ನಮ್ಮ ಸಂವಿಧಾನಮ ನಮ್ಮ ಹೆಮ್ಮೆ: ಮಲ್ಲಿಕಾರ್ಜುನ ಮೇಟಿ

KannadaprabhaNewsNetwork |  
Published : Nov 27, 2026, 01:15 AM IST
ಯಾದಗಿರಿ ನಗರದ ಡಿ. ದೇವರಾಜ ಅರಸ್ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆ (ಕನ್ನಡ ಮಾಧ್ಯಮ) ಯಾದಗಿರಿಯಲ್ಲಿ ಗುರುವಾರ ಸಂವಿಧಾನ ಸಮರ್ಪಣಾ ದಿನಾಚರಣೆಯ ಪ್ರಯುಕ್ತ ಪ್ರಾರ್ಥನಾ ಸಭೆಯಲ್ಲಿ ಡಾ. ಬಿ. ಆರ್. ಅಂಬೇಡ್ಕರ್ ಅವರ ಛದ್ಮವೇಷದೊಂದಿಗೆ ಹಾಗೂ ವಿದ್ಯಾರ್ಥಿಗಳ ನೃತ್ಯದೊಂದಿಗೆ ಆಚರಿಸಲಾಯಿತು. | Kannada Prabha

ಸಾರಾಂಶ

ಯಾದಗಿರಿ ನಗರದ ಡಿ. ದೇವರಾಜ ಅರಸ್ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆ (ಕನ್ನಡ ಮಾಧ್ಯಮ) ಗುರುವಾರ ಸಂವಿಧಾನ ಸಮರ್ಪಣಾ ದಿನಾಚರಣೆಯ ಪ್ರಯುಕ್ತ ಪ್ರಾರ್ಥನಾ ಸಭೆಯಲ್ಲಿ ಡಾ. ಬಿ ಆರ್ ಅಂಬೇಡ್ಕರ್ ಅವರ ಛದ್ಮವೇಷದೊಂದಿಗೆ ಹಾಗೂ ವಿದ್ಯಾರ್ಥಿಗಳ ನೃತ್ಯ ಪ್ರದರ್ಶನಗೊಂಡಿತು.

ಕನ್ನಡಪ್ರಭ ವಾರ್ತೆ ಯಾದಗಿರಿ

ಯಾದಗಿರಿ ನಗರದ ಡಿ. ದೇವರಾಜ ಅರಸ್ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆ (ಕನ್ನಡ ಮಾಧ್ಯಮ) ಗುರುವಾರ ಸಂವಿಧಾನ ಸಮರ್ಪಣಾ ದಿನಾಚರಣೆಯ ಪ್ರಯುಕ್ತ ಪ್ರಾರ್ಥನಾ ಸಭೆಯಲ್ಲಿ ಡಾ. ಬಿ ಆರ್ ಅಂಬೇಡ್ಕರ್ ಅವರ ಛದ್ಮವೇಷದೊಂದಿಗೆ ಹಾಗೂ ವಿದ್ಯಾರ್ಥಿಗಳ ನೃತ್ಯ ಪ್ರದರ್ಶನಗೊಂಡಿತು.

ಕಾರ್ಯಕ್ರಮದ ಕುರಿತು ಡಿಡಿಯು ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತ ಅಧಿಕಾರಿ ಮಲ್ಲಿಕಾರ್ಜುನ ಮೇಟಿ ಹಾಗೂ ಕನ್ನಡ ಮಾಧ್ಯಮ ಶಾಲೆಯ ಮುಖ್ಯಸ್ಥ ವೆಂಕಟೇಶ ಪೂಜಾರಿ ಹಾಗೂ ಶಿಕ್ಷಕರಾದ ಪ್ರಭು ಮೈಲಾರಿ ಹಾಗೂ ಎಚ್. ಪಿ. ವಂದನಾ, ವಿದ್ಯಾರ್ಥಿಗಳಾದ ಪರಶುರಾಮ ಹಾಗೂ ನಿಂಗರಾಜ ಸಹಿತ ಇತರರು ಮಾತನಾಡಿದರು.

ಪ್ರತಿ ವರ್ಷ ನ.26ರಂದು ಸಂವಿಧಾನ ದಿನ (ಸಂವಿಧಾನ ಸಮರ್ಪಣಾ ದಿನ/ರಾಷ್ಟ್ರೀಯ ಕಾನೂನು ದಿನ) ಆಚರಿಸಲಾಗುತ್ತದೆ. 1949ರ ನ. 26ರಂದು ಭಾರತದ ಸಂವಿಧಾನ ಸಭೆಯು ಭಾರತದ ಸಂವಿಧಾನವನ್ನು ಅಧಿಕೃತವಾಗಿ ಅಂಗೀಕರಿಸಿದ ನೆನಪಿಗಾಗಿ ಈ ದಿನವನ್ನು ಆಚರಿಸಲಾಗುತ್ತದೆ. ಸಂವಿಧಾನ ರಚನೆಯಲ್ಲಿ ಕರಡು ಸಮಿತಿಯ ಅಧ್ಯಕ್ಷರಾಗಿದ್ದ ಡಾ. ಬಿ ಆರ್ ಅಂಬೇಡ್ಕರ್ ಅವರ ಕೊಡುಗೆ ಅಪಾರವಾಗಿದ್ದು, ಅವರನ್ನು ಸಂವಿಧಾನದ ಶಿಲ್ಪಿ ಎಂದು ಕರೆಯಲಾಗುತ್ತದೆ. ನಾಗರಿಕರಲ್ಲಿ ಸಾಂವಿಧಾನಿಕ ಮೌಲ್ಯಗಳು, ನ್ಯಾಯ, ಸಮಾನತೆ, ಸ್ವಾತಂತ್ರ್ಯ ಮತ್ತು ಬಂಧುತ್ವದ ಅರಿವನ್ನು ಮೂಡಿಸುವುದು ಈ ದಿನದ ಮುಖ್ಯ ಉದ್ದೇಶವಾಗಿದೆ ಎಂದರು.

ಡಿಡಿಯು ಕನ್ನಡ ಮಾಧ್ಯಮ ಶಾಲೆಯ ಮುಖ್ಯಸ್ಥ ವೆಂಕಟೇಶ ಪೂಜಾರಿ, ಹಾಗೂ ಡಿಡಿಯು ಬಾಲಕರ ವಸತಿ ನಿಲಯದ ಮೇಲ್ವಿಚಾರಕ ನಿಂಗಣ್ಣ ಹೊಸಮನಿ, ಶಿಕ್ಷಕರಾದ ಕವಿತಾ ಪಾಟೀಲ್, ಹುಚ್ಚಪ್ಪ ದೇವರಗೋನಾಲ, ಪ್ರಭು ಮೈಲಾರಿ, ನಸರೀನ್ ಬೇಗಂ, ಮಹಮ್ಮದ್ ಸೌದಾಗರ, ಎಚ್. ಪಿ. ವಂದನಾ, ನಿರ್ಮಲಾ ಬೀಳೂರ, ಸಾವಿತ್ರಿ ಎಮ್ ಹಾಗೂ ವಿದ್ಯಾರ್ಥಿ ವಿದ್ಯಾರ್ಥಿನಿಯರು, ಯಲ್ಲಮ್ಮ ಆಯಾ ಸೇರಿದಂತೆ ಇತರರು ಉಪಸ್ಥಿತರಿದ್ದರು. ಪ್ರಭು ಮೈಲಾರಿ ಕಾರ್ಯಕ್ರಮ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಂವಿಧಾನ ಆಶಯಗಳ ಅರಿತು ಪಾಲಿಸುವುದು ಪ್ರತಿ ಪ್ರಜೆಯ ಕರ್ತವ್ಯ-ನಾಗರಾಜ
ಸಭೆ ಅರ್ಧಕ್ಕೆ ಎದ್ದು ಹೋದ ಟಿ.ಎಂ. ಶಾಹಿದ್ ತೆಕ್ಕಿಲ್