ಬೀರೂರು ಹಲವು ದಶಕಗಳಿಂದಲೂ ಬೀರೂರಿನಲ್ಲಿ ಎಲ್ಲಾ ಸಮಾಜದ ಪ್ರಮುಖರು ಸೇರಿದ ಹಾಗೇ ನಮ್ಮ ಪೂರ್ವಿಕರು ಮನುಷ್ಯರು ಹಾಗೂ ದೇವರನ್ನು ಯಾವುದೇ ಜಾತಿತಾರತಮ್ಯ ವಿಲ್ಲದೆ ಒಗ್ಗೂಡಿಸಿರುವ ಪರಿಣಾಮ ನಾವೆಲ್ಲ ಭಾವೈಕ್ಯತೆಗೆ ಸಾಕ್ಷಿಯಾಗಿರುವುದು ಸಂತಸ ತಂದಿದೆ ಎಂದು ಮಾಜಿ ಶಾಸಕ ಹಾಗೂ ಕಾಂಗ್ರೆಸ್ ಹಿರಿಯ ಮುಖಂಡ ಕೆ.ಬಿ.ಮಲ್ಲಿಕಾರ್ಜುನ್ ತಿಳಿಸಿದರು.
ಸಂಗೊಳ್ಳಿ ರಾಯಣ್ಣನ ಪ್ರತಿಮೆ ನಿರ್ಮಾಣಕ್ಕೆ ಭೂಮಿಪೂಜೆ
ಕನ್ನಡಪ್ರಭ ವಾರ್ತೆ,ಬೀರೂರು ಹಲವು ದಶಕಗಳಿಂದಲೂ ಬೀರೂರಿನಲ್ಲಿ ಎಲ್ಲಾ ಸಮಾಜದ ಪ್ರಮುಖರು ಸೇರಿದ ಹಾಗೇ ನಮ್ಮ ಪೂರ್ವಿಕರು ಮನುಷ್ಯರು ಹಾಗೂ ದೇವರನ್ನು ಯಾವುದೇ ಜಾತಿತಾರತಮ್ಯ ವಿಲ್ಲದೆ ಒಗ್ಗೂಡಿಸಿರುವ ಪರಿಣಾಮ ನಾವೆಲ್ಲ ಭಾವೈಕ್ಯತೆಗೆ ಸಾಕ್ಷಿಯಾಗಿರುವುದು ಸಂತಸ ತಂದಿದೆ ಎಂದು ಮಾಜಿ ಶಾಸಕ ಹಾಗೂ ಕಾಂಗ್ರೆಸ್ ಹಿರಿಯ ಮುಖಂಡ ಕೆ.ಬಿ.ಮಲ್ಲಿಕಾರ್ಜುನ್ ತಿಳಿಸಿದರು.ಪಟ್ಟಣದಲ್ಲಿ ಶುಕ್ರವಾರ ರಾಷ್ಟ್ರೀಯ ಯ ಹೆದ್ದಾರಿ ಅಭಿಷೇಕ್ ಟಿಂಬರ್ ಮುಂಭಾಗ ಕುರುಬ ಸಮಾಜದಿಂದ ನಿರ್ಮಾಣ ವಾಗುತ್ತಿರುವ ಸಂಗೊಳ್ಳಿರಾಯಣ್ಣನ ಪ್ರತಿಮೆ ನಿರ್ಮಾಣ ಭೂಮಿಪೂಜೆಯಲ್ಲಿ ಮಾತನಾಡಿದರು.ಪಟ್ಟಣದಲ್ಲಿ ವಿವಿಧ ಜಾತಿಯ ಹಲವು ದೇವರಿದ್ದರು ಪ್ರಮುಖ ಕಾರ್ಯಕ್ರಮಗಳಲ್ಲಿ ಒಂದು ದೇವರು ಹೊರಡದಿದ್ದರೂ ಇನ್ನೊಂದು ದೇವರು ಹೊರಡದು ಇದು ನಮ್ಮೂರಲ್ಲಿನ ಭಾವೈಕ್ಯತೆಗೆ ಸಾಕ್ಷಿ. ಎಲ್ಲಾ ಜಾತಿ ಜನರು ಒಮ್ಮತದಿಂದ ವಾಸಿಸುತ್ತಿರುವುದು ಬೀರೂರಿನ ಹೆಸರನ್ನು ಮೊದಲ ಸ್ಥಾನದಲ್ಲಿರಿಸಿದೆ.ಶಾಸಕ ಕೆ.ಎಸ್.ಆನಂದ್ ಉತ್ತಮ ಕೆಲಸಗಳನ್ನು ಮಾಡುತ್ತಾ ಕ್ಷೇತ್ರದಲ್ಲಿ ಹೆಸರು ಗಳಿಸಿದ್ದು ಅದರಂತೆ ಪಟ್ಟಣದಲ್ಲಿನ ಮಹಾತ್ಮ ಗಾಂಧಿ ವೃತ್ತದ ಬಳಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ, ಸಂಗೊಳ್ಳಿರಾಯಣ್ಣ ಪ್ರತಿಮೆ ಹಾಗೂ ಕುರುಬರ ಸಂಘದ ಮುಂಭಾಗದಲ್ಲಿ ಕನಕದಾಸರ ಪ್ರತಿಮೆ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಅದರಂತೆ ಬಿ.ಕೋಡಿಹಳ್ಳಿ ರಸ್ತೆ ಮುಂಭಾಗದಲ್ಲಿ ಬಸವೇಶ್ವರ ಪುತ್ತಳಿಗೂ ಶೀಘ್ರ ಭೂಮಿ ಪೂಜೆ ನಡೆಯಲಿದೆ.ಇಂತಹ ಉತ್ತಮ ಕಾಮಗಾರಿ ಮಾಡುತ್ತಿರುವ ಶಾಸಕ ಆನಂದ್ ಗೆ ದೇವರು ಇನ್ನಷ್ಟು ಉತ್ತಮ ಕೆಲಸ ಮಾಡುವ ಅವಕಾಶ ಕಲ್ಪಿಸಲಿ ಎಂದು ಶುಭ ಹಾರೈಸಿದರು.ಶಾಸಕ ಕೆ.ಎಸ್.ಆನಂದ್ ಮಾತನಾಡಿ, ಮಹನೀಯರ ಪ್ರತಿಮೆ ನಿರ್ಮಾಣ ಕಾರ್ಯದಲ್ಲಿ ಭಾಗವಹಿಸಿರುವುದು ಸಂತಸ ತಂದಿದೆ. ಮುಂದಿನ ದಿನಗಳಲ್ಲಿ ಬೀರೂರಿನ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡುತ್ತೇನೆ ಎಂದರು.ಕಾರ್ಯಕ್ರಮದಲ್ಲಿ ಪುಷ್ಪಮಲ್ಲಿಕಾರ್ಜುನ್, ಕುರುಬ ಸಮಾಜದ ಅಧ್ಯಕ್ಷ ಎಸ್.ಎಚ್.ತಿಮ್ಮಯ್ಯ, ಕೆ.ಎಚ್.ಕರಿಯಪ್ಪ, ಬಿ.ಪಿ.ನಂಜುಂಡಪ್ಪ. ಜಿಪಂ ಮಾಜಿ ಸದಸ್ಯ ಬಿ.ಪಿ.ನಾಗರಾಜ್, ಗಂಟೆ ಕುಮಾರ್, ಎಲ್.ಚಂದ್ರಶೇಖರ್, ಉಮಾಶಂಕರ್, ಸುರೇಶ್, ಪುರಸಭೆ ಮಾಜಿ ಅಧ್ಯಕ್ಷ ಬಿ.ಕೆ.ಶಶಿಧರ್, ಪ್ರವೀಣ್, ಯತೀಶ್, ಮರುಳಸಿದ್ದಪ್ಪ, ಎಚ್.ಹಾಲಪ್ಪ, ಪುರಸಭೆ ಮುಖ್ಯಾಧಿಕಾರಿ ಜಿ.ಪ್ರಕಾಶ್, ಪುರಸಭೆ ಮಾಜಿ ಅಧ್ಯಕ್ಷೆ ಸವಿತಾರಮೇಶ್, ಜ್ಯೋತಿ ಸಂತೊಷ್ ಕುಮಾರ್ ಸೇರಿದಂತೆ ಮತ್ತಿತರ ಕುರುಬ ಸಮಾಜದ ಮುಖಂಡರು ಇದ್ದರು.13 ಬೀರೂರು 2ಬೀರೂರು ಪಟ್ಟಣದಲ್ಲಿ ಶುಕ್ರವಾರ ರಾಷ್ಟ್ರೀಯ ಹೆದ್ದಾರಿ ಅಭಿಷೇಕ್ ಟಿಂಬರ್ ಮುಂಭಾಗದಲ್ಲಿ ಕುರುಬ ಸಮಾಜದಿಂದ ನಿರ್ಮಾಣವಾಗುತ್ತಿರುವ ಸಂಗೊಳ್ಳಿರಾಯಣ್ಣನ ಪ್ರತಿಮೆ ನಿರ್ಮಾಣ ಭೂಮಿಪೂಜೆಯಲ್ಲಿ ಶಾಸಕ ಕೆ.ಎಸ್.ಆನಂದ್, ಮಾಜಿ ಶಾಸಕ ಕೆ.ಬಿ.ಮಲ್ಲಿಕಾರ್ಜುನ್, ಕುರುಬ ಸಮಾಜದ ಅಧ್ಯಕ್ಷ ಎಸ್.ಎಚ್.ತಿಮ್ಮಯ್ಯ ಮತ್ತಿತರರು ಪಾಲ್ಗೊಂಡಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.