ಕನ್ನಡಪ್ರಭ ವಾರ್ತೆ ತುಮಕೂರು ಕವಿತೆ, ಕವನ, ಕತೆಗಳನ್ನು ಕದ್ದು ಬರೆಯುವುದಕ್ಕಿಂತ, ಓದಿ ತಿಳಿದು ತಮ್ಮ ಸ್ವಂತ ಅನುಭವಗಳಲ್ಲಿ ಬರೆಯಬೇಕು. ಕೃತಿಚೌರ್ಯ ಮಾಡುವ ಅಭ್ಯಾಸವನ್ನು ಇಂದಿನ ಯುವಕರು ಕೈ ಬಿಡಬೇಕು. ಸಾಹಿತ್ಯರಚನೆಗೆ ಸ್ವಂತಿಕೆ ಅಗತ್ಯ ಎಂದು ತುಮಕೂರು ವಿವಿ ಕಾಲೇಜಿನ ಸಾಂಸ್ಕೃತಿಕ ಘಟಕದ ಸಂಯೋಜಕ ಪ್ರೊ. ಹೊನ್ನಗಾನಹಳ್ಳಿ ಕರಿಯಣ್ಣ ಅವರು ಕರೆ ನೀಡಿದರು. ತುಮಕೂರು ವಿಶ್ವವಿದ್ಯಾನಿಲಯ ವಿಜ್ಞಾನಕಾಲೇಜಿನ ಸಾಂಸ್ಕೃತಿಕ ಚಟುವಟಿಕೆ ಸಮಿತಿಯು ಆಯೋಜಿಸಿದ್ದ ಉದಯೋನ್ಮುಖ ಅಂತರ್‌ಕಾಲೇಜು ಸ್ವರಚಿತ ಕವನ ವಾಚನ ಸ್ಪರ್ಧೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಅನ್ಯರ ಸಾಹಿತ್ಯ ಶೈಲಿಯನ್ನುಅನುಸರಿಸುವುದಕ್ಕಿಂತ ನಿಮ್ಮದೇ ಆದ ಸಾಹಿತ್ಯ ಶೈಲಿಯನ್ನು ರೂಢಿಸಿಕೊಳ್ಳಬೇಕು.ನಿಮ್ಮ ಬರಹಗಳನ್ನು ಓದಿದ ಕೂಡಲೇ ಓದುಗರು ನಿಮ್ಮನ್ನುಗುರುತಿಸುವಂತಾಗಬೇಕು. ನಮ್ಮದೇ ನೆಲ, ಜಲ, ಸಂಸ್ಕೃತಿ ಮತ್ತು ನಿಮ್ಮದೇ ವಿವೇಚನೆಗೆ ತಕ್ಕಂತೆ ಸಾಹಿತ್ಯರಚನೆ ಮಾಡಬೇಕುಎಂದರು.
ಡಾ.ನರೇಂದ್ರಎನ್. ಅವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ವರ್ಷಿಣಿ ಡಿ. ಎಸ್. ಪ್ರಾರ್ಥಿಸಿದರು.ಡಾ.ನಟರಾಜು ಜೆಆರ್ ಕಾರ್ಯಕ್ರಮ ನಿರೂಪಿಸಿ, ಡಾ.ಅಶ್ವಥ ಕೆ ಅವರು ವಂದಿಸಿದರು.