ಜಾನಪದ ಕಲಾವಿದರು, ಸಂಶೋ ಧಕರು ಹಾಗೂ ಯುವಜನರನ್ನು ಒಳಗೊಂಡಂತೆ ಸಂಘಟಿತವಾಗಿ ಕಾರ್ಯನಿರ್ವಹಿಸುವ ಮೂಲಕ ಗ್ರಾಮೀಣ ಕಲೆ, ಸಂಪ್ರದಾಯ, ಹಾಡು, ನೃತ್ಯ ಹಾಗೂ ಮೌಖಿಕ ಪರಂಪರೆಗಳನ್ನು ದಾಖಲಿಸಿ ಸಂರಕ್ಷಿಸುವ ಅಗತ್ಯವಿದೆ.
ಹುಬ್ಬಳ್ಳಿ:
ಜಾನಪದವು ನಮ್ಮ ಜನಜೀವನ, ಸಂಸ್ಕೃತಿ, ಆಚರಣೆ, ಕಲೆ ಮತ್ತು ಪರಂಪರೆಯ ಜೀವಂತ ಪ್ರತಿಬಿಂಬವಾಗಿದೆ ಎಂದು ಕನ್ನಡ ಜಾನಪದ ಪರಿಷತ್ ರಾಜ್ಯಾಧ್ಯಕ್ಷ ಡಾ. ಜಾನಪದ ಎಸ್. ಬಾಲಾಜಿ ಹೇಳಿದರು.ನವನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕನ್ನಡ ಜಾನಪದ ಪರಿಷತ್ ರಾಜ್ಯ ಘಟಕ ಹಾಗೂ ಜಿಲ್ಲಾ ಘಟಕದ ವತಿಯಿಂದ ನಡೆದ ಜಿಲ್ಲಾ ಘಟಕದ ಪದಪ್ರದಾನ ಹಾಗೂ ವಿಶ್ವ ಜಾನಪದ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಜಾನಪದ ಕಲೆ ಹಾಗೂ ಜ್ಞಾನವನ್ನು ಮುಂದಿನ ಪೀಳಿಗೆಗೆ ತಲುಪಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದ ಅವರು, ಜಾನಪದ ಕಲಾವಿದರು, ಸಂಶೋ ಧಕರು ಹಾಗೂ ಯುವಜನರನ್ನು ಒಳಗೊಂಡಂತೆ ಸಂಘಟಿತವಾಗಿ ಕಾರ್ಯನಿರ್ವಹಿಸುವ ಮೂಲಕ ಗ್ರಾಮೀಣ ಕಲೆ, ಸಂಪ್ರದಾಯ, ಹಾಡು, ನೃತ್ಯ ಹಾಗೂ ಮೌಖಿಕ ಪರಂಪರೆಗಳನ್ನು ದಾಖಲಿಸಿ ಸಂರಕ್ಷಿಸುವ ಅಗತ್ಯವಿದೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲರಾದ ಪ್ರೊ. ವೈ.ಎಫ್. ಹೊಸಮನಿ, ಇಂದು ಗ್ರಾಮೀಣ ಬದುಕನ್ನು ನಗರದ ಜನರು ಮರೆಯುತ್ತಿದ್ದಾರೆ. ಮುಂದಿನದಿನಗಳಲ್ಲಿ ಮತ್ತೆ ಗ್ರಾಮೀಣ ಬದುಕಿಗೆ ಬರಲೇಬೇಕಾಗುತ್ತದೆ ಎಂದು ತಿಳಿಸಿದರು.
ಡಾ. ಜ್ಯೋತಿಲಿಂಗ ಹೊಸಕಟ್ಟಿ ಅವರು ಜಾನಪದ ಉಗಮ ಉಳಿವಿನ ಕುರಿತು ಉಪನ್ಯಾಸ ನೀಡಿದರು.
ಕನ್ನಡ ಜಾನಪದ ಪರಿಷತ್ ರಾಜ್ಯ ಕಾರ್ಯದರ್ಶಿ ಪ್ರೊ. ಕೆ.ಎಸ್. ಕೌಜಲಗಿ ಮಾತನಾಡಿ, ವಿದ್ಯಾರ್ಥಿಗಳು ಜಾನಪದ ಬದುಕನ್ನು ಕಟ್ಟಿಕೊಂಡರೆ ಜೀವನ ಉತ್ತಮವಾಗಿರುತ್ತದೆ ಎಂದು ತಿಳಿಸಿದರು. ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳಿಗೆ ಪದಪ್ರಧಾನ ನೆರವೇರಿಸಲಾಯಿತು. ಕಾರ್ಯಕ್ರಮದಲ್ಲಿವಿವಿಧ ಗಣ್ಯರು, ಜಾನಪದ ಕಲಾವಿದರು, ಸಾಹಿತ್ಯಾಸಕ್ತರು, ಸಂಶೋಧಕರು ಹಾಗೂ ಕನ್ನಡ ಜಾನಪದ ಪರಿಷತ್ನ ಪದಾಧಿಕಾರಿಗಳು ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.