ಸಣ್ಣ ಸಮಾಜ. ನಮ್ಮ ಸಮಾಜಕ್ಕೆ ರಾಜಕೀಯವಾಗಿ ಶಾಸಕರು, ವಿಧಾನಪರಿಷತ್ ಸದಸ್ಯರು ಇಲ್ಲ. ಮುಂಬರುವ ದಿನಮಾನಗಳಲ್ಲಿ ನಮ್ಮ ಸಮಾಜಕ್ಕೆ ಯಾವುದೇ ರಾಜಕೀಯ ಪಕ್ಷದಿಂದ ಗುರುತಿಸಿ ಟಿಕೆಟ್ ನೀಡಿ ಆಯ್ಕೆ ಮಾಡಲು ಅವಕಾಶ ನೀಡಬೇಕು

-ನಾಗಪ್ಪ ಶಿವಣಗಿ, ತಾಲೂಕಾಧ್ಯಕ್ಷರು, ಶಿವಶಿಂಪಿ ಸಮಾಜ ಬಾದಾಮಿ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ