ಮಡಿಕೇರಿ: ಕೊಡಗಿನ ಯೋಗೇಶ್ (22) ಎಂಬ ಯುವಕ ಸಾವಿನಲ್ಲೂ ಸಾರ್ಥಕತೆ ಮೆರೆದು ಇತರರಿಗೆ ಜೀವದಾನ ನೀಡಿದ ಯುವಕನಿಗೆ ನಡೆದಿದೆ.
ಬಳಿಕ ಆತನನ್ನು ಮಡಿಕೇರಿಗೆ ಕರೆತಂದು ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರಿಸಲಾಯಿತು. ಆದರೆ, ಈ ದುಃಖದ ನಡುವೆಯೂ ಯೋಗೇಶ್ ಕುಟುಂಬ ತೆಗೆದುಕೊಂಡ ನಿರ್ಧಾರ ಮಾತ್ರ ಎಲ್ಲರ ಮನಗೆದ್ದಿದೆ. ತಮ್ಮ ಮನೆಯ ಮಗನ ಬದುಕು ಮರಳಿ ಸಿಗದಿದ್ದರೂ, ಆತನ ಅಂಗಾಂಗಗಳ ಮೂಲಕ ಬೇರೆಯವರ ಬದುಕು ಉಳಿಯಲಿ ಎಂಬ ಮಹದಾಸೆಯಿಂದ ಕುಟುಂಬ ಅಂಗಾಂಗ ದಾನಕ್ಕೆ ಸಮ್ಮತಿಸಿತು.
ಯೋಗೇಶ್ ಹಲವಾರು ವರ್ಷಗಳಿಂದ ರಕ್ತದಾನ ಮಾಡುತ್ತಿದ್ದ. ಈತನ ಅಂಗಾಂಗ ದಾನಕ್ಕೆ ಕುಟುಂಬ ನಿರ್ಧಾರ ಮಾಡಿತು. ಬುಧವಾರ ಮಡಿಕೇರಿಯ ವೈದ್ಯಕೀಯ ಆಸ್ಪತ್ರೆಯಲ್ಲಿ ಅಂಗಾಂಗ ದಾನ ಪ್ರಕ್ರಿಯೆ ನಡೆಸಿದ ವೈದ್ಯರ ತಂಡ ಯೋಗೇಶ್ ದೇಹದಿಂದ ಲಿವರ್ ಹಾಗೂ ಕಣ್ಣುಗಳನ್ನು ತೆಗೆದು ಮೈಸೂರಿನ ಮಣಿಪಾಲ್ ಆಸ್ಪತ್ರೆಗೆ ರವಾನೆ ಮಾಡಿದೆ. ಮೃತದೇಹಕ್ಕೆ ಅಗಲಿದ ಯೋಗೇಶ್ ಗೆ ವೈದ್ಯರು, ನರ್ಸ್‌ಗಳು, ಸಾರ್ವಜನಿಕರು ಸೇರಿದಂತೆ ನೂರಾರು ಜನ ಪುಷ್ಪ ನಮನ ಸಲ್ಲಿಸಿದರು. ಇಡೀ ಆಸ್ಪತ್ರೆಯ ಎಲ್ಲೆಡೆ ನಿಂತು ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಲಾಯಿತು.