ಜನರ ಜೀವ ಉಳಿಸುವ ಸೇವಾ ಕಾರ್ಯ ಆಯೋಜಿಸಿ: ರೈತ ಕವಿ ದೊ.ಚಿ.ಗೌಡ ಸಲಹೆ

KannadaprabhaNewsNetwork |  
Published : Nov 22, 2025, 01:45 AM IST
21ಕೆಎಂಎನ್ ಡಿ12  | Kannada Prabha

ಸಾರಾಂಶ

ಕನ್ನಡ ರಾಜ್ಯೋತ್ಸವದ ಜೊತೆಗೆ ಜೀವ ಉಳಿಸುವ ಸೇವಾ ಕಾರ್ಯಕ್ರಮಗಳಾದ ರಕ್ತದಾನ ಶಿಬಿರ, ಆರೋಗ್ಯ ತಪಾಸಣಾ ಶಿಬಿರಗಳನ್ನು ಹೆಚ್ಚು ಹೆಚ್ಚು ಆಯೋಜಿಸಿ ಸಾರ್ವಜನಿಕರ ಸೇವೆಗೆ ಮುಂದಾಗಬೇಕು ಎಂದು ಕರೆ ನೀಡಿದರು.

ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ

ಜನರ ಜೀವ ಉಳಿಸುವ ಸೇವಾ ಕಾರ್ಯಗಳನ್ನು ಹೆಚ್ಚು ಹೆಚ್ಚು ಆಯೋಜಿಸಬೇಕು ಎಂದು ರೈತ ಕವಿ ದೊ.ಚಿ.ಗೌಡ ಸಲಹೆ ನೀಡಿದರು.

ಸಮೀಪದ ಗುಡಿಗೆರೆ ಗೇಟ್ ಬಳಿಯ ಜೀವನ್ ಮಾಲೀಕತ್ವದ ಮೂನ್ ಡಿಲೈಟ್ ಫ್ಯಾಮಿಲಿ ರೆಸ್ಟೋರೆಂಟ್ ಹಾಗೂ ಸರ್ಕಾರಿ ರಕ್ತನಿಧಿ ಕೇಂದ್ರದ ವತಿಯಿಂದ ಕನ್ನಡ ರಾಜ್ಯೋತ್ಸವ ಹಾಗೂ ಸ್ವಯಂ ಪ್ರೇರಿತ ರಕ್ತದಾನ ಶಿಬಿರದಲ್ಲಿ ಭಾಗವಹಿಸಿ ಮಾತನಾಡಿದರು.

ಕನ್ನಡ ರಾಜ್ಯೋತ್ಸವದ ಜೊತೆಗೆ ಜೀವ ಉಳಿಸುವ ಸೇವಾ ಕಾರ್ಯಕ್ರಮಗಳಾದ ರಕ್ತದಾನ ಶಿಬಿರ, ಆರೋಗ್ಯ ತಪಾಸಣಾ ಶಿಬಿರಗಳನ್ನು ಹೆಚ್ಚು ಹೆಚ್ಚು ಆಯೋಜಿಸಿ ಸಾರ್ವಜನಿಕರ ಸೇವೆಗೆ ಮುಂದಾಗಬೇಕು ಎಂದು ಕರೆ ನೀಡಿದರು.

ಇನ್ನೊಬ್ಬರ ಜೀವಕ್ಕೆ ನೆರವಾಗಲು ದೈಹಿಕ, ಶಾರೀರಿಕವಾಗಿ ಸದೃಢ ಹೊಂದಲು ರಕ್ತದಾನ ಮಾಡಬೇಕು. ಪ್ರತಿ ಮೂರು ತಿಂಗಳಿಗೊಮ್ಮೆ , ಆರೋಗ್ಯ ತಪಾಸಣೆಗೆ ಒಳಗಾಗಿ ಆರೊಗ್ಯವಂತ ಜೀವನ ನಡೆಸಬೇಕು ಎಂದು ಕರೆ ನೀಡಿದರು.

ಭಾರತೀ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಪ್ರೊ.ಬಿ.ಎಸ್.ಬೋರೇಗೌಡ ಮಾತನಾಡಿ, ಕನ್ನಡ ನೆಲ, ಜಲ, ನಾಡು ,ನುಡಿಗಾಗಿ ಹಲವು ಮಹನೀಯರ ಹೋರಾಟ ಹಾಗೂ ತ್ಯಾಗದ ಫಲವಾಗಿ ನಾವು ಇಂದು ಕನ್ನಡ ರಾಜ್ಯೋತ್ಸವವನ್ನು ಆಚರಿಸಿಕೊಂಡು ಬರುತ್ತಿದ್ದೇವೆ ಎಂದರು.

ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರನ್ನು ಅಭಿನಂದಿಸಿ ಸನ್ಮಾನಿಸಲಾಯಿತು. ರಕ್ತದಾನ ಶಿಬಿರದಲ್ಲಿ ಸುಮಾರು 70ಕ್ಕೂ ಹೆಚ್ಚಿನ ಯೂನಿಟ್ ರಕ್ತ ಸಂಗ್ರಹಿಸಲಾಯಿತು.

ಈ ಸಂದರ್ಭದಲ್ಲಿ ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಅಣ್ಣೂರು ಮಹೇಂದ್ರ, ಕರ್ನಾಟಕ ಪತ್ರಕರ್ತ ಸಂಘದ ಜಿಲ್ಲಾ ಉಪಾಧ್ಯಕ್ಷ ರವಿ ಸಾವಂದಿಪುರ, ಸಮತ ಸೈನಿಕ ದಳದ ಜಿಲ್ಲಾಧ್ಯಕ್ಷ ಕರಡಕೆರೆ ಯೋಗೇಶ್, ಮಂಡ್ಯ ಜೀವಧಾರೆ ಟ್ರಸ್ಟ್ ನಟರಾಜು, ಮಂಡ್ಯ ರಕ್ತನಿಧಿ ಕೇಂದ್ರ ರಫೀಕ್, , ಸಮಾಜ ಸೇವಕಿ ಚೈತ್ರ ಶಶಿಧರ್, ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷ ಮಣಿಗೆರೆ ರಾಮಚಂದ್ರ, ಆಸರೆ ಸೇವಾ ಟ್ರಸ್ಟ್ ಅಧ್ಯಕ್ಷ ರಘು ವೆಂಕಟೇಗೌಡ, , ಟಿಬಿಹಳ್ಳಿ ಸಂತೋಷ್, ಕ್ಯಾತಘಟ್ಟ ಸುನೀಲ್, ಮುಡಿನಹಳ್ಳಿ ಆನಂದ್, ಕೆ.ಪಿ.ದೊಡ್ಡಿ ಸಿದ್ದರಾಜು, ಗುರುದೇವರಹಳ್ಳಿ ನವೀನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

PREV

Recommended Stories

ತಂತ್ರಜ್ಞಾನವನ್ನು ಒಳ್ಳೆಯದಕ್ಕೆ ಬಳಸಿ: ಶಾಸಕ ಅಶೋಕ ಪಟ್ಟಣ
ಸೈಕ್ಲಿಂಗ್‌ ಪಟುಗಳಿಗೆ ಸಂವಿಧಾನ ಪಾಠ ಮಾಡಿದ ಸಚಿವ ಸಂತೋಷ ಲಾಡ್