ಮಾಗಡಿ: ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಆದರ್ಶದೊಂದಿಗೆ ಯುವ ಬೆಂಗಳೂರು ಟ್ರಸ್ಟ್ ಗ್ರಾಮೀಣ ಸರ್ಕಾರಿ ಶಾಲೆಗಳನ್ನು ಉಳಿಸುವ ನಿಟ್ಟಿನಲ್ಲಿ ಉಚಿತ ಕಲಿಕಾ ಸಾಮಗ್ರಿ ವಿತರಿಸುತ್ತಿದೆ ಎಂದು ಯುವ ಬೆಂಗಳೂರು ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಕಿರಣ್ ಸಾಗರ್ ಹೇಳಿದರು.
ಯುವ ಬೆಂಗಳೂರು ಟ್ರಸ್ಟ್ ಉಪಾಧ್ಯಕ್ಷ ಸುನೀಲ್ ಮಾತನಾಡಿ, ಸರ್ಕಾರಿ ಶಾಲೆಗಳು ಮುಂದಿನ ದಿನಗಳಲ್ಲಿ ಪೋಷಕರು ಮಕ್ಕಳನ್ನು ಸೇರಿಸಲು ಕ್ಯೂನಲ್ಲಿ ಬರುವಂತಹ ವಾತಾವರಣ ಕಲ್ಪಿಸಬೇಕು. ಖಾಸಗಿ ಶಾಲೆಗೆ ಪೈಪೋಟಿ ನೀಡುವ ನಿಟ್ಟಿನಲ್ಲಿ ಸರ್ಕಾರಿ ಶಾಲೆಗೂ ಮೂಲ ಸೌಲಭ್ಯಗಳು ಕಲ್ಪಿಸಿ ಮಕ್ಕಳ ಉನ್ನತ ವಿದ್ಯಾಭ್ಯಾಸಕ್ಕೆ ಯುವ ಬೆಂಗಳೂರು ಟ್ರಸ್ಟ್ ಪ್ರತಿ ವರ್ಷವೂ ಕೂಡ ಕಲಿಕಾ ಸಾಮಗ್ರಿ ವಿಸ್ತರಿಸುತ್ತಿದೆ ಎಂದರು.
ರಾಮನಗರ, ತುಮಕೂರು, ಹಾಸನ, ಚಿಕ್ಕಬಳ್ಳಾಪುರ ಮೈಸೂರು, ರಾಯಚೂರು ಜಿಲ್ಲೆಯವರೆಗೂ ಈ ಶೈಕ್ಷಣಿಕ ಚಟುವಟಿಕೆ ವಿಸ್ತರಿಸಿದೆ. ತಾವು ದುಡಿದ ಹಣದಿಂದ ಶಾಲೆ ಅಭಿವೃದ್ಧಿಪಡಿಸುತ್ತಿದ್ದು ಮಕ್ಕಳು ಇದರ ಪ್ರಯೋಜನ ಪಡೆದುಕೊಂಡಾಗ ಮಾತ್ರ ನಾವು ಮಾಡುತ್ತಿರುವ ಸೇವೆಗೆ ಸಾರ್ಥಕತೆ ಸಿಗಲಿದೆ ಎಂದರು.ತಾಲೂಕು ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಜಯರಾಂ, ಟ್ರಸ್ಟ್ ನ ಕಾರ್ಯದರ್ಶಿ ಶ್ವೇತಾ, ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಶಿವರಾಮ್, ವೆಂಕಟಾಚಲಯ್ಯ, ಬಸವರಾಜ್, ನರಸಿಂಹಮೂರ್ತಿ, ಯುವ ಬೆಂಗಳೂರು ಟ್ರಸ್ಟ್‌ನ ರಾಕೇಶ್, ರಾಹುಲ್, ತೇಜಸ್, ರೋಷನ್, ನಂದೀಶ್, ಭವ್ಯ, ರೋಹಿತ್, ಶ್ರೀನಿವಾಸ್, ಶಶಿಧರ್, ಸ್ವಯಂಸೇವಕರು ಇತರರು ಪಾಲ್ಗೊಂಡಿದ್ದರು.